ಪ್ರಾಮಾಣಿಕತೆ ಮುಖವಾಡ ಹಾಕಿಕೊಂಡಿರುವ ಅಪ್ರಮಾಣಿಕ ಶಾಸಕ : ಡಾ. ಆರ್.ಎಂ.ಎಂ.

ಶಿವಮೊಗ್ಗ: ಶಾಸಕ ಕಿಮ್ಮನೆ ರತ್ನಾಕರ್ ಸಜ್ಜನ ಮತ್ತು ಪ್ರಾಮಾಣಿಕ ಎಂಬ ಮುಖವಾಡ ಹಾಕಿಕೊಂಡಿ ರುವ ರಾಜಕಾರಣಿ. ಕ್ಷೇತ್ರದ ರೈತರ ಸಮಸ್ಯೆಗಳಿಗೆ ಸ್ವಲ್ಪವೂ ಸ್ಪಂದಿಸಿಲ್ಲ ಎಂದು ಜೆಡಿಎಸ್ ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಟೀಕಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರು, ಪಾರಂ ಪರಿಕ ಅರಣ್ಯ ವಾಸಿಗಳಿಗೆ ಭೂಮಿ ಮಂಜೂರು ಮಾಡಿಸಲು ಕಿಮ್ಮನೆ ರತ್ನಾಕರ್ ವಿಫಲರಾಗಿದ್ದಾರೆ. ಇವರ ಬೆಂಬಲದಿಂದಾಗಿ ಅಕ್ರಮ ಮರಳು ದಂಧೆ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆದಿದೆ. ಇದರ ಬಗ್ಗೆ ಸಿಬಿಐ ತನಿಖೆ ಯಾಗಬೇಕೆಂದು ಒತ್ತಾಯಿಸಿದರು.
೯೪ಸಿ ಹಾಗೂ ೯೪ ಸಿಸಿ ಅರ್ಜಿ ವಿಲೇವಾರಿಯಲ್ಲೂ ಪ್ರಗತಿ ಸಾಧಿಸಿಲ್ಲ. ಪಕ್ಕದ ಸಾಗರ ಮತ್ತು ಸೊರಬ ತಾಲೂ ಕಿನ ಶಾಸಕರು ಭಾಗಶ ಅರ್ಜಿ ವಿಲೇ ವಾರಿ ಮಾಡಿಸಿದ್ದರೆ ಇಲ್ಲಿ ಮಾತ್ರ ಜನರಿಗೆ ಅನ್ಯಾಯವಾಗಿದೆ ಎಂದ ಅವರು, ಫಾರಂ ೫೦ರಡಿ ಸಲ್ಲಿಸಿದ ೧೦,೨೩೧ ಬಗರ್ ಹಕುಂ ಅರ್ಜಿಗಳಲ್ಲಿ ಕೇವಲ ೭೯೨ ಅರ್ಜಿ ಮಾತ್ರ ಸಿಂಧು ವಾಗಿದೆ. ೯೭೦೦ ಅರ್ಜಿ ತಿರಸ್ಕೃತ ವಾಗಿದೆ. ಫಾರಂ ೫೩ಯಲ್ಲಿ ಬಂದ ೧೫೨೪೯ ಅರ್ಜಿ ಗಳಲ್ಲಿ ೨,೬೨೦ ಅರ್ಜಿ ಮಾತ್ರ ಮಂಜೂರಾಗಿದೆ ಎಂದರು.
೯೪ಸಿಯ ೧೭೭೧೯ ಅರ್ಜಿಯಲ್ಲಿ ಕೇವಲ ೨೦೩ ಅರ್ಜಿ ಮಂಜೂರಾಗಿ ೧೩,೦೪೨ ಅರ್ಜಿ ವಜಾ ಆಗಿದೆ. ೯೪ಸಿಸಿಯ ೮೭೨ ಅರ್ಜಿಗಳಲ್ಲಿ ೫೩೨ ವಜಾ ಆಗಿ ೧೩ ಅರ್ಜಿ ಮಂಜೂ ರಾಗಿದೆ. ಕಿಮ್ಮನೆ ಶಾಸಕರಾಗಿ ರೈತರಿಗೆ ಹಾಗೂ ಕೃಷಿ ಕುಟುಂಬಗಳಿಗೆ ಯಾವುದೇ ಅನುಕೂಲವಾಗಿಲ್ಲಎಂದರು.
ಇತ್ತೀಚೆಗೆ ಮರಳು ದಂಧೆಯಲ್ಲಿ ನೂರಾರು ಲಾರಿಗಳೊಂದಿಗೆ ಸಿಕ್ಕಿ ಬಿದ್ದಿದ್ದ ಕಾಂಗ್ರೆಸ್ ಬೆಂಬಲಿಗನನ್ನು ಜಿಲ್ಲಾ ರಕ್ಷಣಾಧಿಕಾರಿಗಳೇ ವಶಕ್ಕೆ ಪಡೆದಿದ್ದರು. ಆತನನ್ನು ಮಾಳೂರು ಠಾಣೆಯಲ್ಲಿ ಇಡಲಾಗಿತ್ತು. ಅದುವರೆಗೂ ಠಾಣೆಗೆ ಹೋಗದ ಕಿಮ್ಮನೆ, ಅಂದು ಸ್ವತಃ ಮಾಳೂರು ಠಾಣೆಗೆ ಹೋಗಿ ಎಫ್ ಐಆರ್ ರದ್ದುಪಡಿಸಿ ಆತ ನನ್ನು ಬಿಡಿಸಿ ಕೊಂಡು ಬಂದಿದ್ದಾರೆ ಎಂದರು.
ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಮರಳು ಅಕ್ರಮವಾಗಿ ಹೋಗುತ್ತಿದೆ. ಆದರೆ ತೀರ್ಥಹಳ್ಳಿ ಜನತೆಗೆ ಮರಳು ಇಲ್ಲ. ಕಾಂಗ್ರೆಸ್ ಸರ್ಕಾರವೇ ಅಕ್ರಮ ಮರಳು ದಂಧೆಗೆ ನಿಂತಿದೆ. ಕಿಮ್ಮನೆ ಶಿಕ್ಷಣ ಸಚಿವರಾದಾಗ ಟೆಂಡರ್ ಒಂದಕ್ಕೆ ಮುಂಗಡವಾಗಿ ಶೇ.೩೦ರಷ್ಟು ಹಣ ನೀಡಿದ್ದು ಇದರಲ್ಲಿ ಭ್ರಷ್ಟಾಚಾ ರದ ವಾಸನೆ ಇದೆ. ಅಲ್ಲದೆ ಅತ್ಯಂತ ಕಳಪೆ ಗುಣಮಟ್ಟದ ಸೈಕಲ್ ವಿತರಣೆ ಮಾಡಿದ್ದು, ಗುಜರಿ ಯೊಂದರಲ್ಲಿ ನೂರಾರು ಹಾಳಾದ ಸೈಕಲ್‌ಗಳು ಪತ್ತೆಯಾಗಿದ್ದು ಇದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪ ಗಳು ಯಾವುದು ಸಾಬೀತಾಗಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ, ನನ್ನ ಮೇಲೆ ಐಟಿ ದಾಳಿಯನ್ನು ಮಾಡ ಲಾಗಿತ್ತು. ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬೆಂಬಲಿ ಗರನ್ನು ಕಡೆಗಣಿಸಲಾಯಿತು. ಆದ್ದ ರಿಂದ ಆ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರಿದ್ದೇನೆ. ಮುಂದಿನ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಜನತೆ ಉತ್ತಮ ವ್ಯಕ್ತಿಯಾಗಿ ರುವ ನನ್ನನ್ನು ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ಎನ್. ನಿರಂಜನ್, ಶಿಮುಲ್ ನಿರ್ದೇಶಕ ಕೆ.ಎಲ್.ಜಗದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದುರ್ಗಪ್ಪಗೌಡ, ಜಗದೀಶ್, ಮತ್ತಿತರರಿದ್ದರು.