ಬೆಂಗಳೂರು: ಮಾಜಿ ಸಚಿವ ಹೆಚ್‌ಡಿ ರೇವಣ್ಣ ಇದೇ ಪ್ರಥಮ ಬಾರಿ ಪ್ರಜ್ವಲ್ ರೇವಣ್ಣನ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.
ಅತ್ಯಾಚಾರ ಪ್ರಕರಣಗಳಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದಾರೆ. ಸೋಮವಾರ ದಿನದಂದು ತಾಯಿ ಭವಾನಿ ರೇವಣ್ಣ ಮಗನನ್ನು ನೋಡಲು ಬಂದ ನಂತರ ಈಗ ತಂದೆ ಹೆಚ್‌ಡಿ ರೇವಣ್ಣ ಬಂದಿದ್ದಾರೆ.
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ರೇವಣ್ಣ, ನಾನು ಪ್ರಜ್ವಲ್ ಭೇಟಿಗೆ ಹೋಗುವುದಿಲ್ಲ. ನಮಗೆ ದೇವರು ಮತ್ತು ಕಾನೂನುಗಳೇ ನಮಗೆ ದಾರಿ ಎಂದಿದ್ದರು.
ನಮ್ಮ ತಂದೆ ದೇವೇಗೌಡರು ಒಂದು ತಿಂಗಳಿನಿಂದ ನೋವು ಅನುಭವಿಸುತ್ತಲೇ ಇದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಈ ತರದ ಘಟನೆಗಳನ್ನು ಬಹಳ ನೋಡಿದ್ದೇನೆ ಎಂದು ಹೇಳಿದ್ದರು.