Sunday, September 8, 2024
Google search engine
Homeಅಂಕಣಗಳುಲೇಖನಗಳುಬಹುಸಂಸ್ಕೃತಿಯನ್ನು ಗೌರವಿಸಿ- ಪ್ರತಿಧ್ವನಿಸಿ

ಬಹುಸಂಸ್ಕೃತಿಯನ್ನು ಗೌರವಿಸಿ- ಪ್ರತಿಧ್ವನಿಸಿ

ಶಿವಮೊಗ್ಗ: ದೇಶದ ಬಹುತ್ವವನ್ನು ಒಡೆಯುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಕಳವಳಕಾರಿಯಾಗಿದ್ದು, ಬಹುಸಂಸ್ಕೃತಿಯನ್ನು ಗೌರವಿಸುವ, ಪ್ರತಿಧ್ವನಿಸುವ ಧ್ವನಿಗಳು ಗಟ್ಟಿಯಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಂದು ನಗರದ ಡಿಎಆರ್ ಮೈದಾನದಲ್ಲಿ ೭೧ನೆಯ ಸ್ವಾತಂತ್ರ್ಯೋತ್ರ್ಯೊತ್ಸವದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ದೂರದರ್ಶಿತ್ವದ ನಮ್ಮ ಸಂವಿಧಾನ, ಎಲ್ಲಾ ಧರ್ಮ, ಜಾತಿ, ಪಂಗಡ ಗಳಿಗೆ ಸಮಾನ ಅವಕಾಶ ಕಲ್ಪಿಸಿದೆ. ಈ ನೆಲದಲ್ಲಿ ಯಾವುದೇ ಸಂಸ್ಕೃತಿ ಮೇಲೂ ಅಲ್ಲ, ಕೀಳೂ ಅಲ್ಲ. ಸಂವಿಧಾನದ ಮುಂದೆ ಪ್ರತಿಯೊಬ್ಬರೂ ಸಮಾನರು ಎಂದ ಅವರು, ಪ್ರತಿಯೊಬ್ಬರ ಆಚಾರ, ವಿಚಾರ, ಸಂಸ್ಕೃತಿ, ಆಹಾರ ಪದ್ದತಿ ಯನ್ನು ಪರಸ್ಪರ ಗೌರವಿಸಬೇಕು. ಆ ಮೂಲಕ ದೇಶದ ಭವ್ಯ ಸಾಮಾಜಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದರು.
ನಮ್ಮ ಹಬ್ಬ ಹರಿದಿನಗಳು ಎಲ್ಲೆಡೆ ಸಂತಸ, ಸಂಭ್ರಮ, ಪಸರಿಸುವ ಸಂದರ್ಭಗಳಾಗಬೇಕೇ ಹೊರತು ಪರಸ್ಪರ ಅಪನಂಬಿಕೆ, ದ್ವೇಷ, ಹಿಂಸಾ ಚಾರವನ್ನಲ್ಲ. ಪರಸ್ಪರ ನಂಬಿಕೆ, ಸಹೋದರತ್ವ, ಸಹಿಷ್ಣುತೆ, ಸಾಮರಸ್ಯವನ್ನು ಕಾಪಾಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಎಲ್ಲರೂ ಕೈಗೊಳ್ಳಬೇಕು. ಅಸಂಖ್ಯಾತ ಹೋರಾಟ ಗಾರರ ಫಲ ಮತ್ತು ಹೋರಾಟದ ಫಲವಾಗಿ ದೊರೆತಿರುವ ಸ್ವಾತಂತ್ರ್ಯದ ಸವಿಯನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಇದಕ್ಕ್ಕಾಗಿ ನೂರಾರು ಮಹಾತ್ಮರನ್ನು ಸ್ಮರಿಸಬೇಕೆಂದರು.
ಜಿಲ್ಲೆಯಲ್ಲಿ ಭೂರಹಿತರಿಗೆ ಭೂಮಿ, ಸೂರುರಹಿತರಿಗೆ ಸೂರು ಕಲ್ಪಿಸಲು ಸರ್ಕಾರ ಕಟಿಬದ್ಧವಾಗಿದೆ. ಜಿಲ್ಲೆಯಲ್ಲಿ ನಾಲ್ಕೂವರೆ ವರ್ಷದಲ್ಲಿ ೫೨,೭೩೯ನ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗಿದೆ. ನಮೂನೆ ೫೦ರ ಅಡಿ ೧೭,೪೭೮, ೯೪ ಸಿ ಅಡಿ ೮,೬೦೪ ಮತ್ತು ೯೪ ಸಿಸಿ ಅಡಿ ೧,೫೯೮ ಹಕ್ಕುಪತ್ರ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರು ೯ ಸ್ವಾತಂತ್ರ್ಯ ಯೋಧರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಮತ್ತು ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು.
ಸುಮಾರು ೪೫೦೦ ಮಕ್ಕಳು ಏಕಕಾಲದಲ್ಲಿ ಸಾಮೂಹಿಕ ನೃತ್ಯ ಪ್ರದರ್ಶಿಸಿ ನೆರೆದವರ ಮನಸೂರೆಗೊಂಡರು. ಆನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರು, ಎಂಲ್‌ಸಿ ಆರ್. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್. ಜಿಪಂ ಸಿಇಒ ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಸೇರಿದಂತೆ ಎಲ್ಲ ಇಲಾಖಾಧಿಕಾರಿ ಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments