ಜನಪ್ರತಿನಿಧಿ ಕಾಯ್ದೆ ತಿದ್ದುಪಡಿ ಮಸೂದೆ ಪರಿವರ್ತನೆಗೆ ನಾಂದಿ ಹಾಡಲಿದೆ

ಲೇಖನ : ಬಿ.ನಾಗರಾಜ್

ಜನಪ್ರತಿನಿಧಿ ಕಾಯ್ದೆ ತಿದ್ದುಪಡಿ ಮಸೂದೆ ಪರಿವರ್ತನೆಗೆ ನಾಂದಿ ಹಾಡಲಿದೆ 

ಮುಂದಿನ ಅಧಿವೇಶನದಲ್ಲಿ ವರುಣ್‌ಗಾಂಧಿ ಅವರು ಮಂಡಿಸಲು ನಿರ್ಧರಿಸಿರುವ ರೆಪ್ರೆಂಜಟೇಷನ್ ಆಪ್ ದಿ ಪೀಪಲ್ (ತಿದ್ದುಪಡಿ) ಮಸೂದೆ ೨೦೧೬ ತಾವು ಆರಿಸಿದ ಜನ ಪ್ರತಿನಿಧಿಗಳು ತೃಪ್ತಿಕರವಾಗಿ ಕಾರ್ಯ ನಿರ್ವಹಿಸದೇ ಹೋದಲ್ಲಿ ಅವರನ್ನು ಹಿಂದಕ್ಕೆ ಕರೆಯಿಸುವ ಅಧಿಕಾರವನ್ನು ಜನರ ಕೈಗೆ ಒದಗಿಸುವ ಉದ್ದೇಶವುಳ್ಳದ್ದಾಗಿದೆ. ಮಸೂದೆಯು ಸೂಕ್ತ ಪರಿಷ್ಕಾರಗಳ ಮೂಲಕ ಅಂಗೀಕಾರಗೊಂಡರೆ ಜನಪ್ರತಿನಿಧಿಗಳನ್ನು ಸರಿದಾರಿಗೆ ತರಲು ಸಹಕಾರಿಯಾಗುತ್ತದೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದ್ಯ ಮತದಾರರಿಗೆ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ಅಧಿಕಾರ ಮಾತ್ರವಿದ್ದು, ಆರಿಸಿ ಕಳುಹಿಸಿದ ನಾಯಕರು, ಕರ್ತವ್ಯದಲ್ಲಿ ವಿಫಲ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದಲ್ಲಿ ವಾಪಸ್ ಕರೆಯಿಸಿಕೊಳ್ಳಬೇಕು. ಇಂತಹ ಅಧಿಕಾರ ಮತದಾರರಿಗೆ ಅತ್ಯಗತ್ಯ ಎಂಬ ಮಾತು ಬಹಳ ವರ್ಷಗಳಿಂದಲೂ ಕೇಳಿ ಬರುತ್ತಿದ್ದು, ಇದೀಗ ಪಾರ್ಲಿಮೆಂಟ್‌ನಲ್ಲಿ ಸಂಸದ ವರುಣ್‌ಗಾಂಧಿ ಮಸೂದೆ ಮಂಡಿಸಲು ಹೊರಟಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ.

ಮುಂದಿನ ಅಧಿವೇಶನದಲ್ಲಿ ವರುಣ್‌ಗಾಂಧಿ ಅವರು ಮಂಡಿಸಲು ನಿರ್ಧರಿಸಿರುವ ರೆಪ್ರೆಂಜಟೇಷನ್ ಆಪ್ ದಿ ಪೀಪಲ್ (ತಿದ್ದುಪಡಿ) ಮಸೂದೆ ೨೦೧೬ ತಾವು ಆರಿಸಿದ ಜನ ಪ್ರತಿನಿಧಿಗಳು ತೃಪ್ತಿಕರವಾಗಿ ಕಾರ್ಯ ನಿರ್ವಹಿಸದೇ ಹೋದಲ್ಲಿ ಅವರನ್ನು ಹಿಂದಕ್ಕೆ ಕರೆಯಿಸುವ ಅಧಿಕಾರವನ್ನು ಜನರ ಕೈಗೆ ಒದಗಿಸುವ ಉದ್ದೇಶವುಳ್ಳದ್ದಾಗಿದೆ. ಮಸೂದೆಯು ಸೂಕ್ತ ಪರಿಷ್ಕಾರಗಳ ಮೂಲಕ ಅಂಗೀಕಾರಗೊಂಡರೆ ಜನಪ್ರತಿನಿಧಿಗಳನ್ನು ಸರಿದಾರಿಗೆ ತರಲು ಸಹಕಾರಿಯಾಗುತ್ತದೆ.

ಆ ಜನರಿಂದ ಆಯ್ಕೆಯಾದ ಶಾಸಕ ಅಥವಾ ಸಂಸದ ಪಕ್ಷಾಂತರ , ಕ್ರಿಮಿನಲ್ ಅಪರಾಧದಲ್ಲಿ ಶಿಕ್ಷೆಯಂತಹ ಸಂದರ್ಭಗಳ ಹೊರತಾಗಿ ಪೂರ್ಣ ಅವಧಿಯಲ್ಲಿ ಅಧಿಕಾರದಲ್ಲಿರುತ್ತಾನೆ. ಆಕೆ/ ಆತ ಶಾಸಕ ಅಥವಾ ಸಂಸದರಾಗಿ ತನ್ನ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು ಅಥವಾ ವಿಫಲವಾಗಲಿ, ಅವನ ಜನಪ್ರತಿನಿಧಿತ್ವ ಅವಧಿ ಮುಗಿಯವವರಿಗೆ ನಿರ್ಬಂಧಿತವಾಗಿರುತ್ತದೆ. ಒಂದರ್ಥದಲ್ಲಿ ಇದು ಮತದಾರರ ಪಾಲಿಗೆ ಅಪೂರ್ಣ ಸ್ವರೂಪದ ಹಕ್ಕಾಗಿರುತ್ತದೆ.

ಜನಪ್ರತಿನಿಧಿಯಾದವ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದಾದರೆ ಅವರನ್ನು ಹುದ್ದೆಯಿಂಂದ ಕೆಳಕ್ಕಿಳಿಸುವ ಅಧಿಕಾರ ಈಗಿನ ಮಸೂದೆಯಲ್ಲಿ ಇಲ್ಲ. ವರುಣ್‌ಗಾಂದಿ ಮಂಡಿಸಲು ಉದ್ದೇಶಿಸಿರುವ ಮಸೂದೆಯ ಆಯ್ಕೆಗೊಂಡ ಜನಪ್ರತಿನಿದಿಯ ಕಾರ್ಯ ನಿರ್ವಹಣೆ ಆತನನ್ನು ಆರಿಸಿದ ಶೇ.೭೫ರಷ್ಟು ಮತದಾರರಿಗೆ ತೃಪ್ತಿಕರವಾಗಿಲ್ಲ ಎಂದು ಕಂಡು ಬಂದರೆ ಆತನನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಅಂಶವನ್ನು ಪ್ರಧಾನವಾಗಿ ಹೊಂದಿದೆ.

ಆಡಳಿತ ನಿರ್ವಹಣೆ, ಸರ್ಕಾರಿ ಯಂತ್ರದಲ್ಲಿ ಜನರ ಅಂದರೆ ಮತದಾರರ ನಿಯಂತ್ರಣವನ್ನು ಹೆಚ್ಚಿಸುವ ಮಸೂದೆಯ ಉದ್ದೇಶ ಒಳ್ಳೆಯದೇ ಆಗಿದೆ. ಈ ಮಸೂದೆಯು ಕಾನೂನಾಗಿ ಅಂಗೀಕೃತಗೊಂಡರೆ ‘ಪ್ರಜೆಗಳೇ ಪ್ರಭುಗಳು’ ಎಂಬ ವಾಕ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ಆದರೆ ಈ ಮಸೂದೆಯು ಅದರ ಮೂಲೋದ್ದೇಶ ಸಹಿತ ಅಂಗೀಕಾರಗೊಳ್ಳಲು ಶಕ್ತವಾಗುತ್ತದೆಯೇ ಎಂಬುದು ಮೊದಲ ಪ್ರಶ್ನೆ, ಏಕೆಂದರೆ ತಮ್ಮ ವೇತನ, ಭತ್ಯೆ ಹೆಚ್ಚಳದಂತಹ ವಿಚಾರಗಳ ಮಾತ್ರ ಒಗ್ಗೂಡುವ , ಸಾರ್ವಜನಿಕ ಹಿತದ ವಿಚಾರ ಬಂದಾಗ ಕಡೆಗಣಿಸುವ ಚಾಳಿ ಇರುವ ರಾಜಕಾರಣಿಗಳು ತಮ್ಮ ಸ್ವಾಭಿಮಾನಕ್ಕೆ ಕುತ್ತಾಗಬಲ್ಲ ಇಂತಹ ಮಸೂದೆಯನ್ನು ಅಂಗೀಕರಿಸುವುದು ಸುಲಭ ಸಂಗತಿಯಲ್ಲ.
ಇನ್ನೊಂದು ಸಂಗತಿ ಎಂದರೆ, ಯಾವುದೇ ಸಂಸದ ಅಥವಾ ಶಾಸಕನ ವಿರುದ್ಧ ಈ ಮಸೂದೆಯು ದುರ್ಬಳಕೆಯಾಗಲು ಸಾಧ್ಯವಾಗದಂತೆ ತಿದ್ದುಪಡಿ ರೂಪುಗೊಳ್ಳುವ ಅಗತ್ಯವಿದೆ.

ಮೂರನೆಯದಾಗಿ, ಜನಪ್ರತಿನಿಧಿಯೊಬ್ಬ ಮತದಾರರಿಂದ ಕೆಳಕ್ಕೆ ಇಳಿಸಲ್ಪಟ್ಟರೆ, ಖಾಲಿಯಾದ ಆ ಸ್ಥಾನವನ್ನು ಭರ್ತಿ ಮಾಡುವುದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸೂಕ್ತ ಪರಿಷ್ಕಾರಗಳನ್ನು ನಡೆಸಿ ಮಸೂದೆಯನ್ನು ರೂಪಿಸಬೇಕಾದ ಹೊಣೆಗಾರಿಕೆ ಅತ್ಯಂತ ಮುಖ್ಯ.

ಏನೇ ಆಗಲಿ, ಚುನಾವಣೆ ಪ್ರಕ್ರಿಯೆ ಸಹಿತ ಎಲ್ಲ ಪ್ರಕ್ರಿಯೆಗಳು ತಂತ್ರ eನದ ಆಧಾರದಲ್ಲಿ ಬದಲಾವಣೆ ಕಾಣಲಿರುವ ಮುಂದಿನ ದಿನಗಳಲ್ಲಿ ಜನಪ್ರತಿನಿಧಿ ಕಾಯ್ದೆಯ ಲ್ಲಿಯೂ ಇಂತಹುದೊಂದು ಪರಿ ವರ್ತನೆ ಅಗತ್ಯ ವಿದೆ. ದೇಶದ ಹಾಗೂ ಮತದಾರರ ಹಿತದೃಷ್ಟಿ ಯಿಂದ, ಒಳ್ಳೆಯ ಆಡಳಿತ ನಿರ್ವ ಹಣೆಯ ದೃಷ್ಟಿಯಿಂದ ಅಗತ್ಯವಾದದ್ದೇ ಆಗಿದೆ. ಜನಪ್ರತಿನಿಧಿ ತಿದ್ದುಪಡಿ ಮಸೂದೆಯ ಸ್ವತಂತ್ರ ಮಸೂದೆ. ವಿಜೃಂಭಣೆಯ ವಿವಾಹಗಳನ್ನು ತಡೆಯುವ ಉದ್ದೇಶದ ಇನ್ನೊಂದು ಸ್ವತಂತ್ರ ಮಸುದೆಯೂ ಕೂಡಾ ಮಂಡನೆಗೆ ಸಿದ್ಧವಾಗಿದ್ದು, ದೇಶದ ಜನಪ್ರತಿನಿಧಿಗಳು ನಿಧಾನವಾಗಿ ಯಾದರೂ ಬದಲಾಗುತ್ತಿರುವ , ಹೊಸ ತಳಿಯ ಜನಪ್ರತಿನಿಧಿಗಳು ಉದಯಿಸುತ್ತಿರುವ ಈ ಪರಿವರ್ತನೆ ಕೂಡಾ ಭರವಸೆ ಹುಟ್ಟಿಸುವಂತಹದ್ದಾಗಿದೆ.