Wednesday, September 18, 2024
Google search engine
Homeಇ-ಪತ್ರಿಕೆತುಂಗಾ ಜಲಾಶಯದ ಹೂಳು ತೆಗೆಸಿ: ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌ ಒತ್ತಾಯ

ತುಂಗಾ ಜಲಾಶಯದ ಹೂಳು ತೆಗೆಸಿ: ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌ ಒತ್ತಾಯ

ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯದ ಹೂಳು ಮತ್ತು ಮರಳು ತೆಗೆಸಿ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು  ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ಕೆ.ಬಿ.ಪ್ರಸನ್ನ ಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1952ರಲ್ಲಿ ನಿರ್ಮಿಸಿಲ್ಪಟ್ಟಿರುವ ತುಂಗಾ ಜಲಾಶಯವು 3.24 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಹೊಂದಿದೆ. ಹೊಸಪೇಟೆಯ ತುಂಗಾ ಭದ್ರ ಜಲಾಶಯವು 105 ಟಿಎಂಸಿ ನೀರು ಸಂಗ್ರಹಣೆ, ಭದ್ರ ಜಲಾಶಯವು 71.25 ಟಿಎಂಸಿ ನೀರು ಸಂಗ್ರಹಣೆಗಳಿಗೆ ಹೋಲಿಸಿದರೆ ಇದು ತುಂಬ ಸಣ್ಣದು. 22 ಗೇಟುಗಳನ್ನು ಹೊಂದಿರುವ ಇದರ ಒಂದು ಗೇಟನ್ನು ಒಪನ್ ಮಾಡಲಾಗಿಲ್ಲ. ಒಂದು ಗೇಟಿನ ರೋಪ್ ಸಮಸ್ಯೆಯಿಂದ ಒಪನ್ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

೨೦೦೯ರಲ್ಲಿ ಜಲಾಶಯವನ್ನು ಎತ್ತರಿಸಿ ಹೆಚ್ಚಿನ ನೀರು ಸಂಗ್ರಹ ಮಾಡಲಾಯಿತು. ೩.೨೪ ಟಿಎಂಸಿ ನೀರು ಸಂಗ್ರಹಿಸಲಾಗುತ್ತಿದ್ದು, ಅದೇ ರೀತಿ ಭದ್ರಾ ಜಲಾಶಯದಲ್ಲಿ ೭೧.೨೫ ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ೧೯೫೨ರಲ್ಲಿ ಆರಂಭವಾದ ತುಂಗಾ ಜಲಾಶಯದಲ್ಲಿ ಹೂಳು ಮತ್ತು ಮರಳನ್ನು ತೆಗೆದು ೨೦೦೯ರಲ್ಲಿ ಅದನ್ನು ತೆಗೆಯದೇ ಪಕ್ಕದಲ್ಲಿಯೇ ಮತ್ತೊಂದು ಎತ್ತರದ ಹಾಗೂ ೨೨ಗೇಟ್‌ವುಳ್ಳ ಜಲಾಶಯ ನಿರ್ಮಿಸಲಾಗಿತ್ತು. ಈಗ ಜಲಾಶಯದ ಕೆಳಗೆ ಸಾಕಷ್ಟು ಹೂಳು ಮತ್ತು ಮರಳು  ಸಂಗ್ರಹವಾಗಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಹೂಳು ಮತ್ತು ಮರಳು ತೆಗೆಸಿ ಹೆಚ್ಚು ನೀರು ಸಂಗ್ರಹವಾಗಲು ಗಮನಹರಿಸಬೇಕು ಎಂದರು.

ತುಂಗಾಭದ್ರ ಜಲಾಶಯದ ಕ್ರಸ್ಟ್ ಗೇಟ್‌ ವೊಂದು ಮುರಿದು ನೀರು ಪೋಲಾಗುತ್ತಿದೆ. ಇಲ್ಲಿಯದು ಚೈನ್ ಸಮಸ್ಯೆಯೆಂದು ಹೇಳಲಾಗುತ್ತಿದೆ. ಇಂತಹ ಅಸಮಪರ್ಕ ನಿರ್ವಹಣೆಯ ಕಾರಣ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ನೀರಾವರಿ ಅಧಿಕಾರಿಗಳು ಪರಿಶೀಲನೆ ಮಾಡಿ, ಮುಂದೆ ದೊಡ್ಡ ಅನಾಹುತಗಳಾದಂತೆ ತಡೆಯಬೇಕೆಂದು ಸಲಹೆ ನೀಡಿದರು.

ಜಲಾಶಯದ ಹೂಳು ಮತ್ತು ಮರಳು ತೆಗೆಸಿದರೆ ನೀರಿನ ಸಂಗ್ರಹಣೆಯ ಸಾಮರ್ಥ್ಯ ಹೆಚ್ಚುತ್ತದೆ. ಇಂತಹ ಹಲವಾರು ಸಮಸ್ಯೆಗಳನ್ನು ನೀರಾವರಿ ತಜ್ಞರೊಂದಿಗೆ ಚರ್ಚಿಸಿ,  ಸಂಬಂಧಪಟ್ಟ ಇಲಾಖೆಗಳಿಂದ ಎನ್ ಒಸಿ ಪಡೆದು ಮುತುವರ್ಜಿ ವಹಿಸಿ, ರೈತರಿಗೆ  ಧೈರ್ಯ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರು  ಗಮನ ಹರಿಸಬೇಕೆಂದು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular

Recent Comments