ಶಿವಮೊಗ್ಗ : ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳಬೇಕೆಂದು ನೈರುತ್ಯ ಪದವೀಧರ ಕ್ಷೇತ್ರದ ವಿಜೇತ ಅಭ್ಯರ್ಥಿ ಆಯನೂರು ಮಂಜು ನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪ್ರಾಥಮಿಕ ಶಾಲೆಗಳು ಪ್ರಾರಂಭ ವಾಗಿದ್ದು ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿದರು.
ಅತಿಥಿ ಶಿಕ್ಷಕರಿಗೆ ಸರ್ಕಾರ ನೀಡುತ್ತಿ ರುವ ಸಂಬಳ ಅತೀ ಕಡಿಮೆಯಾಗಿದೆ. ಕೇವಲ ೮ ಸಾವಿರ ರೂ. ಮಾತ್ರ ನೀಡುತ್ತಿದೆ. ಇದು ತೀರಾ ಅಲ್ಪವಾ ಗಿದ್ದು, ಅವರನ್ನು ಶೋಷಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ. ಇಂದಿನ ಜೀವನಕ್ಕೆ ಅವಶ್ಯವಿರುವಷ್ಟು ವೇತನವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದವರನ್ನು ಶೈಕ್ಷಣಿಕ ವರ್ಷ ಮುಕ್ತಾಯವಾದ ನಂತರ ಕೈಬಿಡಲಾಗಿದೆ. ಈ ವರ್ಷವೂ ಅವರನ್ನೇ ಮುಂದುವರೆಸುವ ಮೂಲಕ ಉದ್ಯೋಗ ನೀಡಬೇಕು. ಅವರ ಭವಿಷ್ಯವೂ ಆತಂಕಕ್ಕೆ ಸಿಲುಕಬಾರದು ಎಂದು ಹೇಳಿದರು.
ತಮ್ಮ ಎದುರು ಪರಾಭವ ಗೊಂಡ ಕಾಂಗ್ರೆಸ್ ಅಭರ್ಥಿ ಎಸ್.ಪಿ. ದಿನೇಶ್ ಅವರು ನಿನ್ನೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರಿಸಿ, ತಾನು ನೋಂದಣಿ ಮಾಡಿಸಿದ ಮತ ದಾರರೆಲ್ಲರೂ ತನಗೇ ಮತಹಾಕ ಬೇಕು ಎನ್ನುವ ಮನೋಭಾವ ಸರಿಯಲ್ಲ ಎಂದು ಹೇಳಿದರು.
ತೆಂಗಿನ ಮರ ನೆಟ್ಟಿದ್ದು, ನಾನು ಫಲ ಪಡೆದುಕೊಂಡವರು ಬೇರೆಯ ವರು ಎಂಬ ದಿನೇಶ್‌ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆಯನೂರು, ಯಾರ ಜಾಗದಲ್ಲಿ ಗಿಡ ನೆಡಬೇಕೆಂಬುದೇ ದಿನೇಶ್‌ರವರಿಗೆ ತಿಳಿದಿಲ್ಲ. ನಮ್ಮ ತೋಟದಲ್ಲಿ ಗಿಡ ನೆಟ್ಟರೆ ಫಸಲು ಅವರದಾಗುತ್ತದೆಯೇ ಎಂದು ಮಾರ್ಮಿಕವಾಗಿ ನುಡಿದರು.
ತೆಂಗಿನ ಮರ ಹತ್ತಲು ಬಾರದೇ ಇರುವವರು ತೆಂಗಿನ ಸಸಿ ನೆಟ್ಟರೆ ಹೇಗೆ? ಎಂದ ಅವರು, ಬಿಜೆಪಿ ಅಭ್ಯರ್ಥಿ ಜೆಡಿಎಸ್‌ನ ಶಿಕ್ಷಕರ ಅಭ್ಯರ್ಥಿ ಜೊತೆ ಮೈತ್ರಿ ಮಾಡಿ ಕೊಂಡಿದ್ದಾರೆ ಎಂದು ಹೇಳುವ ಬದಲು ತಮ್ಮ ಪಕ್ಷದ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಠೇವಣಿ ಏಕೆ ಕಳೆದುಕೊಂಡರು ಎಂಬುದರ ಬಗ್ಗೆ ದಿನೇಶ್ ಉತ್ತರಿಸಬೇಕೆಂದರು.
ದಿನೇಶ್‌ರವರೇ ಜೆಡಿಎಸ್ ಅಭ್ಯರ್ಥಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಜಗ ಜಾಹೀರಾಗಿರುವಾಗ ತಮ್ಮ ಸೋಲಿಗೆ ಕಾರಣ ಹುಡುಕುವ ನೆಪದಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಫಲಿತಾಂಶ ಬಂದು ನಾಲ್ಕು ದಿನಗಳಾಗಿಲ್ಲ. ಆಗಲೇ ನನ್ನ ಕೆಲಸದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.ಇನ್ನು ಆರು ವರ್ಷಗಳ ಕಾಲ ಇಷ್ಟು ಜಾಗೃತರಾಗಿ ಕೆಲಸ ಮಾಡಿದರೆ ನಾನೂ ಸಹ ಅಷ್ಟೇ ಜಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್. ದತ್ತಾತ್ರಿ, ಎನ್.ಜೆ. ರಾಜಶೇಖರ್, ಬಿಳಿಕಿ ಕೃಷ್ಣಮೂರ್ತಿ, ಬಿ.ಆರ್. ಮಧು ಸೂದನ್, ವೀರಭದ್ರಪ್ಪ ಪೂಜಾರ್, ಅಣ್ಣಪ್ಪ, ರತ್ನಾಕರ ಶೆಣೈ, ಡಿ.ಎಸ್. ಅರುಣ್ ಉಪಸ್ಥಿತರಿದ್ದರು.