ಶಿವಮೊಗ್ಗ: ನಾನು ಯಡಿಯೂರಪ್ಪ ರಾಮ ಲಕ್ಷ್ಮಣರಿದ್ದಂತೆ ನಮಲ್ಲಿ ಯಾವುದೇ ಗೊಂದಲವಿಲ್ಲ, ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಘಂಟಾ ಘೋಷವಾಗಿ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಹಿಂದೆ ನಮ್ಮಲ್ಲಿ ಗೊಂದಲ ಇದ್ದದ್ದು ನಿಜ, ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ದೆಹಲಿಯಲ್ಲಿ ಸಭೆ ನಡೆಸಿ ಅದನ್ನು ನಿವಾರಿಸಿದ್ದರು, ಈಗ ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ತಮ್ಮಲ್ಲಿದ್ದ ಸಂದೇಹವನ್ನು ದೂರ ಮಾಡಿಕೊಂಡಿ ದ್ದಾರೆ. ನಮ್ಮಲ್ಲಿನ ಒಗ್ಗಟ್ಟನ್ನು ಕಂಡು ಸಂತೋಷ ಪಟ್ಟಿದ್ದಾರೆ ಎಂದರು.
ಶಿವಮೊಗ್ಗ ಕ್ಷೇತ್ರದ ಟಿಕೆಟ್ ಬಗ್ಗೆಯೂ ಗೊಂದಲವಿಲ್ಲ, ಪಕ್ಷ ಸಮೀಕ್ಷೆ ನಡೆಸಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಎಲ್ಲರೂ ಸೇರಿಪ್ರಚಾರ ಮಾಡು ತ್ತೇವೆ, ರುದ್ರೇಗೌಡರಿಗೆ ಟಿಕೆಟ್ ನೀಡಿ ದರೆ ನಾನೇ ಮುಂದೆ ನಿಂತು ಗೆಲ್ಲಿಸುತ್ತೇನೆ ಎಂದ ಅವರು, ನಗರದಲ್ಲಿ ಅಮಿತ್‌ಷಾ ಅವರ ರೋಡ್ ಶೋ ಅದ್ಭುತ ಯಶಸ್ಸು ಕಂಡಿದೆ. ಹಿಂದೆಂದೂ ಸೇರಿದಷ್ಟು ಜನರು ಇದರಲ್ಲಿ ಪಾಲ್ಗೊಂ ಡಿದ್ದರು. ಇದು ಬಿಜೆಪಿ ಪರ ಜನರ ಒಲವು ತೋರಿಸುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ. ಅವರ ಯಾವುದೇ ಭರವಸೆ ಈಡೇರಿ ಸಿಲ್ಲ, ಆದ್ದರಿಂದ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಈ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುವುದು. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ರೊಂದಿಗೆ ಚರ್ಚಿಸಿದ್ದು ಏ.೩ರಂದು ಕಾಗಿನೆಲೆಯಲ್ಲಿ ರಾಜ್ಯದ ಹಿಂದುಳಿದ ವರ್ಗದ ಸಮಾವೇಶ ನಡೆಸಲಾಗುವುದು. ಅಮಿತ್ ಷಾ ಅವರೇ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಳಿದವರಿಗೆ ಏನೂ ಮಾಡದ ಬಗ್ಗೆ ತಿಳಿಸಿಕೊಡಲಾಗುವುದು ಹಾಗೂ ಬಿಜೆಪಿ ಮುಂದೆ ಹಿಂದುಳಿದವರ ಪರ ಏನು ಮಾಡಲಿದೆ ಎಂಬುದನ್ನು ಮನದಟ್ಟು ಮಾಡುವುದಾಗಿ ಹೇಳಿದ ಅವರು, ಕಾಂಗ್ರೆಸ್ ತನ್ನ ಐದು ವರ್ಷದ ಅಧಿಕಾರದಲ್ಲಿ ದಲಿತ ಮತ್ತು ಹಿಂದುಳಿದವರ ವಿರೋಧಿಯಾಗಿ ಕೆಲಸ ಮಾಡಿದೆ. ರೈತವಿರೋಧಿಯಾಗಿದೆ, ಗೋಹತ್ಯೆ ಬೆಂಬಲಿಸಿದೆ, ೨೧ ಹಿಂದೂಗಳ ಕಗ್ಗೊಲೆಯಾಗಿದ್ದರೂ ಕ್ರಮ ಇಲ್ಲ, ಪಾಕ್ ಪರ ಘೋಷಣೆ ಕೂಗುವವರನ್ನು ರಕ್ಷಿಸಿದೆ, ಮರಳು ಮಾಫಿಯಾ ನಡೆಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಧ್ಯಕ್ಷ ಎಸ್. ರುದ್ರೇಗೌಡ, ಪ್ರಮು ಖರಾದ ಆಯನೂರು ಮಂಜುನಾಥ್, ದತ್ತಾತ್ರಿ, ಚೆನ್ನಿ, ಸುಭಾಷ್, ಕೆ.ಜಿ. ಕುಮಾರಸ್ವಾಮಿ, ಡಿ.ಎಸ್. ಅರುಣ್, eನೇಶ್ವರ್, ಮಧುಸೂದನ್, ಅನಿತಾ ರವಿಶಂಕರ್ ಮತ್ತಿತರರಿದ್ದರು.