ಗ್ರಾಹಕರಿಗೆ ತೂಕ-ಅಳತೆಯಲ್ಲಿ ಮೋಸ ಮಾಡಬೇಡಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಆರ್.ಪ್ರಸನ್ನಕುಮಾರ್

ಶಿವಮೊಗ್ಗ : ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಬೇಡಿ. ದರದಲ್ಲಿ ರಿಯಾಯಿತಿ ಬೇಡ. ಮಾಡುವ ವ್ಯವಹಾರ ವಿಶ್ವಾಸಪೂರ್ಣವಾಗಿದ್ದಾಗ, ಹಣ್ಣು-ತರಕಾರಿಗಳ ಗುಣಮಟ್ಟ ಉತ್ತಮ ವಾಗಿದ್ದಾಗ ಗ್ರಾಹಕರು ಸಹಜವಾಗಿ ತಮ್ಮಲ್ಲಿಗೆ ಬರುತ್ತಾರೆ. ಇದರಿಂದಾಗಿ ನಿಶ್ಚಿತ ಪ್ರಮಾಣದ ಆದಾಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಬೀದಿಬದಿ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ಇಂದು ಮಹಾನಗರಪಾಲಿಕೆಯು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಜೀವ ನೋಪಾಯ, ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಕುರಿತು ಬೀದಿಬದಿ ವ್ಯಾಪಾರಿಗಳಿಗಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾ ಗಿದ್ದ ಒಂದು ದಿನದ ತರಬೇತಿ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳ ದಿನ ನಿತ್ಯದ ಬದುಕು ಅಸಹನೀಯ ವಾಗಿದೆ. ಇದಕ್ಕೆ ವಾಹನಗಳ ಸಂಚಾರ, ಪಾಲಿಕೆ ಅಧಿಕಾರಿಗಳಿಂದ ಅಂಗಡಿ ತೆರವುಗೊಳಿಸಲು ಒತ್ತಡ, ಆರೋಗ್ಯ ಇಲಾಖಾ ಅಧಿಕಾರಿಗಳ ತಪಾಸಣೆ, ತಾತ್ಕಾಲಿಕ ಡೇರೆಗಳು, ಮಳೆ-ಗಾಳಿ ಇವೆಲ್ಲವುಗಳಿಂದಾಗಿ ಬದುಕು ಅನಿಶ್ಚಿತವಾಗಿದೆ. ಈ ಎಲ್ಲ ವನ್ನು ಅರಿತು ಬೀದಿಬದಿ ವ್ಯಾಪಾರಿ ಗಳು ತಮ್ಮ ಕುಟುಂಬದ ಸದಸ್ಯ ರೊಂದಿಗೆ ನೆಮ್ಮದಿಯಿಂದ ದಿನಕಳೆ ಯುವಂತಾಗಬೇಕೆಂಬ ಆಶಯದಿಂದ ಬೀದಿಬದಿ ವ್ಯಾಪಾರವನ್ನು ಅವರು ನಿರೀಕ್ಷಿಸುವ ಸ್ಥಳದಲ್ಲಿ ಅಧಿಕೃತ ಗೊಳಿಸಿ ಪಾಲಿಕೆ ವತಿಯಿಂದ ಅಧಿಕೃತ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ ಎಂದರು.
ಕಳೆದ ಸಾಲಿನಲ್ಲಿ ಸುಮಾರು ೮೦೦ಕ್ಕೂ ಹೆಚ್ಚಿನ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ವಿತರಿಸ ಲಾಗಿತ್ತು. ಪ್ರಸ್ತುತ ೫೦೦ಜನರಿಗೆ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಇನ್ನೂ ೧೫೦ಕ್ಕೂ ಹೆಚ್ಚಿನ ಜನರು ಕಾರ್ಡಿಗಾಗಿ ಮನವಿ ಸಲ್ಲಿಸಿದ್ದಾರೆ. ಅವರಿಗೂ ಕೂಡಲೇ ಕಾರ್ಡನ್ನು ವಿತರಿಸಲು ಪಾಲಿಕೆ ಕ್ರಮಕೈಗೊಳ್ಳ ಲಿದೆ. ತಮ್ಮ ದೈನಂದಿನ ಕೆಲಸದಿಂದ ಹೊರಗುಳಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ರೂ.೨೯೩/-ರೂ.ಗಳ ದಿನಭತ್ಯೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎ.ಅತ್ತಾರ್ ಅವರು ಮಾತನಾಡಿದರು.,
ಕಾರ್ಯಾಗಾರದಲ್ಲಿ ಶಾಸಕ ಆರ್.ಪ್ರಸನ್ನಕುಮಾರ್ ಅವರು ವ್ಯಾಪಾರಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿಯನ್ನು ತಲುಪಿಸಿ ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆಹಾರ ಇಲಾಖೆಯ ಅಂಕಿತ ಅಧಿಕಾರಿ ಸೋಮೇಶ್ ಅವರು ವ್ಯಾಪಾರಿಗಳಿಗೆ ತರಬೇತಿ ನೀಡಿದರು. ಸಮಾರಂಭದಲ್ಲಿ ಉಪಮೇಯರ್ ವಿಜಯಲಕ್ಷ್ಮೀ ಪಾಟೀಲ್, ಯಶೋಧ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ, ಸತೀಶ್, ರೇಖಾ ಚಂದ್ರಶೇಖರ್, ಗೌರಿ ಶ್ರೀನಾಥ್, ಆಸಿಫ್ ಮೊದಲಾದವರಿದ್ದರು.