ಪರಿಶುದ್ಧ ಭಕ್ತಿ ಅತ್ಯಂತ ಶ್ರೇಷ್ಠ : ಶ್ರೀಗಳು

ಶಿವಮೊಗ್ಗ : ಆಡಂಬರದ ಭಕ್ತಿ ಗಿಂತ ಪರಿಶುದ್ಧವಾದ ಭಕ್ತಿ ಅತ್ಯಂತ ಶ್ರೇಷ್ಠವಾದುದು ಎಂದು ಹರಿಹರ ಪುರದ ಶ್ರೀ ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಇಂದು ನಗರದ ಜೆ.ಪಿ.ಎನ್. ರಸ್ತೆ ಯಲ್ಲಿರುವ ಶ್ರೀ ಕಾಮಾಕ್ಷಿ ಗಣಪತಿ ದೇವಸ್ಥಾನದಲ್ಲಿ ಶ್ರೀಚಕ್ರ ಸಮೇತ ಕಾಮಾಕ್ಷಿ ದೇವಿ ಮತ್ತು ಶ್ರೀ ಕಾಶಿ ನಾಗಲಿಂಗೇಶ್ವರ ದೇವರ ಮೂರ್ತಿ ಗಳ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಆಡಂಭರದ ಭಕ್ತಿ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಗವಂತನಿಗೆ ಬೇಕಾಗಿರುವುದು ನಮ್ಮ ಪರಿಶುದ್ಧವಾದ ಭಕ್ತಿ. ಎಲ್ಲಿ ಪರಿಶುದ್ಧ ಭಕ್ತಿ ಇರುತ್ತದೆಯೋ ಅಲ್ಲಿ ದೇವರು ಒಲಿಯುತ್ತಾನೆ. ಹಣ, ಶ್ರೀಮಂತಿಕೆ, ಆಡಂಭರಕ್ಕೆ ಎಂದೂ ಸಹ ದೇವರು ಒಲಿಯುವುದಿಲ್ಲ ಎಂದರು.
ಮನುಷ್ಯ ತನ್ನ ಜೀವನದುದ್ದಕ್ಕೂ ಭಗವಂತನ ಸ್ಮರಣೆ ಮಾಡಬೇಕು. ದೇವರ ಸ್ಮರಣೆಯಿಂದ ಮಾನಸಿಕ ವಾಗಿ ಪ್ರತಿಯೊಬ್ಬರೂ ಸದೃಢನಾಗು ತ್ತಾರೆ. ಆದ್ದರಿಂದ ದೇವರ ಪೂಜೆ, ಪ್ರಾರ್ಥನೆಗಳನ್ನು ಪ್ರತಿನಿತ್ಯವೂ ಸಹ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು.
ಹಣ, ಶ್ರೀಮಂತಿಕೆ, ರೂಪ, ಯೌವ್ವನ ಇದು ಯಾವುದೂ ಕೂಡಾ ಶಾಶ್ವತವಲ್ಲ, ಕಾಲಚಕ್ರದಲ್ಲಿ ಇದು ತಿರುಗುತ್ತಲೇ ಇರುತ್ತದೆ. ಆದರೆ ಶ್ರೀಮಂತಿಕೆ ಬಂತು ಎಂದು ಅಹಂ ಕಾರದಿಂದ ದೇವರನ್ನು ಮರೆಯ ಬಾರದು. ಭಗವಂತನ ನಾಮಸ್ಮರಣೆ ಯನ್ನು ಪ್ರತಿ ದಿನವೂ ಮಾಡಬೇಕು. ಭಕ್ತಿಯನ್ನು ದೇವರಿಗೆ ಸಮರ್ಪಿಸಿದರೆ ಅದು ಎಂದೂ ಕೂಡಾ ವ್ಯರ್ಥ ವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿ.ರಾಜು, ಎಸ್.ಆರ್. ಸೋಮು, ಸಾ.ನಾ.ಮೂರ್ತಿ, ಕೃಷ್ಣಮೂರ್ತಿ, ಲಕ್ಕಪ್ಪ ಮೊದಲಾದವರಿದ್ದರು.