Sunday, September 8, 2024
Google search engine
Homeಅಂಕಣಗಳುಲೇಖನಗಳುಜಿಲ್ಲಾಡಳಿತದ ಕಾರ್ಯವೈಖರಿ ಖಂಡಿಸಿ ಧರಣಿ

ಜಿಲ್ಲಾಡಳಿತದ ಕಾರ್ಯವೈಖರಿ ಖಂಡಿಸಿ ಧರಣಿ

ಶಿವಮೊಗ್ಗ : ಜಿಲ್ಲೆಯ ಪರಿಸರ ವಿಕೃತಿ, ಕೆರೆ-ಕಟ್ಟೆಗಳ ಕಾಣೆಯಾಗು ವಿಕೆ, ಕಳಪೆ ಕಾಮಗಾರಿಗಳು, ಮರಳು ಕೃತಕ ಅಭಾವ, ಪಾರ್ಕಿಂಗ್ ಅವ್ಯ ವಸ್ಥೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಭಾರೀ ಭ್ರಷ್ಟಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಹೋರಾಟಗಾರರನ್ನು ನಿರ್ಲಕ್ಷಿ ಸುತ್ತಿರುವ ಜಿಲ್ಲಾಡಳಿತದ ಕಾರ್ಯ ವೈಖರಿ ಖಂಡಿಸಿ ಇಂದು ಅಣ್ಣಾ ಹಜಾರೆ ಹೋರಾಟ ಸಮಿತಿ ವತಿ ಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಜಿಲ್ಲಾಧಿಕಾರಿಗಳೊಂದಿಗೆ ಮೇಲ್ಕಂಡ ವಿಷಯಗಳ ಸಮಸ್ಯೆ ಕುರಿತು ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ೩ ತಿಂಗಳ ಸಮಯಾವಕಾಶವನ್ನು ಜಿಲ್ಲಾಧಿಕಾರಿಗಳು ತೆಗೆದುಕೊಂಡಿದ್ದರು. ಆದರೂ ಪರಿಹಾರವಾಗದಿದ್ದಾಗ ಮತ್ತೆ ಮತ್ತೆ ಹೋರಾಟ ಮತ್ತು ಮನವಿ ಸಲ್ಲಿಸುತ್ತಾ ಸಮಸ್ಯೆಗಳನ್ನು ಚರ್ಚಿಸಲು ಕಾಲಾವಕಾಶ ಕೇಳಿದಾಗಲೂ ಒಂದೊಂದು ಸಾರಿ, ಒಂದೊಂದು ಸಬೂಬನ್ನು ಒಡ್ಡಿ ನುಣುಚಿಕೊಳ್ಳುವ ಪ್ರಯತ್ನವನ್ನು ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ಧರಣಿ ನಿರತರರು ಆರೋಪಿಸಿದರು.
ಜಿಲ್ಲಾಡಳಿತವು ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಬೇಜವಾಬ್ದಾರಿತನ ತೋರುತ್ತಿ ರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಮುಂಬಾಪುರ, ಪುರಲೆ, ಆಲದೇವರು ಹೊಸೂರು, ತ್ಯಾವರೆ ಕೊಪ್ಪ ಮತ್ತು ನಗರಪಾಲಿಕೆ ವ್ಯಾಪ್ತಿಗೆ ಬರುವ ಕೆರೆಯ ಸರ್ವೆ ಮಾಡಲು ಹಲವು ಬಾರಿ ಒತ್ತಾಯಿಸಿದ್ದರೂ ಜಿಲ್ಲಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆರೆಗಳ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವುಗೊಳಿಸುವುದರ ಮೂಲಕ ಕೆರೆಗಳ ಸಂರಕ್ಷಣೆಗೆ ಒತ್ತು ನೀಡ ಬೇಕೆಂದು ಒತ್ತಾಯಿಸಿದರು.
ಶಿವಮೊಗ್ಗ ವಿನೋಬನಗರದ ಶಿವಾಲಯ ಬಳಿ ತರಕಾರಿ ಮಾರು ಕಟ್ಟೆಗಾಗಿ ೭೮ ಮಳಿಗೆಗಳನ್ನು ನಿರ್ಮಾಣ ಮಾಡಿ ೫ ವರ್ಷ ಕಳೆದರೂ ಈ ಕಟ್ಟಡ ಬಳಕೆಯಾಗುತ್ತಿಲ್ಲ. ಯಾವುದೇ ಲಾಭಿಗೂ ಮಣಿಯದೆ ಪಾರದರ್ಶಕತೆಯಿಂದ ತರಕಾರಿ ಮಾರುವವರಿಗೆ ಹಂಚುವ ಮೂಲಕ ಆ ಕಟ್ಟಡಕ್ಕೆ ಜೀವ ತುಂಬಬೇಕೆಂದು ಒತ್ತಾಯಿಸಿದರು.
ಮುಂದಿನ ೧೫ ದಿನಗಳೊಳಗಾಗಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಸಮಯಾವಕಾಶ ನೀಡದಿದ್ದಲ್ಲಿ ೧೬ನೇ ದಿನದಿಂದ ನಿರಂತರವಾಗಿ ಜಿಲ್ಲಾ ಡಳಿತದ ವಿರುದ್ಧ ಎಲ್ಲಾ ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್, ಡಾ.ಬಿ.ಎಂ.ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಜನಮೇ ಜಿರಾವ್, ಶೇಖರ್ ಗೌಳೇರ್, ಡಾ.ಎನ್.ಎಲ್.ನಾಯಕ್, ಬಾಬುರಾವ್, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments