Monday, July 22, 2024
Google search engine
Homeಇ-ಪತ್ರಿಕೆಗೌರಿ ಸಿನಿಮಾ ಎನ್ನುವುದು ನನ್ನ ಅಕ್ಕನ ಆತ್ಮಕತೆಯಲ್ಲ, ಅದೊಂದು ಪಾತ್ರವಷ್ಟೆ

ಗೌರಿ ಸಿನಿಮಾ ಎನ್ನುವುದು ನನ್ನ ಅಕ್ಕನ ಆತ್ಮಕತೆಯಲ್ಲ, ಅದೊಂದು ಪಾತ್ರವಷ್ಟೆ

ಬಹು ನಿರೀಕ್ಷಿತ ತಮ್ಮ ʼಗೌರಿʼ ಸಿನಿಮಾದ ಕುರಿತು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸ್ಪಷ್ಟನೆ

ಶಿವಮೊಗ್ಗ: ಕನ್ನಡದ ಸ್ಟಾರ್‌ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಿರ್ಮಾಣ ಹಾಗೂ ನಿರ್ದೇಶನದ ಬಹುನಿರೀಕ್ಷಿತ ʼ ಗೌರಿ ʼಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಹೋದರಿ ʼಗೌರಿ ʼ ಹೆಸರನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿರುವ ಅವರು, ಈ ಚಿತ್ರದ ಮೂಲಕ ತಮ್ಮ ಪತ್ರ ಸಮರ್ಜಿತ್‌ ಅವರನ್ನು ಚಿತ್ರ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಆಮೂಲಕ ಲಂಕೇಶ್‌ ಕುಟುಂಬದ ಕುಡಿ ಕನ್ನಡದ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಬರುತ್ತಿದೆ.

ಚಿತ್ರ ತಂಡದ ಮಾಹಿತಿ ಪ್ರಕಾರ ʼಗೌರಿʼ ಚಿತ್ರ  ಜುಲೈ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಬುಧವಾರ ತಮ್ಮ ಚಿತ್ರ ತಂಡದೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದರು. ನಗರದ ಸಹ್ಯಾದ್ರಿ ಕಾಲೇಜು ಹಾಗೂ ಪಿಇಎಸ್‌ ಕಾಲೇಜುಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸುವ ಮುನ್ನ ಅವರು ಬೆಳಗ್ಗೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೌರಿ ಚಿತ್ರದವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ʼ ನನ್ನ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ ಬದುಕಿನಲ್ಲಿ ಗೌರಿ ಸಿನಿಮಾ ತುಂಬಾ ವಿಶೇಷವಾದ ಸಿನಿಮಾ. ಯಾಕೆಂದರೆ ಈ ಚಿತ್ರಕ್ಕಾಗಿ ನನ್ನ ಸಿನಿಮಾ ಜೀವನದ ಅನುಭವವನ್ನು ಧಾರೆ ಎರೆದಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಹೊಸಬರಿಗೆ ಇಲ್ಲಿ ಅವಕಾಶ ಕೊಟ್ಟಿದ್ದೇನೆ. ಕನಸುಗಣ್ಣಿನ ಪ್ರತಿಭೆಗಳು ಈ ಚಿತ್ರದ ಮೂಲಕ ಅನಾವರಣಗೊಂಡಿದ್ದಾರೆ. ನಾಯಕನ ಪಾತ್ರದಲ್ಲಿ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯ ಪಾತ್ರದಲ್ಲಿ ಕಿರುತೆರೆಯ ನಟಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ. ಅವರೊಂದಿಗೆ ದೊಡ್ಡ ತಾರಗಣವೇ ಚಿತ್ರದಲ್ಲಿದೆ. ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ನೋಡುಗನನ್ನು ಭರಪೂರ ರಂಜಿಸಲಿದೆʼ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಚಿತ್ರದ ಕುರಿತು ಹೇಳಿಕೊಂಡರು.

 ʼಗೌರಿʼ ಎನ್ನುವ ಚಿತ್ರದ ಶೀರ್ಷಿಕೆ ಕುರಿತು ಮಾಧ್ಯಮದವರಿಂದ ಕೇಳಿಬಂದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಇದು  ನನ್ನ ಅಕ್ಕನ ಜೀವನ ಕುರಿತ ಚಿತ್ರವಲ್ಲ. ಅದು ಅವಳ ಆತ್ಮಕತೆಯೂ ಅಲ್ಲ, ಗೌರಿ ಎಂಬುವುದು ಒಂದು ಪಾತ್ರ ಮಾತ್ರ. ಇದು ನೈಜ ಘಟನೆಯನ್ನು ಆಧಾರಿಸಿದೆ. ಅಕ್ಕನ ನೆನಪಿಗಾಗಿ ಮಾತ್ರವೇ ಚಿತ್ರಕ್ಕೆ ಗೌರಿ ಎನ್ನುವ ಹೆಸರು ಇಟ್ಟಿದ್ದೇನೆ. ಅದು ಬಿಟ್ಟರೆ ಅಕ್ಕನ ಬದುಕಿಗೂ, ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂದರಲ್ಲದೆ, ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಗೌರಿ ಅವರನ್ನು ಇಷ್ಟಪಡುವ ಜನರಿಗೂ ಈ ಸಿನಿಮಾ ಹತ್ತಿರವಾಗುತ್ತದೆ ಎಂದು ವಿವರಿಸಿದರು.

ಗೌರಿ ಎನ್ನುವ ಹೆಸರನ್ನೇ ಬಳಸಿಕೊಂಡಿದ್ದೀರಿ, ಗೌರಿ ಅವರ ಆತ್ಮಕಥೆಯನ್ನೆ ಇಟ್ಟುಕೊಂಡು ಸಿನಿಮಾ ಮಾಡಬಹುದ್ದಿತ್ತಲ್ಲ ಎನ್ನುವ ಮಾಧ್ಯಮದವರ ಮತ್ತೊಂದುಪ್ರಶ್ನೆಗೆ ಉತ್ತರಿಸಿದ ಇಂದ್ರಜಿತ್‌ ಲಂಕೇಶ್‌, ಅಕ್ಕ ಗೌರಿ ಅವರ  ಕುರಿತ ಚಲನಚಿತ್ರ ಮಾಡುವುದು ತುಂಬ ಕಷ್ಟ. ಅದಕ್ಕೆ ತುಂಬಾ ವಿಚಾರವಂತರು, ತಿಳಿವಳಿಕೆ ಹೊಂದಿದವರು ಬೇಕಾಗುತ್ತದೆ ಎಂದು ಸಷ್ಟನೆ ನೀಡಿದರು. ಇದೇ ವೇಳೆ ಗೌರಿ ಚಿತ್ರ ಒಂದೊಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಂಡಿತ ಈ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ಈ ಸಿನಿಮಾ ಮಾಡಿರುವೆ, ಬಹುದೊಡ್ಡ ತಾರಗಣ ಇದರಲ್ಲಿದೆ. ಹಳಬರು ಹೊಸಬರು ಸೇರಿದಂತೆ ಸುಮಾರು ೭೦ ಜನರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಅಕುಲ್ ಬಾಲಾಜಿ ಹೀಗೆ ಪಟ್ಟಿ ದೊಡ್ಡದಿದೆ. ಕರ್ನಾಟಕದಲ್ಲಿಯೇ ಚಿತ್ರಿಕರಣ ಮಾಡಿದ್ದೇನೆ. ಅದರಲ್ಲಿ ಚಿಕ್ಕಮಗಳೂರು ಕೂಡ ಒಂದು ಚಿಕ್ಕಮಗಳೂರಿನ ಆ ನಿಸರ್ಗವನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.  ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಜುಲೈ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments