೨.೭೪ ಲಕ್ಷ ಮತದಾರರು, ೨೮೩ ಮತಗಟ್ಟೆಗಳು ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ: ಡಿಸಿ

ಶಿವಮೊಗ್ಗ : ಆಗಸ್ಟ್ ೩೧ರಂದು ನಡೆಯಲಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಒಟ್ಟು ೨,೭೪,೨೧೮ ಮಂದಿ ಮತ ಚಲಾಯಿಸುವ ಅಧಿಕಾರ ಹೊಂದಿ ದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾ ನಂದ ಅವರು ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ಒಟ್ಟು ೩೫ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು ಮತದಾರರ ಪೈಕಿ ೧೩೫೫೨೪ ಪುರುಷ ಮತದಾರರು ಹಾಗೂ ೧೩೮೬೭೩ ಮಹಿಳಾ ಮತದಾರರು ಇದ್ದಾರೆ. ಒಟ್ಟು ೨೮೩ ಮತಗಟ್ಟೆಗಳಿದ್ದು, ಇವುಗಳ ಪೈಕಿ ೮೭ ಸೂಕ್ಷ್ಮ, ೨೧ ಅತಿಸೂಕ್ಷ್ಮ ಹಾಗೂ ೧೭೫ ಸಾಮಾನ್ಯ ಮತಗಟ್ಟೆಗಳಿವೆ. ಮಿಳ ಘಟ್ಟ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ ೧೦೬೮೩ ಮತದಾರರು ಇದ್ದಾರೆ. ಸೂಳೆ ಬೈಲ್ ನಲ್ಲಿ ಅತಿ ಕಡಿಮೆ ಅಂದರೆ ೬೨೦೦ ಮತದಾರರು ಇದ್ದಾರೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಾರ್ಯಾ ಲಯದಿಂದ ೧೦೦ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಎರಡು ವಾಹನಗಳಿಗೆ ಮಾತ್ರ ಅವಕಾಶವಿರುವುದು. ನಾಮಪತ್ರ ಸಲ್ಲಿ ಸುವ ಸಂದರ್ಭದಲ್ಲಿ ಅಭ್ಯರ್ಥಿಯ ಜತೆಗೆ ೪ ಮಂದಿ ಬರಲು ಮಾತ್ರ ಬರಬಹುದು. ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದಾಗ ಒಬ್ಬ ಸೂಚಕರು ಹಾಗೂ ಪಕ್ಷೇತರ ಅಭ್ಯರ್ಥಿಯ ನಾಮಪತ್ರದಲ್ಲಿ ೬ಸೂಚಕರು ಸಹಿ ಮಾಡಿ ರಬೇಕು. ಠೇವಣಿ ಮೊತ್ತ ೫ಸಾವಿರ ರೂ. ನಿಗದಿಪಡಿಸಲಾಗಿದೆ. ಹಿಂದುಳಿದ ವರ್ಗ, ಅನುಸೂಚಿತ ಜಾತಿ/ಪಂಗಡಗಳ ಅಭ್ಯರ್ಥಿ ಗಳಿಗೆ ೨೫೦೦ರೂ. ನಿಗದಿಪಡಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಚುನಾವಣಾ ವೆಚ್ಚದ ಮಿತಿಯನ್ನು ೩ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ ಎಂದರು.
ಇವಿಎಂ ಮೂಲಕ ಮತದಾನ ನಡೆಯ ಲಿದ್ದು, ಈ ಬಾರಿ ವಿವಿಪ್ಯಾಟ್ ಇರುವು ದಿಲ್ಲ. ನೋಟಾ ಚಲಾಯಿಸಲು ಸಹ ಅವಕಾಶವಿದೆ. ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದ್ದು, ಹೊಸದಾಗಿ ಹೆಸರು ಸೇರ್ಪಡೆಗೆ ಈಗ ಅವಕಾಶವಿರುವುದಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ೦೮೧೮೨-೨೭೨೨೮೨ ಸಂಖ್ಯೆಗೆ ಕರೆ ಮಾಡಿ ಚುಣಾವಣೆಗೆ ಸಂಬಂಧಿಸಿದಂತೆ ಅಹವಾಲುಗಳು, ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಚುನಾವಣಾಧಿಕಾರಿಗಳ ವಿವರ
ಒಟ್ಟು ಏಳು ಮಂದಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾರ್ಡ್ ಸಂಖ್ಯೆ ೧ರಿಂದ ೫ ವ್ಯಾಪ್ತಿಗೆ ಜಂಟಿ ನಿರ್ದೇಶಕರು ಕೃಷಿ ಇಲಾಖೆ ದೂ:೮೨೭೭೯೩೨೬೦೦, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಾರ್ಡ್ ಸಂಖ್ಯೆ ೬ರಿಂದ ೧೦, ದೂ: ೯೯೧೬೯೩೪೪೫೪, ಜಂಟಿ ನಿರ್ದೇಶಕರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಾರ್ಡ್ ೧೧ರಿಂದ ೧೫ ದೂ:೯೪೪೮೭೧೬೨೪೮, ಶಿಕ್ಷಣಾಧಿಕಾರಿ ಅಕ್ಷರ ದಾಸೋಹ, ವಾರ್ಡ್ ಸಂಖ್ಯೆ ೧೬ರಿಂದ ೨೦ ದೂ:೯೪೮೦೮೩೫೫೨೪, ಹಿರಿಯ ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ ವಾರ್ಡ್ ಸಂಖ್ಯೆ ೨೧ರಿಂದ ೨೫ ದೂ:೯೪೪೮೯೩೦೦೨೧, ಉಪನಿರ್ದೇಶಕರು ಖಾದಿ ಮತ್ತು ಗ್ರಾಮೋದ್ಯಮ, ವಾರ್ಡ್ ಸಂಖ್ಯೆ ೨೬ರಿಂದ ೩೦ ದೂ:೭೪೧೧೪೬೦೬೩೦, ಸಹಕಾರ ಸಂಘಗಳ ಉಪನಿಬಂಧಕರು, ವಾರ್ಡ್ ಸಂಖ್ಯೆ ೩೧ರಿಂದ ೩೫ ದೂ:೯೪೮೨೪೫೫೬೬೩ ನೇಮಕ ಮಾಡಲಾಗಿದೆ.