ಲೇಖನ : ಸೀತಾ ಎಸ್.ಎನ್. ಹರಿಹರ
ವಿಶಿಷ್ಠ ಪ್ರತಿಭೆ ಯುವಜನತೆಯ ಪ್ರಭೆ ಪ್ರಶಾಂತ ರಿಪ್ಪನ್‌ಪೇಟೆ
ಸಮಾಜಸೇವೆಯನ್ನು ಹಾಗೂ ಸಮಾಜಮುಖಿ ಕೆಲಸಗಳನ್ನು ಹಣದಿಂದ ಮಾತ್ರವ ಲ್ಲದೇ ತನುವಿನಿಂದ, ತುಂಬಿದ ಮನದಿಂದ ಮಾಡಬಹು ದೆಂಬುದಕ್ಕೆ ಅನನ್ಯವಾದ ಉದಾಹರಣೆ ರಿಪ್ಪನ್‌ಪೇಟೆ ಪ್ರಶಾಂತನೆಂಬ ಯುವಕ. ನೂರಾರು ಕಾರ್ಯಕ್ರಮಗಳಲ್ಲಿ ಅಥಿತಿಯಾಗಿ ತಮ್ಮ ಮೌಲ್ಯಭರಿತ ವಿಚಾರದಿಂದ ಜನಮೆಚ್ಚುಗೆ ಗಳಿಸಿ ಗೌರವಾನ್ವಿತ ರಾಗಿದ್ದಾರೆ. ಯಾವುದೇ ಕ್ಷೇತ್ರ ದಲ್ಲಿನ ಯಶಸ್ಸಿಗೆ ಪ್ರತಿಭೆಯು ಕಾರ ಣವಾದರೂ ಸಹ ಅದರ ಸಿಹಿ ಯಾದ ಫಲಿತಾಂಶಕ್ಕೆ ಆಧ್ಯಾತ್ಮಿಕ ಮನೋಭಾವ, ಧಾರ್ಮಿಕತೆ, ಪರಿಶ್ರಮ, ಆಸಕ್ತಿ, ಆತ್ಮವಿಶ್ವಾಸ, ದಣಿವರಿಯದ ಚಟುವಟಿಕೆಯೂ ಕಾರಣವಾಗಿರುತ್ತದೆ. ಪ್ರಾಮಾ ಣಿಕವಾಗಿ ಮಾಡುವ ಪ್ರಯತ್ನ ಯಶಸ್ಸಿಗೆ ಕಾರಣವಾಗು ತ್ತದೆಂದು ಸಾಬೀತು ಪಡಿಸಿರುವ ೩೫ ವರ್ಷ ದ ಪ್ರಶಾಂತರವರು ಯುವ ಜನತೆಗೆ ಮಾದರಿಯಾಗಿದ್ದಾರೆ.
ಬದುಕನ್ನು ಸುಂದರ ವಾಗಿಸುವ ಯಶಸ್ಸಿನ ಸೋಪಾನ ಗಳನ್ನು ಏರುವ ಮಾರ್ಗ ವನ್ನು ಇಂದಿನ ಯುವಕರಿಗೆ ತೋರಿದ್ದಾರೆ.
ಪದವಿಪೂರ್ವ ಶಿಕ್ಷಣದ ನಂತರ ರಿಪ್ಪನ್‌ಪೇಟೆಯಿಂದ ಬೆಂಗಳೂರಿಗೆ ಬಂದ ಪ್ರಶಾಂತರು ಸ್ಥಳೀಯ ಪತ್ರಿಕೆ ಯೊಂದರಲ್ಲಿ ಕೆಲಸ ಮಾಡುತ್ತಲೇ ಪತ್ರಿಕೋದ್ಯಮ ಹಾಗೂ ಎಂ.ಎ. ಪದವಿ ತಮ್ಮದಾಗಿಸಿಕೊಂಡರು. ನಂತರ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಲೇ ಸಾವಿರಾರು, ಲಕ್ಷಾಂ ತರ ಜನರು ಸೇರುವಂಥಹ ಮಠಗಳ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮ ಗಳಲ್ಲಿ ನಿರೂಪಣೆ, ಭಾಷಣ ಮುಂತಾದವು ಗಳಲ್ಲಿ ತೊಡಗಿಸಿಕೊಂಡು ಸರಳತೆಯಿಂದ ತಮ್ಮದೇ ಛಾಪನ್ನು ಒತ್ತಿ ಎಲ್ಲರಿಗೂ ಪ್ರಿಯರಾದರು.
ಷಾರ್ಜಾದಲ್ಲಿ ನಡೆದ ೧೨ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ, ಹಳ್ಳಿಕಟ್ಟೆ ತಂಡ ದೊಂದಿಗೆ ಭಾಗ ವಹಿಸಿದ ಇವರ ಖ್ಯಾತಿ ಅಂತರಾಷ್ಟ್ರೀಯ ಮಟ್ಟ ದಲ್ಲೂ ಹರಡಲು ಕಾರಣವಾಯಿತು. ವಿದ್ಯಾರ್ಥಿ ದೆಸೆಯಿಂದಲೇ ಗಾಯನ, ಭಾಷಣ, ನಾಟಕಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡ ಪ್ರಶಾಂತ್‌ರವರು ಟಿವಿ ೯ನಲ್ಲಿ ಪ್ರಸಾರವಾದ ‘ಹಳ್ಳಿಕಟ್ಟೆ’ ಕಾರ್ಯಕ್ರಮದ ಭೂಕಾಳಿ ಪಾತ್ರದಿಂದ ಪ್ರಸಿದ್ಧರಾಗಿ ನಟನೆ, ನಾಟಕಗಳ ನಿರ್ದೇಶನಗಳಲ್ಲಿ ಹೆಸರು ಮಾಡಿದ್ದಾರೆ. ಹೇಮರೆಡ್ಡಿ ಮಲ್ಲಮ್ಮನ ಕುರಿತ ಸಾಕ್ಷ್ಯಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಹಲವರ ಸಹಕಾರದೊಂದಿಗೆ ಅದರ ಸಂಪೂರ್ಣ ಜವಾಬ್ದಾರಿ ಹೊತ್ತು, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಆಧುನಿಕ ವಚನಕಾರರೂ ಆಗಿರುವ ಅವರು ‘ವಚನ ಕುಸುಮ’ ‘ವಚನ ಮಾಲೆ’ ಎಂಬೆರಡು ಕೃತಿ ಗಳನ್ನು ಮರುಳಸಿದ್ದೇಶ್ವರ ವೀರಶೈವ ಅಧ್ಯ ಯನ ಕೇಂದ್ರದ ಸಹಕಾರದಿಂದ ಪ್ರಕಟಿಸಿ ದ್ದಾರೆ. ಎರಡು ಭಕ್ತಿಗೀತೆಗಳ ಧ್ವನಿಸುರುಳಿ, ಹಲವು ಸಂಶೋ ಧನಾತ್ಮಕ ಪ್ರಬಂಧ, ನಾಲ್ಕು ಪುಸ್ತಕ ಪ್ರಕಟಿಸಿದ್ದಾರೆ.
ಯುವ ಸಾಹಿತಿ, ಪತ್ರ ಕರ್ತರೂ ಆದ ಇವರು ವಿಜಯ ವಾಣಿ ಪತ್ರಿಕೆ ಯ ಅಂಕಣ ಕಾರರಾಗಿದ್ದಾರೆ. ಶಿವಮೊಗ್ಗದಲ್ಲಿ ನಡೆದ ೭೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಧಾರವಾಡದಲ್ಲಿ ನಡೆದ ೧೧ ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ವಚನ ಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದಾರೆ.
ವಚನ ಸಾಹಿತ್ಯ, ಶರಣ ಪರಂಪರೆ, ವೀರಶೈವ ಸಾಹಿತ್ಯ, ಸಂಸ್ಕೃತಿ ಕುರಿತು ಹಲವಾರು ಉಪನ್ಯಾಸ ಗಳನ್ನು ನೀಡಿದ್ದಾರೆ. ‘ಮೌಲ್ಯ ಪತ್ರಿಕೋದ್ಯಮರತ್ನ’ ಪ್ರಶಸ್ತಿ, ‘ಕರ್ನಾಟಕ ದಸರಾ ಪ್ರಶಸ್ತಿ’ ‘ಸುವರ್ಣ ಕರ್ನಾಟಕ ಯುವಸಿರಿ’ ‘ಸಗರನಾಡು ಕಲಾಸಿರಿ’, ‘ಕುಪ್ಪೂರೇಶ್ವರ ರಜತಶ್ರೀ’ ‘ಮಾಧ್ಯಮ ರತ್ನ’, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ “ರಮಣಶ್ರೀ ಶರಣ” ಪ್ರಶಸ್ತಿ, ಯಡೂರು ಶ್ರೀಕ್ಷೇತ್ರ ನೀಡುವ “ಯುವಕುಲ ಭೂಷಣ” ವಾರ್ಷಿಕ ಪ್ರಶಸ್ತಿ, ‘ಶ್ರೀ ಶಿವಶಾಂತ ಮಾಧ್ಯಮ ಚೇತನ’ ಪ್ರಶಸ್ತಿಯೂ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.
ಪ್ರತಿಭೆಗೆ ಅವಕಾಶಗಳು ಅತ್ಯಾ ವಶ್ಯಕ. ಅವಕಾಶಗಳನ್ನು ಸಮರ್ಥ ವಾಗಿ ಬಳಸಿಕೊಂಡ ಬಹುಮುಖ ಪ್ರತಿಭೆಯ ಪ್ರಶಾಂತರವರಿಗೆ ಇದೀಗ ಮತ್ತೊಂದು ಬಹುಮುಖ್ಯ ವಾದ ಸನ್ಮಾನದ ಗರಿ ಸೇರಲಿದೆ!
ಅದು ಮಾರ್ಚ್ ೯ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಮಿಕ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ‘ಅಧ್ಯಕ್ಷ ಸ್ಥಾನ’. ಸಮಾಜಕ್ಕೆ ಕನ್ನಡ ನಾಡಿಗೆ ಇವರ ಸೇವೆ ನಿರಂತರ ವಿರಲಿ ಎಂದು ಹಾರೈಸೋಣ.