‘ವಿದ್ಯಾರ್ಥಿಗಳೇ ಜವಾಬ್ದಾರಿಯುತ ನಾಗರೀಕರಾಗಿ :  ಪ್ರಕಾಶ್ ಜಾವಡೇಕರ್

ಶಿವಮೊಗ್ಗ : ಜಾಗತೀಕರಣಗೊಂಡ ಸಮಾಜದಲ್ಲಿ ಶಿಕ್ಷಣ ಪಡೆಯುವುದು ಹಾಗೂ ಕೌಶಲ್ಯ ಅಥವಾ ಮಾಹಿತಿ ಪಡೆಯುವುದು ಮುಖ್ಯವಲ್ಲ, ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಸೂಕ್ತವಾಗುವ ವಿಚಾರಗಳ ಮತ್ತು ಕ್ರಿಯೆಗಳ ಸುಸಂಗತವಾದ ರೂಪವೊಂದನ್ನು ಸೃಷ್ಟಿಸಬಲ್ಲ ಮನಸ್ಸು ಇಂದು ಮುಖ್ಯವಾಗಿ ಬೇಕಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಇಂದು ಶಂಕರಘಟ್ಟದ ಕುವೆಂಪು ವಿವಿಯಲ್ಲಿ ನಡೆದ ೨೮ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರ ಅನುಪಸ್ಥಿತಿಯಲ್ಲಿ ಪ್ರೊ.ರಾಜಾರಾಮ್ ಹೆಗಡೆ ಸಚಿವರ ಭಾಷಣದ ಪ್ರತಿಯನ್ನು ವಾಚಿಸಿದರು.
ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರೀಕ ರಾಗುವ ಕಡೆ ಗಮನಕೊಡಬೇಕಾಗಿದೆ ಎಂದ ಅವರು, ರಾಷ್ಟ್ರದ ಪ್ರಗತಿಗಾಗಿ ಕಾಣಿಕೆ ನೀಡಬೇಕು. ಭಾರತ ಜನಸಂಖ್ಯಾ ಸಂಪನ್ಮೂಲಕ್ಕೆ ಪ್ರಸಿದ್ಧಿಯಾಗಿದೆ. ಆದರೆ ಸಂಪನ್ಮೂಲವನ್ನು ಅರ್ಥಪೂರ್ಣವಾಗಿ ಹಾಗೂ ಪರಿಣಾಮಕಾರಿ ಯಾಗಿ ಬಳಸಿಕೊ ಳ್ಳುತ್ತೇವೆಯೋ? ಇಲ್ಲವೋ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದರು.
ಇಂದಿನ ಪದವೀಧರರು ನಾಳೆಯ ನಾಯ ಕರು. ನಮ್ಮ ಸಮಾಜದ ಅಮೂಲ್ಯವಾದ ಆಸ್ತಿ ಯಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಗುರಿಗಳನ್ನು ಸಾಧಿಸುವತ್ತ ಹೆಜ್ಜೆ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಳೆದ ಎರಡು ದಶಕಗಳಲ್ಲಿ ಭಾರತ ತನ್ನ ಉನ್ನತ ಶಿಕ್ಷಣ ಕ್ಷೇತ್ರದ ಸ್ವರೂಪವನ್ನು ಗಮನಾರ್ಹವಾಗಿ ರೂಪಾಂತರಿಸಿಕೊಂಡಿದೆ. ಅದು ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಹಾಗೂ ಕಲಿಕೆಯ ನಿರೀಕ್ಷಿತ ಫಲಿತಾಂಶವನ್ನು ಕೂಡಾ ಬದಲಾಯಿಸಿಕೊಂಡಿದೆ ಎಂದರು.
ಈ ಬಾರಿ ಘಟಿ ಕೋತ್ಸವದಲ್ಲಿ ೧೧,೭೭೫ ಪುರುಷರು ಹಾಗೂ ೧೫,೭೭೨ ಮಹಿಳೆ ಯರು ಸೇರಿದಂತೆ ಒಟ್ಟು ೨೭,೫೫೦ ವಿದ್ಯಾರ್ಥಿಗಳಿಗೆ ಪದವಿ ಪಡೆದರು.
೭೭ ಪುರುಷರು, ೩೭ ಮಹಿಳೆಯರು ಸೇರಿದಂತೆ ೧೧೪ ಅಭ್ಯರ್ಥಿಗಳು ಪಿ.ಹೆಚ್‌ಡಿ ಪದವಿ ಪಡೆಯಲಿದ್ದಾರೆ. ೧೧೨ ಸ್ವರ್ಣ ಪದಕಗಳನ್ನು ೧೧ ಪುರುಷರು, ೫೭ ಮಹಿಳೆಯರು ಸೇರಿದಂತೆ ಒಟ್ಟು ೬೩ ವಿದ್ಯಾರ್ಥಿಗಳು ಹಂಚಿಕೊಂಡರು.
ಎಂ.ಎ. ಕನ್ನಡ ವಿಭಾಗದ ಎಸ್.ಶಿಲ್ಪಾ ಅತಿ ಹೆಚ್ಚು ಚಿನ್ನದ ಪದಕಗಳನ್ನು ಅಂದರೆ ೬ ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದಾರೆ. ಎಸ್. ಅಶ್ವಿನಿ ಹಾಗೂ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎನ್. ಹರ್ಷಿತಾ ತಲಾ ೫ ಸ್ವರ್ಣ ಪದಕ ಪಡೆದಿದ್ದಾರೆ. ಸುಷ್ಮಿತಾ ಸಿ., ಎಂ.ಎಂ. ಸಪ್ತಮಿ, ವಿ.ಎಲ್. ಸ್ವಾತಿ, ಹೆಚ್.ಜೆ. ಮಾಧುರಿ, ಪಿ. ಅನುಷಾ ಇವರು ತಲಾ ನಾಲ್ಕು ಸ್ವರ್ಣ ಪದಕ ಪಡೆದಿರುತ್ತಾರೆ. ಅನುಷಾ ಟಿ. ಮೂರು ಸ್ವರ್ಣ ಪದಕ, ನಾಲ್ಕು ನಗದು ಬಹುಮಾನ, ಡಯಾನ ಅಬೆರ್ಟಾ, ಈ. ಕಲ್ಲೇಶಿ, ಎ.ಪಿ. ಮೇಘನಾ, ವಿ.ಆರ್. ತೇಜಸ್ವಿನಿ ಇವರು ತಲಾ ಮೂರು ಸ್ವರ್ಣ ಪದಕವನ್ನು ಪಡೆದರು.
ಪದವಿ ಪಡೆದ ಮತ್ತು ಪದಕಗಳನ್ನು ಪಡೆದ ಎಲ್ಲರನ್ನೂ ಸಹ ಈ ಸಂದರ್ಭದಲ್ಲಿ ಅಭಿನಂದಿಸು ತ್ತೇನೆ. ಅವರೆಲ್ಲರಿಗೂ ಇಂದು ಸಂತೋಷ ಹಾಗೂ ಸಮಾಧಾನದ ದಿನವಾಗಿದೆ. ನಾನೂ ಸಹ ನಿಮ್ಮ ಸಂತೋಷದಲ್ಲಿ ಭಾಗಿಯಾಗಿ ದ್ದೇನೆ. ನಿಮ್ಮ ಯಶಸ್ಸಿಗೆ ಖುಷಿ ಪಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಶುಭವನ್ನು ಹಾರೈಸು ತ್ತೇನೆ. ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಉಪಕುಲಪತಿ ಪ್ರೊ. ಜೋಗನ್‌ಶಂಕರ್, ರ‍್ಯಾಂಕ್ ವಿಜೇತರಿಗೆ ಪದಕ ವಿತರಣೆ ಹಾಗೂ ಪಿಹೆಚ್‌ಡಿ ಪದವಿಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಕುಲಸಚಿವ ಬೋಜನಾಯ್ಕ, ಹಿರೇಮಣಿ ನಾಯಕ್, ರಾಜಾನಾಯಕ್, ಮೊದಲಾದವರಿದ್ದರು.