ಸೂರಜ್ ರೇವಣ್ಣನನ್ನು ಸಿಐಡಿ ಅಧಿಕಾರಿಗಳು 8 ದಿನ ಕಸ್ಟಡಿಗೆ ಪಡೆದು ಬೆನ್ನಲ್ಲೇ ಇಂದು ಎಸ್.ಐ.ಟಿ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಿ ಪ್ರಜ್ವಲ್ ರೇವಣ್ಣನನ್ನು ನಾಲ್ಕು ದಿನ ಕಸ್ಟಡಿಗೆ ಪಡೆದು ಸಿಐಡಿ ಕಚೇರಿಗೆ ಕರೆತಂದಿದ್ದಾರೆ.
ಅತ್ಯಾಚಾರ ಪ್ರಕರಣ ಆರೋಪಿ ಪ್ರಜ್ವಲ್ ಕೇಸ್ ಇದೀಗ ಹಾಸನದ ಮಾಜಿ ಶಾಸಕ ಹಾಗೂ ಶಿಷ್ಯಂದಿರಿಗೆ ಸುತ್ತಿಕೊಂಡಿದ್ದೆ. ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನ ಮಾಜಿ ಶಾಸಕ ಹಾಗು ಶಿಷ್ಯಂದಿರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಪೆನ್ ಡ್ರೈವ್ ಹಂಚಿಕೆ ಆರೋಪದಡಿಯಲ್ಲಿ ಪ್ರೀತಂ ಗೌಡ ಶಿಷ್ಯಂದಿರಾದ ,ಕ್ವಾಲಿಟಿ ಬಾರ್ ಶರತ್, ಕಿರಣ್ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪ್ರಕರಣದಲ್ಲಿ ಪ್ರೀತಂ ಗೌಡ ಅವರನ್ನು ಎ೪ ಆರೋಪಿಯನ್ನಾಗಿ ಮಾಡಿದ್ದಾರೆ.3
ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಎಫ್ ಐಆರ್ ದಾಖಲಾಗಿದ್ದು. ನಾಲ್ಕನೇ ಎಫ್ ಐ ಆರ್ ನಲ್ಲಿ ಮತ್ತೆ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮಾಡಲು ಮುಂದಾಗಿದ್ದಾರೆ.