ಶಿವಮೊಗ್ಗ : ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಒಂದು ವಾರದ ಒಳಗಾಗಿ ಕೇಂದ್ರ ಪೊಲೀಸ್ ಪಡೆ ಜಿಲ್ಲೆಗೆ ಆಗಮಿಸಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಯಿದ್ದ ಬಹುತೇಕ ಎಲ್ಲಾ ಹುದ್ದೆಗಳು ಭರ್ತಿಯಿದ್ದು, ಚುನಾವಣೆಗೆ ಇಲಾಖೆ ಸರ್ವಸನ್ನದ್ಧವಾಗಿದೆ. ಈ ಬಾರಿ ಕೇಂದ್ರ ಮೀಸಲು ಪೊಲೀಸ್ ಪಡೆ ಕಳೆದ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದೆ. ಈಗಾ ಗಲೇ ಬಾಹ್ಯ ಒತ್ತಡ, ಆಮಿಷಗಳಿಗೆ ಮತದಾರರು ಒಳಗಾಗಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಆ ಪ್ರದೇಶಗಳಲ್ಲಿ ಪಥಸಂಚಲನ ಕೈಗೊಳ್ಳ ಲಾಗುವುದು. ಪ್ರತಿಯೊಬ್ಬರೂ ಯಾವುದೇ ಹೆದರಿಕೆಯಿಲ್ಲದೆ ಮುಕ್ತವಾಗಿ ಮತ ದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗು ವುದು ಎಂದು ಹೇಳಿದರು.
೫೨೦೦ ಬಂದೂಕುಗಳನ್ನು ಜಪ್ತಿಗೆ ಆದೇಶ ನೀಡಲಾಗಿದ್ದು, ಈಗಾಗಲೇ ೨ಸಾವಿರಕ್ಕೂ ಅಧಿಕ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ. ಇನ್ನುಳಿದ ಬಂದೂಕುಗಳನ್ನು ಒಂದು ವಾರದ ಒಳಗಾಗಿ ಜಪ್ತಿ ಮಾಡಲಾಗುವುದು. ಕಳೆದ ಒಂದು ವರ್ಷದಿಂದ ಗೂಂಡಾ ಶಕ್ತಿಗಳ ಮೇಲೆ ನಿಗಾ ಇರಿಸಿ ಮಟ್ಟ ಹಾಕಲಾಗಿದೆ ಎಂದರು.
ನಕ್ಸಲ್ ಪ್ರದೇಶದಲ್ಲಿ ಕೂಂಬಿಂಗ್: ತೀರ್ಥಹಳ್ಳಿ ಮತ್ತು ಆಗುಂಬೆ ಪ್ರದೇಶಗಳಲ್ಲಿ ೩೦ ಮತದಾನ ಕೇಂದ್ರಗಳನ್ನು ನಕ್ಸಲ್ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಮಾರ್ಚ್ ೧೦ರಿಂದ ನಿರಂತರ ಕೂಂಬಿಂಗ್ ಕಾರ್ಯ ಕೈಗೊಳ್ಳ ಲಾಗಿದೆ. ಚುನಾವಣೆವರೆಗೂ ನಿರಂತರ ಕೂಂಬಿಂಗ್ ಕಾರ್ಯಾ ಚರಣೆ ಕೈಗೊಳ್ಳಲಾಗುವುದು. ಇದುವರೆಗೆ ಯಾವುದೆ ನಕ್ಸಲ್ ಚಟುವಟಿಕೆಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.
ನಾಳೆ ಶಿವಮೊಗ್ಗಕ್ಕೆ ಆಗಮಿಸಲಿ ರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯ ಕ್ರಮದ ಸಮಯದಲ್ಲಿ ಸಾರ್ವಜನಿ ಕರಿಗೆ ಯಾವುದೇ ತೊಂದರೆಯಾಗ ದಂತೆ ಬಿಗಿ-ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿ ಕಾರಿ ಅಭಿನವ್ ಖರೆ ಹೇಳಿದರು.
ಬೆಳಗ್ಗೆ ೧೧.೪೫ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿರುವ ಅವರು ಅರ್ಧ ಗಂಟೆಯ ಕಾಲ ಬಿ.ಹೆಚ್‌ರೆಸ್ತೆ, ನೆಹರೂ ರಸ್ತೆಯಲ್ಲಿ ರ‍್ಯಾಲಿಯ ಮೂಲಕ ಕೊನೆಗೆ ಗೋಪಿ ಸರ್ಕಲ್‌ನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಗರೀಕರಿಗೆ ಈ ಸಂದರ್ಭದಲ್ಲಿ ಕೆಲವು ಸೂಚನೆಗಳನ್ನು ನೀಡಿದೆ. ಹಾಗೆಯೇ ಅವರಿಗೆ ಯಾವುದೇ ಸಮ ಸ್ಯೆಯಾಗದಂತೆ ನೋಡಿಕೊಳ್ಳಲಾಗು ವುದು ಎಂದು ಹೇಳಿದ್ದಾರೆ.