ಭದ್ರಾವತಿ: ಯೋಜನೆಗಳನ್ನು ರೂಪಿಸುವ ಬಗ್ಗೆ ವಿಧ್ಯಾರ್ಥಿ ಜೀವನದಲ್ಲಿ ಒಮ್ಮೆ ಮಾತ್ರ ದೊರೆಯುವುದು, ಇದನ್ನು ಕಳೆದುಕೊಳ್ಳಬೇಡಿ ಎಂದು ನಗರಸಭಾ ಸದಸ್ಯ ಮಂಜುನಾಥ್ ಕರೆ ನೀಡಿದರು.
ಸರ್.ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅಂತಿಮ ಪದವಿ ವಿಧ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಪ್ರಾದೇಶಿಕ ಮಟ್ಟದ ಯೋಜನೆ ರೂಪಿಸುವ ಮತ್ತು ಕೌಶಲ ಕಲಿಯುವಿಕೆ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಾವು ಸಹಾ ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದು ಯೋಜನೆ ತಯಾರಿಕೆಯ ಬಗ್ಗೆ ಅರಿವಿದೆ ಎಂದು ತಮ್ಮ ವಿಧ್ಯಾರ್ಥಿ ಜೀವನದ ಬಗ್ಗೆ ನೆನಪಿಸಿಕೊಂಡರು.ಅಂತಿಮ ಪದವಿ ವಿಧ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ಜೀವನದಲ್ಲಿ ಸಿಗುವ ಯೋಜನೆ ತಯಾರಿಕೆಯ ಬಗ್ಗೆ ಅಲಸ್ಯ ತೋರಬೇಡಿ. ಸದುಪಯೋಗ ಪಡೆಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ಅತಿಥಿಯಾಗಿ ಅಗಮಿಸಿದ್ದ ನಗರಸಭಾ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಚನ್ನಪ್ಪ ಮಾತನಾಡಿ ವಿಧ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನುವ ನಾಣ್ಣುಡಿ ಇದೆ ಇದನ್ನು ಮರೆಯಬೇಡಿ, ವಿಧ್ಯಾರ್ಥಿಗಳು ಪ್ರಾಧ್ಯಪಕರಿಗೆ ಹಾಗೂ ಪೋಷಕರಿಗೆ ಕೃತಜ್ಞರಾಗಿರಿ ಇದರಿಂದ ಉತ್ತಮ ವಿಧ್ಯಾರ್ಥಿ ಜೀವನದೊಂದಿಗೆ ಒಳ್ಳೆಯ ಪ್ರಜೆಯಾಗಲು ಸಾಧ್ಯ ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಧ್ಯಾರ್ಥಿಗಳ ಓದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಸದುಪಯೋಗ ಪಡಿಸಿಕೊಳ್ಳಿ, ವಿಧ್ಯಾರ್ಥಿಗಳು ದೇಶದ ಅಸ್ತಿ ಎಂಬುದನ್ನು ಮರೆಯಬೇಡಿ. ಪದವಿಧರ ಎಂಬುದು ಪ್ರಥಮ ಅಂತಿಮ ಘಟ್ಟ ಇದರಿಂದ ಮುಂದೆ ವಿಧ್ಯಾರ್ಜನೆ ಅಥವಾ ಜೀವನ ಸಾಗಿಸುವ ಪ್ರಾರಂಭದ ಹಂತ ಎಂಬುದು ನೆನಪಿರಲಿ. ಸರ್. ಎಂ. ವಿ. ಕಾಲೇಜ್ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯುತ್ತಮ ಕಲಿಕಾ ಕೇಂದ್ರವಾಗಿದೆ ಇಂತಹ ಕಾಲೇಜಿನ ವಿಧ್ಯಾರ್ಥಿಗಳು ತಾವೆಂದು ಹೆಮ್ಮೆಪಡಿ.ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸ್ನೇಹಜೀವಿಗಳಾಗಿ ಬಾಳಿ ಪರರಿಗೆ ಉಪಕಾರ ಮಾಡುವ ಪ್ರವೃತ್ತಿಯನ್ನು ಬೆಳಸಿಕೊಳ್ಳಿ ಕಾರ್ಯಗಾರದ ಉಪಯೋಗ ಪಡೆದುಕೊಳ್ಳಿ ಎಂದರು.
ಪ್ರಾಂಶುಪಾಲೆ ಡಾ|| ಶೈಲಜಾ ಎಸ್. ಹೊಸಲ್ಲೇರ್ ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕು.ವೆಂ. ಪು ವಿಶ್ವವಿದ್ಯಾಲಯದ ರಿಜಿಸ್ಟರ್ (ಅಡಳಿತ) ಎ.ಎಲ್. ಮಂಜುನಾಥ್ ಪ್ರಾಸ್ತಾವಿಕ ನುಡಿಗನ್ನಾಡಿದರು.
ಮತ್ತೋರ್ವ ಮುಖ್ಯ ಅತಿಥಿ ಕೆ.ಯು.ಈ.ಟಿ. ಎ. ಗೌರವಾನ್ವಿತ ಅಧ್ಯಕ್ಷ, ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ|| ಎಸ್. ಎನ್. ಯೋಗಿಶ್, ಸಂಪನ್ಮೂಲ ವ್ಯಕ್ತಿಯಾಗಿ ಕು.ವೆಂ. ಪು ವಿಶ್ವವಿದ್ಯಾಲಯದ ಅನ್ವಯಿತ ಅರ್ಥಶಾಸ್ತ್ರ ವಿಭಾಗದ
ಹಿರಿಯ ಪ್ರಾಧ್ಯಾಪಕ ಮತ್ತು ಯುಯುಸಿಎಂಎಸ್. ನೋಡಲ್ ಅಧಿಕಾರಿ ಡಾ|| ಸೈಯದ್ ಅಶಫಕ್ಯೂ ಅಹಮದ್ ಅಗಮಿಸಿದ್ದರು.ಕು.ವೆಂ. ಪು ವಿಶ್ವವಿದ್ಯಾಲಯದ ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್), ಕೆ.ಯು.ಟಿ. ಎ. ಮತ್ತು ಬಿ.ಓ.ಇ. ಛೇರ್ ಮನ್ ಡಾ|| ಎ.ಟಿ. ಪದ್ಮೇಗೌಡ ಉಪಸ್ಥಿತಿತರಿದ್ದರು.ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಹಾಲಿ ಸದಸ್ಯ ಸುದೀಪ್ ಕುಮಾರ್, ಮಾಜಿ ನಗರಸಭಾ ಸದಸ್ಯ ಮುಕುಂದಪ್ಪ ಮುಖಂಡರಾದ ಭೈರಪ್ಪ, ಶಿವಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ.ಸಾ.ಪ.ದ ಡಾ|| ನಾಸಿರ್ಖಾನ್, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಪ್ರಾಧ್ಯಾಪಕ ವೃಂದ, ಭೋದಕ ಮತ್ತು ಭೋದಕೆತರ ಅಧ್ಯಾಪಕರು ಶಾಲಾಭಿವೃದ್ಧಿ ಸಮಿತಿ ಮುಖಂಡರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.