ಫೋಟೊಗ್ರಫಿ ಒಂದು ಹೊಸ ಕ್ರೇಜ್

ಫೋಟೊಗ್ರಫಿ ಒಂದು ಹೊಸ ಕ್ರೇಜ್ 
ನೆನಪುಗಳು ಸದಾ ಸವಿಯಾಗಿರಬೇಕು, ನೆನಪು ಸೃಷ್ಟಿಸಲು ಹೋಗಿ ನಾವೇ ನೆನಪಾಗಿ ಉಳಿಯಬಾರದು.
PC : Internet
ಒಂದು ಚಿತ್ರ ಕೇವಲ ಚಿತ್ರವಲ್ಲ ಅದು ಸವಿನೆನಪುಗಳ ಆಗರ. ಒಂದು ಹಳೆಯ ಫೋಟೊ ನೋಡಿದರೆ ಸಾಕು ಅದೆಷ್ಟೋ ನೆನಪುಗಳು ಸ್ಮೃತಿ ಪಟಲದಲ್ಲಿ ಹಾದು ಹೋಗು ತ್ತವೆ. ಇಂತಹ ಸವಿನೆನಪುಗಳನ್ನು ಹಚ್ಚಹಸಿರಾಗಿ ಉಳಿಸುವ ಫೋಟೋಗಳು ಇಂದು ಹೊಸ ಆಯಾಮವನ್ನೇ ಪಡೆದಿದೆ.
ನೆಗೆಟಿವ್ ರೋಲ್ ಹಿಡಿದು, ಅದನ್ನು ಕತ್ತಲೆ ಕೋಣೆಯಲ್ಲಿ ತೊಳೆಸಿ, ಆರಿಸಿ ನೋಡುವ ವರೆಗೂ ತೆಗೆದಿರುವ ಚಿತ್ರ ಹೇಗಿದೆ ಎಂದು ತಿಳಿಯದ ಕಾಲ ದಿಂದ ಇಂದು ಕಣ್ಣು ಮಿಟು ಕಿಸುವುದರಿಂದ ಹಲ್ಲು ಕಿರಿಯುವು ದರವರೆಗೆ, ಊಟ ಮಾಡುವು ದರಿಂದ ಗಾಡಿ ಓಡಿಸುತ್ತಿರು ವವರೆಗೆ ಪ್ರತಿಕ್ಷಣವನ್ನೂ ಸೆರೆ ಹಿಡಿಯುವ ಸೆಲಿವರೆಗೆ ಛಾಯಾಗ್ರಹಣ ಬೆಳೆದು ನಿಂತಿದೆ.
ಸಾಮಾಜಿಕ ಜಾಲತಾಣ ಗಳಲ್ಲಿ ತೋರಿಕೆಗಾಗಿ ಚಿತ್ರಗಳನ್ನು ಹಾಕಲು ಸೆಲ್ಫಿಗಳನ್ನು ತೆಗೆದುಕೊಳ್ಳುವ ಹುಚ್ಚಿನಿಂದ ಪ್ರಾಣ ಕಳೆದುಕೊಂಡವರೂ ಇದ್ದಾರೆ.  ಇನ್ನು ಪಯಣವನ್ನೇ ಹವ್ಯಾಸವಾಗಿಸಿಕೊಂಡಿರುವ ಕೆಲವರು ಫೋಟೊಗ್ರಫಿಯನ್ನು ಹೊಸ ಹವ್ಯಾಸವಾಗಿಸಿ ಕೊಂಡಿದ್ದಾರೆ.
ಇಂದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳು, ಡಿಜಿಟಲ್ ಕ್ಯಾಮೆರಾಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಬಹುತೇಕ ಸಮಾರಂಭಗಳಲ್ಲಿ ವೃತ್ತಿಪರ ಛಾಯಾಗ್ರಾಹಕರಿಗಿಂತ ಹವ್ಯಾಸಿ ಛಾಯಾಗ್ರಾಹಕರೇ ಹೆಚ್ಚು.
ಯುವಕರಲ್ಲಿನ ಹೊಸ ಕ್ರೇಜ್ ಎಂದರೆ ವೈಲ್ಡ್ ಲೈಫ್ ಫೋಟೊ ಗ್ರಫಿ, ಲ್ಯಾಂಡ್‌ಸ್ಕೇಪ್ ಫೋಟೊ ಗ್ರಫಿ, ಫ್ಯಾಷನ್ ಫೋಟೊಗ್ರಫಿ, ಟ್ರಾವಲ್ ಫೋಟೊಗ್ರಫಿ, ಮನೆ ಅಥವಾ ಹೋಟೆಲ್‌ಗಳ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯಲ್ ಫೋಟೊಗ್ರಫಿ, ಹೀಗೆ ಹತ್ತು ಹಲವು ಬಗೆಯ ಛಾಯಾಗ್ರಹಣ ಪ್ರಾರಂಭವಾಗಿದ್ದು ಇದರಿಂದ ತಮ್ಮ ಕಿಸೆಗೊಂದಿಷ್ಟು ಹಣ ಮಾಡಿಕೊಳ್ಳುತ್ತಿರುವವರೂ ಇದ್ದಾರೆ.
ಒಟ್ಟಾರೆ ಹವ್ಯಾಸ ಬಹಳ ಚಂದ, ಇದು ಅನುಕೂಲಕರವಾಗಿದ್ದು ಒಂದಿಷ್ಟು ಒಳಿತಾದರೆ ಚಂದ ಆದರೆ ಅಪಾಯ ತಂದೊಡ್ಡುವ ಸೆಲ್ಫಿಗಳನ್ನು ತೆಗೆಯುವಾಗ ಜಾಗೃತರಾಗಿದ್ದರೆ ಅಷ್ಟೇ ಸಾಕು. ನೆನಪುಗಳು ಸದಾ ಸವಿಯಾಗಿರಬೇಕು, ನೆನಪು ಸೃಷ್ಟಿಸಲು ಹೋಗಿ ನಾವೇ ನೆನಪಾಗಿ ಉಳಿಯಬಾರದು.