ಬೆಂಗಳೂರು: ರಾಜ್ಯ ಸರಕಾರವು ಪೆಟ್ರೋಲ್ ಬೆಲೆ 3 ರೂ, ಡೀಸೆಲ್ ಬೆಲೆ 3 ರೂ. 50 ಪೈಸೆ ಏರಿಕೆ ಮಾಡಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಗೆಜೆಟ್ ಪ್ರಕಟಣೆ ಹೊರಬಂದಿದ್ದು, ಈಗಿನಿಂದಲೇ ಜಾರಿಗೆ ಬರುವಂತೆ ಮಾರಾಟ ತೆರಿಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
85 ರೂ. 93 ಪೈಸೆಯಿದ್ದ ಡೀಸೆಲ್ ಬೆಲೆ 89 ರೂ. 20 ಪೈಸೆಗೆ ಏರಿಕೆಯಾಗಿದ್ದರೆ, 99 ರೂ. 84 ಪೈಸೆಯಿದ್ದ ಪೆಟ್ರೋಲ್ ದರ 103 ರೂ.ಗೆ ಏರಿಕೆಯಾಗಿದೆ.