Sunday, September 8, 2024
Google search engine
Homeಇ-ಪತ್ರಿಕೆಪರಿಷತ್‌ : ಕಾಂಗ್ರೆಸ್‌ 3, ಮೈತ್ರಿ 3 ಗೆಲುವು

ಪರಿಷತ್‌ : ಕಾಂಗ್ರೆಸ್‌ 3, ಮೈತ್ರಿ 3 ಗೆಲುವು

ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಗೆ ಮೂರೇ ಸ್ಥಾನ

ಬೆಂಗಳೂರು / ಶಿವಮೊಗ್ಗ :  ವಿಧಾನ ಪರಿಷತ್ತಿನ ಆರು ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ 3  ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.ವಿಶೇಷವಾಗಿ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳೆರಡು ಮೈತ್ರಿ ಪಕ್ಷಗಳ ಪಾಲಾಗಿವೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ 24,888 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ 36,729 ಮತ ಪಡೆದು ಹಾಲಿ ಸದಸ್ಯ ದೇವೇಗೌಡರ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.ತ್ರಿಕೋನ ಸ್ಪರ್ಧೆ ಏರ್ಪಟ್ಟ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ 8,909 ಮತಗಳಿಂದ ಗೆದ್ದಿದ್ದು ಹಾಲಿ ಸದಸ್ಯ ನಾರಾಯಣಸ್ವಾಮಿಗೆ ಸೋಲಾಗಿದೆ‌. ಇಲ್ಲಿ ಚಲಾವಣೆಯಾದ 24,106 ಮತಗಳ ಎಣಿಕೆ ಏಳು ಸುತ್ತುಗಳಲ್ಲಿ ನಡೆದಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಗೆಲುವು ಸಾಧಿಸಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರದಲ್ಲೂ ಕಾಂಗ್ರೆಸ್‌ ಭರ್ಜರಿ‌ ಜಯಬೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ. ಕೈ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಸತತ ಎರಡನೇ ಭಾರಿಗೆ ಗೆಲುವಿನ ನಗೆ ಬಿರಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಕಲ್ಯಾಣದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.ಪ್ರಥಮ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ 39,496 ಮತಗಳು ಪಡೆದು 4,446 ಮತಗಳಿಂದ ಪ್ರತಿಸ್ಪರ್ಧಿ ಬಿ.ಜೆ.ಪಿಯ ಅಮರನಾಥ ಪಾಟೀಲ್ ಗಿಂತ ಮುನ್ನಡೆ ಸಾಧಿಸಿದ್ದರು.‌ ಆದರೆ ವಿನ್ನಿಂಗ್ ಕೋಟಾ 48,260 ಫಿಕ್ಸ್ ಮಾಡಿದ್ದರಿಂದ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮಾಡಲಾಯಿತು. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಭರ್ಜರಿ ಜಯಗಳಿಸಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆಲುವು ಸಾಧಿಸಿದ್ದಾರೆ. ಕೆ.ವಿವೇಕಾನಂದ 10,823 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮರೀತಿಬ್ಬೇಗೌಡ 6,201 ಮತಗಳನ್ನು ಪಡೆದು 4,622 ಮತಗಳ ಅಂತರದಿಂದ ಸೋಲನುಭವಿಸಿದರು. ವಿವೇಕಾನಂದ ಮೊದಲ ಪ್ರಾಶಸ್ತ್ಯ ಮತಗಳಿಂದ 4 ಬಾರೀ ಗೆದ್ದಿದ್ದ ಮರಿತಿಬ್ಬೇಗೌಡ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನ ಪರಿಷತ್ಗೆ ಆಯ್ಕೆಯಾದರು.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಬೋಜೇಗೌಡ ಗೆಲುವು ಸಾಧಿಸಿದ್ದಾರೆ. ಬೋಜೇಗೌಡ ಸಹ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ 2ನೇ ಬಾರಿಗೆ ವಿಧಾನಪರಿಷತ್ಗೆ ಆಯ್ಕೆಯಾದರು. ಅವರು 9,829 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಡಾ.ಕೆ.ಕೆ. ಮಂಜುನಾಥ್‌ 4,562 ಮತಗಳನ್ನು ಪಡೆದಿದ್ದಾರೆ. ಬೋಜೇಗೌಡ 5,267 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದರು.

 ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿ ಧನಂಜಯ್‌ ಸರ್ಜಿ ಜಯಗಳಿದರು. ಗುರುವಾರ ತಡ ರಾತ್ರಿವರೆಗೆ ನಡೆದ ಮತ ಎಣಿಕೆಯಲ್ಲಿ ಡಾ. ಧನಂಜಯ ಸರ್ಜೀ, ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.  ಚುನಾವಣೆಯಲ್ಲಿ 66,497 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಡಾ. ಧನಂಜಯ ಸರ್ಜಿಗೆ 37627 ಮತ ಲಭಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ಕಾಂಗ್ರೆಸ್ ನ ಆಯನೂರು ಮಂಜುನಾಥ್ 13,516 ಮತಗಳು ಪಡೆದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್ 2515 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ೭೦೩೯ ಮತ ಲಭಿಸಿದೆ.

RELATED ARTICLES
- Advertisment -
Google search engine

Most Popular

Recent Comments