ಸಂಗೀತವೇ ಸ್ವರ್ಗ:  ಪಂಡಿತ್ ಹಿಂದೂಧರ್‍ ಪೂಜಾರ್

ಶಿವಮೊಗ್ಗ, ಜು,೩: “ಸಂಗೀತವೇ ಸ್ವರ್ಗ” ಎಂದು ಆಕಾಶವಾಣಿ ಕಲಾವಿದರಾಗಿದ್ದ ಸಂಗೀತ ನಿರ್ದೇಶಕ ಪಂಡಿತ್ ಹಿಂದೂಧರ್‍ ಪೂಜಾರ್ ಹೇಳಿದರು .

ಅವರು  ಭಾನುವಾರ ಸಂಜೆ ಗೋಪಾಳದ “ಪೂಜಾರ್ ಅಕಾಡೆಮಿ ಆಫ್ ಮ್ಯೂಜಿಕ್” ವತಿಯಿಂದ ’ತಂಗಾಳಿಯ ಪುಷ್ಪ’ ಹೆಸರಿನಡಿಯಲ್ಲಿ ಆಯೋಜಿಸಿದ್ದ ಪಾಶ್ಚ್ಯಾತ ಮತ್ತು ಭಾರತೀಯ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಎಂಬುದು ಸ್ವರ್ಗದ ಅನುಭವ ಕೊಡುತ್ತದೆ ಇಂದಿನ ತಲ್ಲಣಗಳ ನಡುವೆ ಸಂಗೀತ ಮಾಧುರ್ಯದ ಜೊತೆಗೆ ಮುದ ನೀಡುತ್ತೆ, ಹೂವಿನ ತೋಟದಲ್ಲಿ ಬೆಳದಿಂಗಳ ತಂಪಿನ ಅನುಭವ ನೀಡುತ್ತದೆ ,ಯುವ ಪೀಳಿಗೆ ಸಂಗೀತದ ಕಡೆಗೆ ಒಲವು ತೋರಿಸಬೇಕು, ಪಾಶ್ಚಾತ್ಯ ಸಂಗೀತ ಕೂಡ ಆಕರ್ಷಕವಾಗಿರುತ್ತದೆ ಎಂದರು.

 ಸಂಗೀತ ವಿದ್ವಾನ್ ಎಸ್ ಆರ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಗೀತ ವಿಶ್ವದ ಭಾಷೆ, ಪಾಶ್ಚಾತ್ಯ ಸಂಗೀತಕ್ಕೆ ಭಾರತೀಯರು ಗೌರವ ಕೊಡುತ್ತಿರುವುದು ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿದೆ, ಎಲ್ಲ ಬಗೆಯ ಸಂಗೀತ ಕೂಡ ಇಂಪಿನ ಜೊತೆಗೆ ಆನಂದ ನೀಡುತ್ತದೆ ಎಂದರು.

 ಅಕಾಡೆಮಿಯ ಮುಖ್ಯಸ್ಥ ರಾಜೀವ್ ಪೂಜಾರ್ ಪ್ರಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀಣಾ ನಾಗರಾಜ್, ರೇಣುಕಾ ಕಾರಂತ್, ಸೇರಿದಂತೆ ಹಲವರಿದ್ದರು. ಅಕಾಡೆಮಿಯ ಪಾಶ್ಚಾತ್ಯ ಸಂಗೀತ ವಿಭಾಗದ ಮುಖ್ಯಸ್ಥ ಫ್ರಾನ್ಸಿಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರತೀಯ ಮತ್ತು ಪಾಶ್ಚಾತ್ಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನ ರಂಜಿಸಿದರು.