ಶಿವಮೊಗ್ಗ : ಪ್ರಸಕ್ತ ಸಾಲಿನಲ್ಲಿ ಭತ್ತ, ಮುಸುಕಿನ ಜೋಳ, ರಾಗಿ, ಜೋಳ, ಕಬ್ಬು ಬೆಳೆಯನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಜಿ.ಪಂ. ಸಿಇಓ ರಾಕೇಶ್ ಕುಮಾರ್ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇ ರಿಯ ನ್ಯಾಯಾಲಯ ಸಭಾಂ ಗಣ ದಲ್ಲಿ ಏರ್ಪಡಿಸಲಾಗಿದ್ದ ಬೆಳೆ ಕಟಾವು ಪ್ರಯೋಗ ಮಾಹಿತಿ ತಂತ್ರ ಜ್ಞಾನದ ಬಳಕೆ ಜಿಲ್ಲಾ ಮಟ್ಟದ ಸಮಿತಿ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಳೆ ಕಟಾವು ಕುರಿತು ಮಾಹಿತಿ ಯನ್ನು ಸಂಗ್ರಹಿಸಲು ನಿಯೋಜಿತ ೫೭೬ ಅಧಿಕಾರಿಗಳಲ್ಲಿ ೧೮೩ಜನರಿಗೆ ಮೊಬೈಲ್‌ಗಳನ್ನು ಒದಗಿಸಲಾಗಿದೆ. ಉಳಿದವುಗಳಿಗೆ ಮೊಬೈಲ್ ಅಗತ್ಯ ವಿದೆ. ೫೭೬ಅಧಿಕಾರಿಗಳು ಜಿಲ್ಲೆಯಾ ದ್ಯಂತ ೨೫೮೦ಬೆಳೆ ಕಟಾವು ಪ್ರಯೋಗ ಗಳನ್ನು ನಡೆಸಿ, ವರದಿ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಪೂರಕ ವಾಗಿ ಡಿಜಿಟಲ್ ತೂಕದ ಯಂತ್ರಗಳ ಅಗತ್ಯವಿದೆ. ಅಗತ್ಯವಿರುವ ತೂಕದ ಯಂತ್ರ ಮತ್ತು ಮೊಬೈಲ್‌ಗಳನ್ನು ಸಕಾಲದಲ್ಲಿ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಈ ಬೆಳೆ ಕಟಾವನ್ನು ಸಕಾಲದಲ್ಲಿ ನಿಯಮಾನುಸಾರ ನಡೆಸಿ, ಬೆಳೆವಾರು ವಿಸ್ತೀರ್ಣ ಮುಂತಾದ ಮಾಹಿತಿ ಯನ್ನು ಸಂರಕ್ಷಣೆ ತಂತ್ರಾಂಶ ದಲ್ಲಿ ಉನ್ನ ತೀಕರಿಸುವಂತೆ ಸೂಚಿಸಿದ ಅವರು, ಸಾರ್ವಜನಿಕ ವಲಯದಿಂದ ಹಾಗೂ ವಿಮಾ ಕಂಪನಿಗಳಿಂದ ಯಾವುದೇ ದೂರುಗಳು ಬರದಂತೆ ಕ್ರಮಕೈಗೊ ಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯನಿರ್ವಹಿಸುವ ಅಧಿಕಾರಿ ಗಳಲ್ಲಿ ಮುಖ್ಯ ತರಬೇತುದಾರರು ಹಾಗೂ ನೋಡಲ್ ಅಧಿಕಾರಿಗಳನ್ನು ಗುರುತಿಸಿ, ಕಾರ್ಯಸೂಚಿ ನೀಡಲಾ ಗಿದೆ. ಸಂಬಂಧಿತ ಅಧಿಕಾರಿಗಳು ಉಪಕರಣಗಳ ಲಭ್ಯತೆಯನ್ನು ಗಮನಿಸಿ ಪೂರ್ವಸಿದ್ಧತೆ ಕೈಗೊಳ್ಳು ವಂತೆ ಸೂಚಿಸಿದರು.
ಸಭೆಯಲ್ಲಿ ಚನ್ನಬಸಪ್ಪ, ಉಪವಿಭಾ ಗಾಧಿಕಾರಿ ಕೃಷ್ಣಮೂರ್ತಿ, ನಾಗ ರಾಜ್, ಡಾ.ಮಧುಸೂದನ್, ಸುಧಾಮಣಿ ಮೊದಲಾದವರಿದ್ದರು.