ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿಗೆ ವಿರೋಧ

ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಇಂದು ನU ರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಲಾಯಿತು.
ಕಳೆದ ೨೦ ವರ್ಷಗಳಿಂದ ಸುಮಾರು ೫೦ ರಿಂದ ೬೦ ಜನ ಬೀದಿ ಬದಿ ವ್ಯಾಪಾರಿಗಳು ಶಿರಾಳಕೊಪ್ಪ ಪಟ್ಟಣದ ಹಿರೇಕೆರೂರು ರಸ್ತೆಯಲ್ಲಿ ಸಂಜೆ ೪ ರಿಂದ ರಾತ್ರಿ ೧೦ರವರೆಗೆ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಇವರುಗಳನ್ನು ಬಲವಂತವಾಗಿ ಎತ್ತಂಗಡಿ ಮಾಡಿ, ಪಟ್ಟಣದ ಸಂತೆ ಮೈದಾನಕ್ಕೆ ಸ್ಥಳಾಂತರಿಸ ಲಾಗಿದೆ ಎಂದು ಆರೋಪಿಸಿದರು.
ಸಂತೆ ಮೈದಾನದ ಪಕ್ಕದಲ್ಲಿಯೇ ಖಾಯಂ ಮೀನು ಮಾರುಕಟ್ಟೆ ಇದೆ. ಅಲ್ಲದೆ, ಮದ್ಯದಂಗಡಿಯೂ ಸಹ ಇದೆ. ಈ ಸ್ಥಳದಲ್ಲಿ ಸಂಜೆ ವೇಳೆ ವ್ಯಾಪಾರ ಮಾಡುವುದು ಕಷ್ಟಕರ ವಾಗಿದೆ. ಅಲ್ಲದೆ ಪ್ರತೀ ಭಾನುವಾರ ಈ ಸ್ಥಳದಲ್ಲಿ ಸಂತೆ ನಡೆಯಲಿದ್ದು, ಸಂತೆ ನಡೆಯುವೆಯೇ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಕೂಡಲೇ ಶಿವಮೊಗ್ಗ ನಗರದ ಫುಡ್ ಕೋರ್ಟ್ ಮಾದರಿಯಲ್ಲಿ ಶಿರಾಳ ಕೊಪ್ಪ ಬಸ್ಟ್ಯಾಂಡ್ ಪಕ್ಕದ ಪುರಸಭೆಗೆ ಸಂಬಂಧಪಟ್ಟ ಖಾಲಿ ಜಾಗದಲ್ಲಿ ಫುಡ್‌ಕೋರ್ಟ್ ಮಾಡಿ ಕೊಡ ಬೇಕು. ಆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸ ಬೇಕು ಎಂದು ಒತ್ತಾ ಯಿಸಿದರು.
ಚಂದ್ರಕಾಂತ್ ಎಸ್.ರೇವಣ ಕರ್, ಅಯೂಬ್‌ಸಾಬ್, ಕರಿಯಪ್ಪ, ಬಂಗಾರಪ್ಪ, ಮೊದಲಾದವರಿದ್ದರು.