Sunday, October 13, 2024
Google search engine
Homeಇ-ಪತ್ರಿಕೆನಾನು ಮಾತ್ರವಲ್ಲ, ಇಬ್ಬರೂ ಗೆಲ್ಲುತ್ತೇವೆ

ನಾನು ಮಾತ್ರವಲ್ಲ, ಇಬ್ಬರೂ ಗೆಲ್ಲುತ್ತೇವೆ

ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ

ಶಿವಮೊಗ್ಗ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತೇವೆ ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಸುಮಾರು ೨೦ ಸಾವಿರ ಹೆಚ್ಚು ಮತದಾನವಾಗಿದೆ. ೮೫ ಸಾವಿರ ಮತದಾರರಿದ್ದರು. ೬೯ ಸಾವಿರ ಮತ ಚಲಾವಣೆಯಾಗಿದೆ. ಎಲ್ಲಾ ಕಡೆ ಒಳ್ಳೆ ವಾತಾವರಣವಿತ್ತು. ನಾನು ಸೇರಿದಂತೆ ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ. ಮಂಜುನಾಥ್ ಕೂಡ ಗೆಲ್ಲಲಿದ್ದಾರೆ ಎಂದರು.

ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಸರಸ್ವತಿಯ ಬದಲು ಲಕ್ಷ್ಮೀ ಪ್ರಭಾವವೇ ಹೆಚ್ಚಾಗಿತ್ತು. ಕಾಂಚಣದ ಸದ್ದು ಎಲ್ಲಾ ಕಡೆ ಕೇಳಿಬಂತು. ವೋಟು ಹಾಕುವ ಸಂದರ್ಭದಲ್ಲೂ ಕೂಡ ಕರೆಕರೆದು ಹಣ ಹಂಚಿದರು. ಈ ಭರಾಟೆಯ ನಡುವೆಯೂ ನಾವು ಗೆಲ್ಲುತ್ತೇವೆ. ಮೊದಲ ಪ್ರಾಶಸ್ತ್ಯದ ಸುಮಾರು ೩೫ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲ್ಲುತ್ತೇವೆ ಎಂದರು.

ಹೋರಾಟ ಮತ್ತು ಹಣದ ನಡುವೆಯ ಚುನಾವಣೆ ಇದಾಗಿತ್ತು. ಎರಡು ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರು. ನನಗೆ ಬಿಜೆಪಿಯ ಅಭ್ಯರ್ಥಿಗಿಂತ ಬಂಡಾಯ ಅಭ್ಯರ್ಥಿಯಾಗಿದ್ದ ರಘುಪತಿಭಟ್‌ಅವರೇ ಪೈಪೋಟಿ ನೀಡಿದ್ದಾರೆ ಎನಿಸಿದೆ. ನಾನು ಮೊದಲ ಸ್ಥಾನದಲ್ಲಿದ್ದೇನೆ. ನಂತರ ಸ್ಥಾನದಲ್ಲಿ ಉಳಿದವರು ಇದ್ದಾರೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾಶಿವರಾಜ್‌ಕುಮಾರ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿಟ್ಟುಕೊಂಡಿದ್ದೆವು. ಆದರೆ ಆಗಲಿಲ್ಲ. ಮತದಾರರ ತೀರ್ಮಾನಕ್ಕೆ ನಾವು ತಲೆಭಾಗುತ್ತೇವೆ. ಈ ಚುನಾವಣೆ ಮೋದಿ ಮತ್ತು ಗೀತಾರ ನಡುವೆಯೇ ಇದ್ದಂತೆ ಕಾಣುತ್ತಿತ್ತು. ರಾಘವೇಂದ್ರ ಅವರು ತಮಗೆ ವೋಟು ಕೊಡಿ ಎಂದು ಯಲ್ಲೂ ಕೇಳಲಿಲ್ಲ., ಇದರ ಜೊತೆಗೆ ಜಾತಿ, ಸ್ವಜನಪಕ್ಷಪಾತ, ಹಣ ಗೆದ್ದಿವೆ ಎಂದರು.

ಶಿವಮೊಗ್ಗದಲ್ಲಿ ಮೋದಿ ಗೆದ್ದರು, ದೇಶದಲ್ಲಿ ಮೋದಿ ಗೆಲ್ಲಲು ಆಗಲಿಲ್ಲ. ೪೦೦ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತೇವೆ ಎಂದಿದ್ದರು. ಆದರೆ ಸರಳ ಬಹುಮತವು ಬರಲಿಲ್ಲ. ಶ್ರೀರಾಮನನ್ನು ಮಧ್ಯ ತಂದರು.  ಅದು ಕೆಲಸ ಮಾಡಲಿಲ್ಲ. ಉತ್ತರ ಪ್ರದೇಶದಲ್ಲಿ ಅವರು ೩೫ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಲಕ್ಷ್ಮಣಪ್ಪ, ಮಲ್ಲೇಶ್, ಧೀರರಾಜ್ ಹೊನ್ನಾವಿಲೆ ಇದ್ದರು.

RELATED ARTICLES
- Advertisment -
Google search engine

Most Popular

Recent Comments