ದಿನಪತ್ರಿಕೆ ಹಂಚುವ ಯುವಕರಿಗೆ ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ವಿತರಣೆ

ವಿಶ್ವಹಿಂದೂ ಪರಿಷತ್-ಬಜರಂಗದಳ ಶಿವಮೊಗ್ಗ ದುರ್ಗಿ ಪ್ರಖಂಡ ವತಿಯಿಂದ ಇಂದು ಮುಂಜಾನೆ ಉಷಾ ನರ್ಸಿಂಗ್ ಹೋಂನ ಬಸ್ ಸ್ಟಾಪ್ ಬಳಿ ದಿನಪತ್ರಿಕೆ ಹಂಚುವ ಯುವಕರಿಗೆ ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ನೀಡಿ ಕೊರೋನಾ ಎರಡನೇ ಮಹಾಮಾರಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ವಿಶ್ವ ಹಿಂದೂ ಪರಿಷತ್ ನಗರ ಸಹ ಕಾರ್ಯದರ್ಶಿ ಮಂಜು ಶೇಟ್ , ಸುರೇಶ್ ಬಾಬು, ದುರ್ಗಿ ಪ್ರಚಂಡ ಅಧ್ಯಕ್ಷ ಪ್ರಶಾಂತ್ (ಪುಟ್ಟಣ್ಣ), ಗಂಗಾಧರ, ಪವನ, ಶ್ರೇಯಸ್ ಹಾಗೂ ಜಿಲ್ಲಾ ದಿನಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಸತೀಶ್, ಅರುಣ್ ಹೆಚ್. ಮತ್ತಿತರಿದ್ದರು.