Sunday, September 8, 2024
Google search engine
Homeಇ-ಪತ್ರಿಕೆಕೋಡಿಹಳ್ಳಿ ನೇತೃತ್ವದ  ರೈತ ಸಂಘದ ಜಿಲ್ಲಾ ಘಟಕಕ್ಕೆ ನೂತನ ಸಾರಥಿ: ಜಿಲ್ಲಾಧ್ಯಕ್ಷರಾಗಿ   ಮಂಜುನಾಥ್ ಅರೇಕೊಪ್ಪ...

ಕೋಡಿಹಳ್ಳಿ ನೇತೃತ್ವದ  ರೈತ ಸಂಘದ ಜಿಲ್ಲಾ ಘಟಕಕ್ಕೆ ನೂತನ ಸಾರಥಿ: ಜಿಲ್ಲಾಧ್ಯಕ್ಷರಾಗಿ   ಮಂಜುನಾಥ್ ಅರೇಕೊಪ್ಪ ನೇಮಕ

ಸಂಘವನ್ನು ಬಲಿಷ್ಟಗೊಳಿಸುವ ಮತ್ತು ಚಳವಳಿ ತೀವ್ರಗೊಳಿಸುವ ಉದ್ದೇಶ :  ನೂತನ ಜಿಲ್ಲಾಧ್ಯಕ್ಷ ಮಂಜುನಾಥ್ ಅರೇಕೊಪ್ಪ ಸ್ಪಷ್ಟನೆ

ಶಿವಮೊಗ್ಗ: ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕವನ್ನು ಪುನರ್‌ ರಚನೆ ಮಾಡಲಾಗಿದ್ದು,ಜಿಲ್ಲಾಧ್ಯಕ್ಷರಾಗಿ ಮಂಜುನಾಥ್ ಅರೇಕೊಪ್ಪ  ನೇಮಕವಾಗಿದ್ದಾರೆ. ಉಳಿದ ಪದಾಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಸಂಘವನ್ನು ಬಲಿಷ್ಠಗೊಳಿಸುವ  ಹಾಗೂ ಚಳುವಳಿಯನ್ನು ತೀವ್ರಗೊಳಿಸುವ ಉದ್ದೇಶದಿಂದ ಜಿಲ್ಲಾ ಸಮಿತಿಯನ್ನು ಪುನರ್‍ ರಚನೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕ ತಿಳಿಸಿದೆ.

ಜಿಲ್ಲಾ ಘಟಕದ ನೂತನ  ಜಿಲ್ಲಾಧ್ಯಕ್ಷ ಮಂಜುನಾಥ್ ಅರೇಕೊಪ್ಪ ಅವರು ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿ, ಕರ್ನಾಟಕ ರೈತರ ಪರ ಹೋರಾಟ ಮಾಡಿ, ರೈತರ ಸಂಘಟನೆ ಮಾಡಿ, ಸಂಘಟನಾ ಅರಿವು ಮೂಡಿಸಿ ರೈತ ಸಂಘದ ಅಭಿವೃದ್ಧಿಗೆ ಶ್ರಮಿಸಿದ ರೈತ ಹೋರಾಟಗಾರ ಹೆಚ್.ಎಸ್.ರುದ್ರಪ್ಪ, ಸಂಸ್ಥಾಪನಾ ಅಧ್ಯಕ್ಷರ ನೆನಪು ಕಾರ್ಯಕ್ರಮವನ್ನು ಜುಲೈ ೧೯ರಂದು ಶಿವಮೊಗ್ಗದ ಮತ್ತೂರು ಬಳಿಯ ತೀರ್ಥಪ್ಪ ಕ್ಯಾಂಪ್‌ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ರೈತ ವರ್ಗದವರು ಆಗಮಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದರು.

 ಜಿಲ್ಲಾ ಕಾರ್ಯಧ್ಯಕ್ಷ ಅಮೃತ್ ರಾಜ್ ಹಿರೇಬಿಲಗುಂಜಿ  ಮಾತನಾಡಿ, ಕೇಂದ್ರ ಮತ್ತು ರಾಜ್ಯ ರಾಜ್ಯ ಸರಕಾರಗಳು ಈಗ ಚುನಾವಣಾ ಕಾರ್ಯದಲ್ಲಿ ಮಗ್ನವಾಗಿವೆ. ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ರದ್ದು ಮಾಡಿಲ್ಲ. ಈ ಸಂಬಂಧ ನಾವು ಬೆಳಗಾವಿಯ ಸುವರ್ಣ ಸೌಧ, ಬೆಂಗಳೂರಿನ ವಿಧಾನಸೌಧದ ಮುಂದೆ ಅನೇಕ ರೀತಿಯ ಹೋರಾಟವನ್ನು ಮಾಡಿದರೂ ಪ್ರಯೋಜನವಾಗಿಲ್ಲ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರೂ ನ್ಯಾಯ ಸಿಕ್ಕಿಲ್ಲ ಎಂದು ತಿಳಿಸಿದರು.

ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರವನ್ನು ಸರಕಾರ ನೀಡಲು ಒತ್ತಾಯಿಸುತ್ತೇವೆ. ಬೆಳೆ ಪರಿಹಾರವು ಇಲ್ಲಿಯವರೆಗೆ ೬೦% ರೈತರಿಗೆ ತಲುಪಿಲ್ಲ. ಇದನ್ನು ಸರಿಪಡಿಸಲು ಆಗ್ರಹಿಸುತ್ತೇವೆ. ಮಿಷನರಿಗಳು ರೈತರ ಬದುಕನ್ನು ನುಚ್ಚುನೂರು ಮಾಡುತ್ತಿವೆ. ವಾಣಿಜ್ಯ ಬೆಳೆಯಾದ ಶುಂಠಿಯನ್ನು ರೈತರಲ್ಲದ ಇತರರು ೪೦ ಕಿಂಟಾಲ್ ಬೆಳೆದು ರೈತರ ಕೃಷಿ ಬದುಕಿಗೆ ಕೊಳ್ಳೆಯಿಡುತ್ತಿದ್ದಾರೆ. ಚುನಾವಣೆ ಬಂದಾಗ ರೈತ ಪರ ಮಾತನಾಡುತ್ತಾ, ಅಧಿಕಾರ ಬಂದ ಮೇಲೆ ಸರಕಾರದಲ್ಲಿ ದುಡ್ಡಿಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಕೋಡಿಹಳ್ಳಿ ಚಂದ್ರಶೇಖರ್‍ ನೇತೃತ್ವದ ರೈತ ಸಂಘಟನೆಯ ಜಿಲ್ಲಾ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ಪ್ರಚಾರ ಮತ್ತು ಮೇ ೧೯ರ ನೆನಪಿನ ಕಾರ್ಯಕ್ರಮದ ಸ್ಥೂಲ ಪರಿಚಯ ಮಾಡಿಕೊಡುವುದು ನಮ್ಮ ಇಂದಿನ ಪತ್ರಿಕಾಗೋಷ್ಠಿಯ ಮೂಲ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮದಲ್ಲಿ ಸಂಪೂರ್ಣ ವಿವರವನ್ನು ನೀಡುತ್ತೇವೆ. ನೂತನ ಪದಾಧಿಕಾರಿಗಳ ಆಯ್ಕೆಯು ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವುದೇ ಆಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಗೌರವ ಅಧ್ಯಕ್ಷ ಸೈಯದ್ ಶಫೀಉಲ್ಲಾ, ಹಿರೇಕಸವಿ, ಮತ್ತು ವೀರಭದ್ರಗೌಡ, ಉಪಾಧ್ಯಕ್ಷ ಬಸವರಾಜ್ ಬನ್ನೂರ್‌, ಪ್ರಧಾನ ಕಾರ್ಯದರ್ಶಿ ಸತೀಶ್ ಹೆಚ್.ಪಿ. ಬೇಡರ ಹೊಸಹಳ್ಳಿ, ಕಾರ್ಯದರ್ಶಿ ನಾಗರಾಜ್ ನಾಡಕಲಸಿ, ಸಂಚಾಲಕ ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್‍, ಸೋಮಶೇಖರ್‍ ಸಿಗ್ಗ, ಸಂಘಟನಾ ಕಾರ್ಯದರ್ಶಿ ಬಸವರಾಜ್ ಅರೇಕೊಪ್ಪ ಹಾಗೂ ಮಹಿಳಾ ಸಂಚಾಲಕಿ ಸುಮಿತ್ರ ಉಪಸ್ಥಿತರಿದ್ದರು.


ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರವನ್ನು ಸರಕಾರ ನೀಡಲು ಒತ್ತಾಯಿಸುತ್ತೇವೆ. ಬೆಳೆ ಪರಿಹಾರವು ಇಲ್ಲಿಯವರೆಗೆ ೬೦% ರೈತರಿಗೆ ತಲುಪಿಲ್ಲ. ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಡಿಎಪಿ ಗೊಬ್ಬರವನ್ನು ತೆಗೆದುಕೊಳ್ಳಬೇಕೆಂದರೆ ಬೇರೊಂದನ್ನು ತೆಗೆದುಕೊಳ್ಳಲು ಲಿಂಕ್ ಮಾಡಲಾಗುತ್ತದೆ. ರೈತ ಕೃಷಿ ಕೇಂದ್ರ  ಅಥವಾ ಸಹಕಾರಿ ಸಂಸ್ಥೆಗಳಲ್ಲಿ ೧೫೦೦ ರೂ.ನ ಡಿಎಪಿ ಗೊಬ್ಬರವನ್ನು ತೆಗೆದುಕೊಳ್ಳಬೇಕಾದರೆ ೫೦೦ ರೂ. ನ್ಯಾನೋ ಯೂರಿಯಾ ಔಷಧಿಯನ್ನು ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗುತ್ತದೆ. ಇದು ತಪ್ಪಬೇಕು.
.- ಅಮೃತ್ ರಾಜ್ ಹಿರೇಬಿಲಗುಂಜಿ ,  ಜಿಲ್ಲಾ ಕಾರ್ಯಧ್ಯಕ್ಷ


RELATED ARTICLES
- Advertisment -
Google search engine

Most Popular

Recent Comments