Tuesday, July 23, 2024
Google search engine
Homeಇ-ಪತ್ರಿಕೆಜು.6ರಂದು ನೀಟ್, ಜೆಇಇ ಕಾರ್ಯಗಾರ: ಆರ್ಯ ಅಕಾಡೆಮಿ ಮುಖ್ಯಸ್ಥ ಎನ್.ರಮೇಶ್ ಮಾಹಿತಿ

ಜು.6ರಂದು ನೀಟ್, ಜೆಇಇ ಕಾರ್ಯಗಾರ: ಆರ್ಯ ಅಕಾಡೆಮಿ ಮುಖ್ಯಸ್ಥ ಎನ್.ರಮೇಶ್ ಮಾಹಿತಿ

ಶಿವಮೊಗ್ಗ : ಆರ್ಯ ಅಕಾಡೆಮಿಯಿಂದ ನೀಟ್, ಜೆಇಇ ಕಾರ್ಯಗಾರವನ್ನು ಜು.6 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಆರ್ಯ ಅಕಾಡೆಮಿಯ ಮುಖ್ಯಸ್ಥ ಎನ್.ರಮೇಶ್ ತಿಳಿಸಿದರು.

ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪದವಿ ಉಚಿತ ಸೀಟ್ ಪಡೆಯಲು ನೀಟ್/ಜೆಇಇ ಪರೀಕ್ಷೆಗಳು ಪಾಸ್ ಮಾಡಲೇಬೇಕಾಗಿದೆ. ಇಂಥ ಪರೀಕ್ಷೆಗಳಿಗೆ ರಾಜಸ್ಥಾನದ ಕೋಟಾ ನಗರವು ದೇಶದ ಕೋಚಿಂಗ್ ಹಬ್ ಆಗಿ ಗುರುತಿಸಲ್ಪಟ್ಟಿದೆ. ನಮ್ಮ ಮಲೆನಾಡಿನ ವಿದ್ಯಾರ್ಥಿಗಳು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇರುವ ಸಂಸ್ಥೆಗಳಿಗೆ ಹೋಗಿ ಕೋಚಿಂಗ್ ಪಡೆಯುತ್ತಿದ್ದಾರೆ. ಮಲೆನಾಡಿನಲ್ಲಿ ನೀಟ್-ಜೆಇಇ ಇನ್ನಿತರ ಪರೀಕ್ಷೆಗಳಿಗೆ ಸಮರ್ಪಕ, ನಂಬಿಕಾರ್ಹ, ವಿದ್ಯಾರ್ಥಿ ಸ್ನೇಹಿ ಅನುಭವಿ ಉಪನ್ಯಾಸಕರು ಇರುವ, ಫಲಿತಾಂಶ ಖಚಿತವಾಗಿ ನೀಡುವ ಕೋಚಿಂಗ್ ಸಿಗಬೇಕು ಎನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳ ಬಹುದಿನದ ಕನಸನ್ನು ನೆನಸು ಮಾಡಲು ಶಿವಮೊಗ್ಗದ ಆರ್ಯ ಅಕಾಡೆಮಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಕೋಚಚಿಂಗ್‍ಗಳಲ್ಲಿ ತರಬೇತಿ ನೀಡಲು ರಾಷ್ಟ್ರಮಟ್ಟದ ಕೋಚಿಂಗ್ ಸಂಸ್ಥೆಗಳಲ್ಲಿ ಕನಿಷ್ಟ 30 ವರ್ಷ ಅನುಭವವಿರುವ ಉಪನ್ಯಾಸಕರ ತಂಡವು ಶಿವಮೊಗ್ಗ ನಗರವನ್ನು ಕೋಚಿಂಗ್ ಹಬ್ ಮಾಡುವ ದೃಷ್ಟಿಯಿಂದ ದಾಪುಗಾಲು ಇಡುತ್ತಿದೆ. ಈ ತಂಡದಲ್ಲಿ ಭೌತಶಾಸ್ತ್ರ ವಿಷಯದ ತಜ್ಞರಾದ ರಮಣ ಅಮರನೇನಿ, ರಸಾಯನ ಶಾಸ್ತ್ರ ವಿಷಯ ತಜ್ಞರಾದ ಚಂದ್ರಮೋಹನ್, ಗಣಿತ ತಜ್ಞರಾದ ಚಂದ್ರಶೇಖರ್ ಜೋಸ್ಯುಳ, ಜೀವಶಾಸ್ತ್ರ ವಿಷಯ ತಜ್ಞರಾದ ಚಂದ್ರಶೇಖರ್ ಕಣ್ಣನ್, ಭಾಗವಹಿಸಲಿದ್ದು, ಇವರೆಲ್ಲರು ರಾಷ್ಟ್ರಮಟ್ಟದ ಮೊದಲ ರ್ಯಾಂಕ್‍ನಿಂದ ನೂರರ ಒಳಗಿನ ಸ್ಥಾನವನ್ನು ಪ್ರತಿವರ್ಷ ಪಡೆಯುತ್ತಿದ್ದಾರೆ ಎಂದರು.

ಕಾರ್ಯಾಗಾರದ ಬಗ್ಗೆ ಹಾಗೂ ಆರ್ಯ ಅಕಾಡೆಮಿ ನೀಟ್, ಜೆಇಇ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9916321139, 08182-251408, 9008024448, 9482345858 ನ್ನು ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಭೌತಶಾಸ್ತ್ರ ತಜ್ಞ ರಮಣ ಅಮರನೇನಿ, ರಸಾಯನ ತಜ್ಞ ಚಂದ್ರಮೋಹನ್, ಜಿವಶಾಸ್ತ್ರ ತಜ್ಞ ಚಂದ್ರಶೇಖರ್ ಕಣ್ಣನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments