ಪತ್ರಿಕಾಗೋಷ್ಟಿಯಲ್ಲಿ ಅಚೀವರ್ಸ್ ಕೋಚಿಂಗ್ ಸೆಂಟರ್ ಬೋಧಕ ವರುಣ್ ನಾಯಕ್ ಮಾಹಿತಿ
ಶಿವಮೊಗ್ಗ : ಅಚೀವರ್ಸ್ ಟ್ರಸ್ಟ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ 2025 ರ ನೀಟ್ ಲಾಂಗ್‍ಟರ್ಮ್ ಪರೀಕ್ಷೆಗೆ ಉಚಿತ ತರಬೇತಿಯ ತರಗತಿಗಳು ಜು.1 ರಿಂದ ಪ್ರಾರಂಭವಾಗುತ್ತಿದ್ದು, ನೊಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೋಚಿಂಗ್ ಸೆಂಟರ್‍ನ ಬೋಧಕ ವರುಣ್ ನಾಯಕ್ ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರ ವಿದ್ಯಾರ್ಥಿಗಳು ಶೇ.97, ಗ್ರಾಮೀಣ ವಿದ್ಯಾರ್ಥಿಗಳು ಶೇ.95 ಪಡೆದಿರಬೇಕು. ಮತ್ತು 2023-24 ನೇ ವರ್ಷದ ನೀಟ್ ಪರೀಕ್ಷೆ ಬರೆದು 400 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ತರಬೇತಿಗೆ ಒಟ್ಟು ಶುಲ್ಕ ರೂ.65,000 ಇರುತ್ತದೆ. ಎಸ್‍ಸಿ, ಎಸ್‍ಟಿ, ಓಬಿಸಿ, ಮೈನಾರಿಟಿ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ.92 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಲ್ಲಿ ಶೇ.50 ರಷ್ಟು ಅಂದರೆ ರೂ.32,000ರಷ್ಟು ರಿಯಾಯಿತಿ ನೀಡಲಾಗುವುದು. ಪಿಯುಸಿಯಲ್ಲಿ ಶೇ.90 ಕ್ಕಿಂತ ಕಡಿಮೆ ಅಂಕವನ್ನು ಪಡೆದ ವಿದ್ಯಾರ್ಥಿಗಳು ವಿಶೇಷ ರಿಯಾಯಿತಿ ಪಡೆಯಲು ಅಚೀವರ್ಸ್ ಅಕಾಡೆಮಿಯ ಪರೀಕ್ಷೆಯನ್ನು ಮಾನದಂಡವಾಗಿ ನೀಡಲಾಗುವುದು ಎಂದರು.
ಪ್ರಸಕ್ತ ವರ್ಷ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂಜೆ ಮತ್ತು ವೀಕೆಂಡ್ ಕೆ-ಸೆಟ್ ಹಾಗೂ ನೀಟ್ ತರಗತಿಗಳು ಲಭ್ಯವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಿಲಕ್ ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ವಾಟರ್ ಟ್ಯಾಂಕ್ ಹತ್ತಿರದಲ್ಲಿರುವ ಕಚೇರಿಗೆ ಭೇಟಿ ನೀಡಲು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಬೋಧಕರಾದ ಮಣಿಕಂಠ ಮತ್ತು ಮಹೇಶ್ ಭಟ್ ಉಪಸ್ಥಿತರಿದ್ದರು.