ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಆರೋಪಿಗಳನ್ನು ಬಂಧನ ಮಾಡಲಾಗಿದೆ. ಈಗ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳು ಡಿವೈಎಸ್ಪಿ ದಿನಕರ್ ಮುಂದೆ ಶರಣಾಗಿದ್ದಾರೆ. ಬಂಧಿತ ಆರೋಪಿ ಜಗ್ಗು ಅಲಿಯಾಸ್ ಜಗದೀಶ್ ಹಾಗೂ ಅನುಕುಮಾರ್ ಎಂಬ 7ನೇ ಆರೋಪಿ
ಚಿತ್ರದುರ್ಗದಲ್ಲಿ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೊಲೆ ಪ್ರಕರಣದ 8ನೇ ಆರೋಪಿ, ಕುರುಬರಹಟ್ಟಿ ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ರವಿ ಗುರುವಾರ ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ತಮ್ಮನ್ನು ಬಿಡುವುದಿಲ್ಲ ಎಂಬ ಭಯದಿಂದ ಆರೋಪಿಗಳು ತಾವಾಗೇ ಬಂದು ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ.