ಹರಿಹರ : ನಗರದಲ್ಲಿ ಇತ್ತೀಚಿಗೆ ದಿನದಿಂದ ದಿನಕ್ಕೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು ಜನರಿಗೆ ಆರಂಭವಾಗಿದೆ ರೋಗಗಳ ಪೀಕಲಾಟ ಇದನ್ನು ಗಮನಿಸಲು ಸಾರ್ವಜನಿಕ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ ಪರಿಣಾಮ ನಗರದ ಜನತೆಗೆ ತಪ್ಪದ ಗೋಳಾಟ.
ಮಳೆಗಾಲ ಆರಂಭವಾಗುತ್ತಿದೆ ಈಗಾಗಲೇ ಕೆಲವು ಮಳೆಗಳು ಬಂದಿದ್ದು ನಗರದಲ್ಲಿರುವ ಚರಂಡಿಗಳು ಸಣ್ಣಪುಟ್ಟ ಕಾಲುವೆಗಳು ಕಸದಿಂದ ತುಂಬಿದ್ದು ಸ್ವಚ್ಛತೆ ಕಾಣದೆ ಗಲೀಜಿನ ಗೂಡಾಗುತ್ತಿವೆ ಇದಾವುದರ ಬಗ್ಗೆ ಅರಿವೇ ಇಲ್ಲದಂತೆ ನಗರಸಭೆಯ ಅಧಿಕಾರಿಗಳು ತಮ್ಮದೇ ಆದ ಕೆಲಸದಲ್ಲಿ ಮಗ್ನರಗಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಬೆಳಗಿನ ಹೊತ್ತು ಅಲ್ಲಲ್ಲಿ ಕಾಣಿಸಿಕೊಳ್ಳುವ ನಗರ ಸಭೆಯ ಅಧಿಕಾರಿಗಳು ತಮ್ಮದೇ ವಿಚಾರ ಧಾರೆಯಲ್ಲಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಇವರಿಗೆ ಸಾರ್ವಜನಿಕರ ಬಗ್ಗೆ ಯಾವುದೇ ಕಾಳಜಿ ಕಾಣಿಸುತ್ತಿಲ್ಲ.
ನಗರದಾದ್ಯಂತ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು ಅದರಲ್ಲೂ ಬಡ ಜನತೆ ವಾಸಿಸುವ ಪ್ರದೇಶಗಳಲ್ಲಂತೂ ಸೊಳ್ಳೆಗಳ ಕಾಟ ಹೇಳುತ್ತೀರದಂತಾಗಿದೆ ಆ ಭಾಗದ ಜನರಿಗೆ ಸ್ವಚ್ಛತೆಯೇ ಇಲ್ಲವಾಗಿದೆ ಕೇವಲ ಶ್ರೀಮಂತರ ಬಂಡವಾಳಶಾಹಿಗಳ ಮನೆ ಓಣಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಕೊಳಚೆ ಪ್ರದೇಶಗಳು ಬಡವರ ಬಡಾವಣೆಗಳು ಸ್ವಚ್ಛತೆ ಇಲ್ಲವಾಗಿದೆ ಬಡವರು ಯಾವುದೇ ರೀತಿಯ ಸ್ವಚ್ಛತೆಗೆ ಗಮನಹರಿಸಲು ಬೇಡಿಕೆ ಸಲ್ಲಿಸಿದಾಗ ಅದಕ್ಕೆ ಮಾನ್ಯತೆ ಇಲ್ಲದಾಗಿದೆ ಇದನ್ನು ನಗರ ಸಭೆಯ ಅಧಿಕಾರಿಗಳು ಗಮನಿಸಬೇಕಾಗಿದ ಅಗತ್ಯ ತುರ್ತಾಗಿದೆ.
ನಗರದ ಕೆಲವೊಂದು ಬಡಾವಣೆಗಳು ಮತ್ತು ಚರಂಡಿಗಳ ಸ್ವಚ್ಛತೆಗೆ ಸರಿಯಾದ ಆದ್ಯತೆ ಇಲ್ಲದೆ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿಯೂ ಸ್ವಚ್ಛತೆ ಮಾಡಿ ಕೈ ತೊಳೆದುಕೊಳ್ಳುವ ನಗರಸಭೆಯ ಅಧಿಕಾರಿಯಾಗಿ ಸಿಬ್ಬಂದಿಗಳು ಆ ಭಾಗದ ಮುಖಂಡರುಗಳು ದೂರವಾಣಿ ಕರೆ ಮಾಡಿದಾಗ ಅಷ್ಟೇ ಬಂದು ಸ್ವಚ್ಛತೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಅಧಿಕಾರಿಗಳು ಮುಖಂಡರಿಲ್ಲದ ಬಡಾವಣೆಗಳು ಸ್ವಚ್ಛತೆ ಕಾಣದೆ ಗಲೀಜು ಗಲೀಜು…!!!
ಲಕ್ಷಾಂತರ ಸೋಂಕುಗಳಿಗೆ ಸೊಳ್ಳೆಗಳು ಒಂದೇ ಕಾರಣ. ಪ್ರತಿ ವರ್ಷ ಅಂದಾಜು 40 ಮಿಲಿಯನ್ ಭಾರತೀಯರು ಸೊಳ್ಳೆಯಿಂದ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ. ಸೋಂಕಿತ ಸೊಳ್ಳೆ ಕಚ್ಚುವಿಕೆಯ ಮೂಲಕ ರೋಗಗಳು ಹರಡುತ್ತವೆ. ಸೊಳ್ಳೆ ಕಡಿತವು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಾಯಿಗಳು ಮತ್ತು ಕುದುರೆಗಳಿಗೆ ವಿವಿಧ ರೋಗಗಳು ಮತ್ತು ಪರಾವಲಂಬಿಗಳನ್ನು ವರ್ಗಾಯಿಸುತ್ತದೆ. ಸೊಳ್ಳೆ ಕಡಿತದಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳ ದೀರ್ಘ ಪಟ್ಟಿ ಇದೆ, ಇದನ್ನು ಕೆಳಗೆ ಗಮನಾರ್ಹ ವಿವರವಾಗಿ ಚರ್ಚಿಸಲಾಗಿದೆ: