Sunday, October 13, 2024
Google search engine
Homeಅಂಕಣಗಳುಲೇಖನಗಳುಮೋದಿ ನಡೆ ರಾಹುಲ್‌ಗೆ ಮಾದರಿಯಾದೀತೆ?

ಮೋದಿ ನಡೆ ರಾಹುಲ್‌ಗೆ ಮಾದರಿಯಾದೀತೆ?

ಲೇಖನ : ಶಾಂತಪ್ರಿಯ

ಮೋದಿ ನಡೆ ರಾಹುಲ್‌ಗೆ ಮಾದರಿಯಾದೀತೆ?

ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿದ್ದಾರೆ. ೪೨ನೇ ವಯಸ್ಸಿನಲ್ಲೇ ಉತ್ತರಪ್ರದೇಶ ದಂಥ ಬೃಹತ್ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ದ್ದಾರೆ. ಹಾಗೆಂದು ಇವರು ರಾಜಕೀಯಕ್ಕೆ ಹೊಸಬರಲ್ಲ, ಐದು ಬಾರಿ ಎಂ.ಪಿ. ಆಗಿದ್ದ ವರು, ಸದನದಲ್ಲಿ ಗಮನ ಸೆಳೆಯುವಂತೆ ಸದ್ದು ಮಾಡಿದ್ದವರು.

ಉಗ್ರಹಿಂದುತ್ವಕ್ಕೆ ಹೆಸರಾದವರು. ಈ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾ ವಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ ವರಲ್ಲಿ ಇವರೂ ಒಬ್ಬರು. ಯೋಗಿಗೆ ಮುಸ್ಲಿಮರ ಬೆಂಬಲವೂ ಇದೆ ಎಂದು ಹೇಳಲಾಗುತ್ತದೆ.ಹುಟ್ಟಿನಲ್ಲಿ ರಜಪೂತ ಆಗಿರುವ ಯೋಗಿ ತಮ್ಮ ಸುತ್ತ ಓಬಿಸಿ ಕೋಟೆ ಕಟ್ಟಿಕೊಂಡವರು. ಯೋಗಿಯವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಆರೆ ಸ್ಸೆಸ್ ಪಾತ್ರವಿದೆ ಎಂದು ವಿರೋಧಿಗಳು ಹೇಳುತ್ತಾರೆ.

ಅದೇನೇ ಇರಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ನಿಜವಾದ ಹೀರೋ ಆಗಿ ವಿಜೃಂಭಿಸಿದ್ದು, ನರೇಂದ್ರ ಮೋದಿ ಆಯ್ಕೆಯೇ ಅಂತಿಮ ಎನ್ನುವ ವಾತಾವರಣ ಬಿಜೆಪಿ ಹೈ ಕಮಾಂಡ್‌ನಲ್ಲಿ ಆರ್‌ಎಸ್‌ಎಸ್ ಮತ್ತಿತರೆ ಪ್ರಭಾವಗಳನ್ನು ಸಮ ತೋಲನಗೊಳಿಸಲು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಮಾಡ ಲಾಗಿದೆ. ಈ ಇಬ್ಬರೂ ಕೇಶವಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮ ಇವರಲ್ಲಿ ಯಾರನ್ನಾ ದರೂ ಒಬ್ಬರನ್ನು ಸಿಎಂ ಮಾಡಿದ್ದರೆ ಅಷ್ಟೊಂದು ಸುದ್ದಿ ಆಗುತ್ತಿರಲಿಲ್ಲ. ಹೈಕಮಾಂಡ್ ಹೇಳಿದ್ದನ್ನು ಕೇಳಿಕೊಂಡು ಹೋಗುವ ವ್ಯಕ್ತಿ ಎನ್ನಲಾಗುತ್ತಿತ್ತು.

ಏಕೆಂದರೆಇವರು ಯೋಗಿ ಆದಿತ್ಯರಂತೆ ಉಗ್ರ ಹಿಂದುತ್ವವಾದಿಗಳಲ್ಲ. ಸಂಘ, ಪರಿ ವಾರದ ಫೈರ್ ಬ್ರಾಂಡ್‌ಗಳಲ್ಲ. ಯೋಗಿ ಮುಖ್ಯಮಂತ್ರಿ ಯಾದ್ದರಿಂದ ದೇಶದ ಎಲ್ಲಾ ಪಕ್ಷಗಳೂ ಬೆರಗಾ ಗಿವೆ. ಹುಬ್ಬೇರಿಸಿವೆ. ಜೆಡಿಯು ಪಕ್ಷದಲ್ಲಿ ಒಂದು ತಮಾಷೆ ನಡೆದಿದೆ.
ರಾಷ್ಟ್ರೀಯ ಕಾರ್ಯದರ್ಶಿ ತ್ಯಾಗಿ ‘ ಯೋಗಿ ಮುಖ್ಯಮಂತ್ರಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಭಾರೀ ಪೆಟ್ಟು ಬಿದ್ದಂತಾಗಿದೆ’ ಎಂದು ಹೇಳಿ ದ್ದಾರೆ, ಅದೇ ಜೆಡಿಯು ರಾಷ್ಟ್ರೀಯ ಮುಖಂಡ ಶರದ್‌ಯಾದವ್ ’‘ಯೋಗಿಗೆ ಕಂಗ್ರಾಟ್ಸ್” ಹೇಳಿದ್ದಾರೆ. ಇದೇ ಆಧಾರದಲ್ಲಿ ಜೆಡಿಯು ಹೋಳಾದರೆ ಅಚ್ಚರಿ ಇಲ್ಲ.

ಅದೇ ರೀತಿ ಉಗ್ರ ಇಸ್ಲಾಮ್ ವಾದಿ ಓವೈಸಿ ಯನ್ನು ಮಾಧ್ಯಮ ಪ್ರತಿನಿಧಿಗಳು, ‘ನೀವು ಉತ್ತರ ಪ್ರದೇಶ ಚುನಾವಣೆಯನ್ನು ಬಿಜೆಪಿಗೆ ಸಹಾಯ ಆಗುವಂತೆ ಮಾಡಿದಿರಾ ?’ ಎಂದು ಪ್ರಶ್ನಿಸಿದರು. ಅದಕ್ಕೆ ಓವೈಸಿ ಪ್ರತಿಕ್ರಿಯೆ ಹೀಗಿತ್ತು.‘ ಸ್ವಾತಂತ್ರ್ಯದ ೭೦ ವರ್ಷಗಳಿಂದಲೂ ಮೋಸ ಮಾಡುತ್ತಾ ಬಂದ ಪಕ್ಷಗಳಿಗೆ ಉತ್ತರ ಪ್ರದೇಶದ ಮುಸ್ಲಿಮರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಹೇಳಿದರು.

ಸಿಪಿಐ (ಎಂ) ಪಕ್ಷ ‘ಯೋಗಿಯವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ವಿಚ್ಛಿದ್ರ ಕಾರಿತನಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಮತ್ತು ಮೋದಿ ಪ್ರತಿ ಭಾಷಣದಲ್ಲಿ ಪ್ರಸ್ತಾಪಿಸುವ ‘ಸಬ್‌ಕೆ ಸಾಥ್’ ಎನ್ನುವ ಮಾತು ಸುಳ್ಳಾಗಿದೆ’ ಎಂದು ಹೇಳಿದೆ.

ಬಿಜೆಪಿ ಜೊತೆಗೆ ಸದಾ ಇರುಸುಮುರುಸು ಮಾಡಿಕೊಳ್ಳುವ ಶಿವಸೇನಾ ಯೋಗಿಯ ನೇಮಕದ ಬಗ್ಗೆ ಸಂತೋಷ ವ್ಯಕ್ತಪಡಿಸಿಲ್ಲ.

ರಾಮಜನ್ಮ ಭೂಮಿ ಹೋರಾಟ :

ಉತ್ತರ ಪ್ರದೇಶಗೋರಖ್‌ನಾಥ ಪಂಥದ ಮಠದ ಮಹಂತ ಆಗಿದ್ದ. ಅವೈದ್ಯನಾಥ್, ‘ಹಿಂದೂ ಯುವ ಸೇನೆ’ಯನ್ನು ಆರಂಭಿಸಿದ್ದರು. ಈ ಸಂಘ ಟನೆಗೆ ಅಜಯ್‌ಸಿಂಗ್ ಬಿಷ್ಟ್ಯ್ ಸೇರಿದರು.

ಇವರಿಗೆ ಮಹಂತವೈದ್ಯನಾಥ್ ಆಪ್ತ ವ್ಯಕ್ತಿಯಾ ಗಿದ್ದರು. ಮಹಂತ್ ವೈದ್ಯನಾಥ್ ಅಜಯ್ ಸಿಂಗ್‌ಗೆ ಮಹಂತ ಪಟ್ಟ ಕಟ್ಟಿ ‘ಯೋಗಿ ಆದಿತ್ಯ’ ಎಂದು ನಾಮಕರಣ ಮಾಡಿದರು. ಅಂದಿನಿಂದ ಯೋಗಿ ಆದಿತ್ಯ ಆದರು.

ರಾಮಜನ್ಮಭೂಮಿ ಹೋರಾಟದಲ್ಲಿ ಬೆಳಕಿಗೆ ಬಂದ ಆದಿತ್ಯನಾಥ. ತನ್ನ ೨೧ನೇ ವಯಸ್ಸಿಗೆ ಲೋಕಸಭೆಗೆ ಆರಿಸಿ ಬಂದರಲ್ಲದೇ ಸತತ ೫ ಬಾರಿ ಸಂಸದರಾಗಿದ್ದರು. ಇತ್ತೀಚೆಗೆ ಮುಖ್ಯ ಮಂತ್ರಿ ಯಾದ ಕಾರಣ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ರಾಮಜನ್ಮ ಭೂಮಿ ಹೋರಾಟವೇ ಅವರು ಮುಖ್ಯಮಂತ್ರಿ ಪದವಿಗೆ ಬರಲು ಕಾರಣ ಎನ್ನಲಾಗುತ್ತಿದೆ.
ಮೋದಿ ಕಣ್ಣು ಯೋಗಿ ಮೇಲೆ : ಯೋಗಿ ಆದಿತ್ಯ ಮತ್ತು ಪ್ರಧಾನಿ ಮೋದಿಯವರ ಸಂಬಂಧ ಹಳೆಯದು ಮತ್ತು ಮೋದಿಯವರಿಗೆ ಯೋಗಿ ಆಪ್ತ ವ್ಯಕ್ತಿಯಾಗಿದ್ದರ ಹಿಂದೆ ಹಲವು ಕಾರಣಗಳಿವೆ. ಮೋದಿ ಮತ್ತು ಯೋಗಿಯ ನಡುವೆ ವೈಯಕ್ತಿಕ ಬದುಕಿನ ಸಾಮ್ಯತಗಳಿವೆ. ಮೋದಿಯವರೂ ಯೌವ್ವನದಲ್ಲಿ ಮನೆ ಬಿಟ್ಟು ಹೊರ ಬಂದು ಸಂಘ ಸೇರಿದವರು. ಅದೇ ರೀತಿ ಯೋಗಿ ಕೂಡಾ ಮನೆ ಬಿಟ್ಟು ಬಂದು ಸಂಘ ಸೇರಿದವರು.

ಬದುಕನ್ನು ಸಾರ್ವಜನಿಕ ಹಾಗೂ ಹಿಂದುತ್ವದ ಹೋರಾಟಗಳಿಗಾಗಿ ಮುಡುಪಿಟ್ಟರು. ಹೀಗೆ ಮೋದಿ ಮತ್ತು ಯೋಗಿಯ ನಡುವೆ ಪರಸ್ಪರ ಆಕರ್ಷಣೆ ಉಂಟಾಯಿತು.
ಇನ್ನೊಂದು ಮುಖ್ಯ ಕಾರಣವೆಂದರೆ, ಬಹಳಷ್ಟು ಸ್ವಾಮಿ ಗಳು ತಾವಾಯಿತು, ತಮ್ಮ ಮಠವಾಯಿತು ಎನ್ನುವಂತಿರುತ್ತಾರೆ. ಆದರೆ ಯೋಗಿ ಹಾಗಲ್ಲ. ಸ್ವಾಮಿ ಆಗಿದ್ದುಕೊಂಡೇ ಸಕ್ರಿಯ ರಾಜಕಾರಣ ದಲ್ಲಿ ತೊಡಗಿಸಿ ಕೊಂಡಿದ್ದು, ಮೋದಿಯವರಿಗೆ ಇಷ್ಟವಾ ಯಿತಂತೆ.
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಸಂಖ್ಯೆಯಲ್ಲಿ ೭೧ ಸ್ಥಾನಗಳನ್ನು ಉತ್ತರ ಪ್ರದೇಶದಲ್ಲಿ ಗೆಲ್ಲಲು ಆದಿತ್ಯನಾಥರ ಶ್ರಮ ಕಾರಣ ಎನ್ನಲಾಗಿದೆ. ಬಿಜೆಪಿ ಶೇ.೪೨. ೩೦ರಷ್ಟು ಮತಗಳನ್ನು ಬಾಚಿಕೊಂಡಿತು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಕೇವಲ ೧೦ ಸ್ಥಾನಗಳನ್ನು ಹೊಂದಿತ್ತು. ಹೀಗಾಗಿ ಸಂಸತ್ ಚುನಾವಣೆಯಲ್ಲಿ ಯೋಗಿ ಆದಿತ್ಯರ ಪಾತ್ರ ಗಣನೀಯವಾಗಿತ್ತು.

ಯೋಗಿ ಮನೆ, ಮನೆಗೆ ತೆರಳಿ ಮತದಾರರಲ್ಲಿ ವಿಶ್ವಾಸ ಮೂಡಿ ಸಿದ ಪರಿ, ಅವರ ಅವಿರತ ಶ್ರಮ ಮೋದಿ ಯವರಲ್ಲಿ ವಿಸ್ಮಯ ಮೂಡಿಸಿತ್ತು. ಯುಪಿ ಸಿಎಂ ಪಟ್ಟಕ್ಕೆ ಮೋದಿ ಎದುರಿಗೆ ಮೊದಲು ಕಂಡಿದ್ದು ರಾಜನಾಥ್ ಸಿಂಗ್, ಆದರೆ ರಾಜನಾಥ ಸಿಂಗ್ ಮುಖ್ಯ ಮಂತ್ರಿ ಯಾಗಲು ಒಲವು ತೋರಿಸದ ಕಾರಣ ಯೋಗಿಯವರ ಮೇಲೆ ಅಮಿತ್ ಷಾ ಮೋದಿ ಜೋಡಿಯ ಕಣ್ಣು ಬಿದ್ದು ಅಚ್ಚರಿ ರೀತಿಯಲ್ಲಿ ಯೋಗಿ ಸಿಎಂ ಆಗಿಬಿಟ್ಟರು.

RELATED ARTICLES
- Advertisment -
Google search engine

Most Popular

Recent Comments