ಶಿವಮೊಗ್ಗ : ಕಾಂಗ್ರೆಸ್ ಪ್ರಧಾನಿಗಳ ಮುಂದೆ ಈಗಿನ ಪ್ರಧಾನಿ ನರೇಂದ್ರ ಮೋದಿ ಶೂನ್ಯ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪ್ರಧಾನಿ ಗಳ ಮುಂದೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಶೂನ್ಯರಾಗಿದ್ದಾರೆ. ಹಿಂದಿನ ನಮ್ಮ ಪಕ್ಷದ ಪ್ರಧಾನಿಗಳು ಈ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಚಿಂತನೆ ನಡೆಸಿ, ಹಲವು ಕಾರ್ಯಕ್ರ ಮಗಳನ್ನು ರೂಪಿಸಿದ್ದರ ಪರಿಣಾಮ ಇಂದು ದೇಶ ಪ್ರಗತಿಯ ಹಾದಿಯಲ್ಲಿದೆ ಎಂದರು.
ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಶ್ರೀಮತಿ ಇಂದಿರಾಗಾಂಧಿ, ರಾಜೀವ್‌ಗಾಂಧಿ, ಪಿ.ವಿ. ನರಸಿಂಹರಾವ್,ಮನಮೋಹನ್ ಸಿಂಗ್ ಇವರುಗಳು ದೇಶದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರು. ರಾಜೀವ್ ಗಾಂಧಿ ಅವರು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ದರು ಎಂದರು.
ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಭಾಷಣ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲವಾಗಿದೆ ಎಂದ ಅವರು, ಬಿಜೆಪಿಯವರು ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಅವರ ಭ್ರಮೆಯಾಗಿದೆ ಎಂದು ಟೀಕಿಸಿದರು.
ಲಕ್ಷಾಂತರ ಸಂಖ್ಯೆಯ ಕಾರ್ಯ ಕರ್ತರು ಪಕ್ಷದ ಏಳಿಗೆಗಾಗಿ ದುಡಿಯುತ್ತಿ ದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದು ಬಿಜೆಪಿ ಯವರ ಹೇಳಿಕೆ ಸಣ್ಣತನದ್ದು ಎಂದ ಅವರು, ಸಾವಿರ ಮೋದಿ ಬಂದರೂ ಕೂಡಾ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದರು.
ಆ.೯ ರಂದು ಕ್ವಿಟ್ ಇಂಡಿಯಾ ಚಳವಳಿಯ ದಿನಾಚರಣೆ ಅಂಗವಾಗಿ ನಮ್ಮ ಪಕ್ಷದ ವತಿಯಿಂದ ಅಂದು ಬೆಳಿಗ್ಗೆ ೧೧ ಗಂಟೆಗೆ ಪಕ್ಷದ ಕಛೇರಿಯಿಂದ ಗಾಂಧಿ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆವರೆಗೆ ಜಾಥಾವನ್ನು ನಡೆಸಲಾಗುವುದು. ಮಧ್ಯಾಹ್ನ ೩ ಗಂಟೆಗೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು. ಆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್.ರಮೇಶ್, ಸತ್ಯನಾರಾ ಯಣ್‌ರಾವ್, ವೈ.ಹೆಚ್. ನಾಗರಾಜ್, ಲೋಕ ನಾಥ್, ಮರಿಯಪ್ಪಗೌಡ ಮೊದಲಾದವರಿದ್ದರು.