ಶಿವಮೊಗ್ಗ: ನಗರದಲ್ಲಿ ವಾಸವಿ ರುವ ಸೂರಿಲ್ಲದವರಿಗೆ ಸೂರು ನೀಡು ವುದು ನನ್ನ ಮೊದಲ ಆದ್ಯತೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ನಗರದ ಅಭಿವೃದ್ಧಿ ವಿಷಯದಲ್ಲಿ ಎಲ್ಲರ ಸಲಹೆ, ಸಹಕಾರ ಪಡೆದುಕೊಂಡು ಕಾರ್ಯೋ ನ್ಮುಖನಾಗುತ್ತೇನೆ ಎಂದರು.
ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಸಲ್ಲದು. ಯಾರೂ ಸಹ ರಾಜಕಾರಣ ವನ್ನು ಈ ವಿಷಯದಲ್ಲಿ ಮಾಡಬಾ ರದು ಎಂದ ಅವರು, ಶಿವಮೊಗ್ಗ ನಗರದ ಹಿತದೃಷ್ಟಿಯಿಂದ ಮತ್ತು ನಗರದ ನಾಗರೀಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಯುಜಿಡಿ, ಪರಿಸರ ಮತ್ತು ವಿಮಾನ ನಿಲ್ದಾಣ ಮಾಡುವಂತಹ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಗೋವಿಂದಪುರ ಹಾಗೂ ಗೋಪಶೆಟ್ಟಿಕೊಪ್ಪದಲ್ಲಿ ಬಡವರಿಗೆ ಮನೆ ಕಟ್ಟಿಕೊಡಲು ೬೪ ಎಕರೆ ಭೂಮಿ ಮೀಸಲಿಡಲಾಗಿದೆ. ಈಗಾಗಲೇ ೪೭೫೦ ಮಂದಿ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಸುಮಾರು ೧ ಸಾವಿರ ಮಂದಿಗೆ ಮನೆ ಕಟ್ಟಿಕೊಡಲು ಅವಕಾಶವಿದೆ. ಆಗಸ್ಟ್ ೧ರಿಂದ ಆ.೧೫ರವರೆಗೆ ಅರ್ಜಿ ಸಲ್ಲಿಸದೇ ಇರುವವರಿಗೆ ಅರ್ಜಿ ಸಲ್ಲಿಸಲು ಅವ ಕಾಶ ನೀಡಲಾಗುವುದು ಎಂದರು.
ಜಿ ಪ್ಲಸ್ ೨ ಮಾದರಿಯಲ್ಲಿ ಕಟ್ಟುವ ಪ್ರತಿ ಮನೆಗೆ ೫ ಲಕ್ಷ ವೆಚ್ಚವಾ ಗಲಿದ್ದು, ಈ ಪೈಕಿ ಸಾಮಾನ್ಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಂದ ೩.೨೦ ಲಕ್ಷ ರೂ. ಹಣ ಬರ ಲಿದ್ದು, ಎಸ್ಸಿ-ಎಸ್ಟಿ ಜನರಿಗೆ ೩.೫೦ಲಕ್ಷರೂ. ಬರಲಿದೆ. ಸಾಮಾನ್ಯ ಫಲಾನು ಭವಿಗಳು ೮೦ ಹಾಗೂ ಎಸ್ಸಿಎಸ್ಟಿ ೫೦ ಸಾವಿರ ಕಟ್ಟಬೇಕು. ಉಳಿದ ೧ಲಕ್ಷ ರೂ.ಗೆ ಬ್ಯಾಂಕ್ ಲೋನ್ ಮಾಡಿಸಲಾಗು ವುದು. ಮನೆಗೆಗಾಗಿ ಕಂತಿನ ಹಣ ಕಟ್ಟಿದ ಫಲಾನುಭವಿಗಳಿಗೆ ೨ ತಿಂಗಳಲ್ಲಿ ಮನೆಕಟ್ಟಲು ಪ್ರಾರಂಭಿಸ ಲಾಗು ವುದು ಎಂದರು.
ಇದಲ್ಲದೆ ದೇವಕಾತಿಕೊಪ್ಪದಲ್ಲಿನ ೮೦ ಎಕರೆ ಜಾಗದಲ್ಲಿ ಕಾರ್ಮಿಕರಿಗೆ ಮನೆ ಕಟ್ಟಿಕೊಡಲು ಉದ್ದೇಶಿಸಿದ್ದು, ಆದಾಯ ಮಿತಿಯ ತಾಂತ್ರಿಕ ಸಮಸ್ಯೆ ಯನ್ನು ನಿವಾರಿಸಿಕೊಂಡು ಇದಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಒಳಚರಂಡಿ ಕಾಮಗಾರಿ ಯನ್ನು ತ್ವರಿತಗೊಳಿಸಲು ಸಚಿವ ಖಾದರ್ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮಾರ್ಚ್ ತಿಂಗಳೊಳಗೆ ನಗರದ ಒಳಚರಂಡಿ ಕೆಲಸ ಪೂರ್ಣ ಗೊಳಿಸು ವುದಾಗಿ ತಿಳಿಸಿದರು.
ನಗರಕ್ಕೆ ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದೆ ಆದರೆ ಇದಕ್ಕೆ ಎಂ.ಡಿ. ನೇಮಿಸಿಲ್ಲ, ಸರಿ ಯಾಗಿ ಸಿಬ್ಬಂದಿ ಇಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡು ತ್ವರಿತಗತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಂಡು ಶಿವ ಮೊಗ್ಗವನ್ನು ಮಾದರಿ ನಗರವಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.