Tuesday, July 23, 2024
Google search engine
Homeಇ-ಪತ್ರಿಕೆಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಉದ್ಘಾಟಿಸಿದ ಶಾಸಕ ಚನ್ನಬಸಪ್ಪ

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಉದ್ಘಾಟಿಸಿದ ಶಾಸಕ ಚನ್ನಬಸಪ್ಪ

ಶಿವಮೊಗ್ಗ: ದುರ್ಗಿಗುಡಿ ಸರ್ಕಾರಿ ಆಂಗ್ಲಮಾಧ್ಯಮ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದಿನಿಂದ ಎಲ್‌ಕೆಜಿಯನ್ನು ಪ್ರಾರಂಭಿಸಲಾಗಿದ್ದು, ಶಾಸಕ ಚನ್ನಬಸಪ್ಪ ಉದ್ಘಾಟಿಸಿದರು.

ಶಿವಮೊಗ್ಗ ತಾಲ್ಲೂಕಿಗೆ ಎರಡು ನರ್ಸರಿ ಶಾಲೆಗಳು ಮಂಜೂರಾಗಿದ್ದು, ಅದರಲ್ಲಿ ದುರ್ಗಿಗುಡಿ ಶಾಲೆಯು ಒಂದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ಪುಟ್ಟಮಕ್ಕಳಿಗೆ ಈ ತರಗತಿ ನಡೆಯುತ್ತಿದ್ದು, ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ ಎಂದು ಶಿಕ್ಷಣಾ ಇಲಾಖೆಯಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಶಾಸಕ ಚನ್ನಬಸಪ್ಪ, ದುರ್ಗಿಗುಡಿ ಶಾಲೆ ರಾಜ್ಯದಲ್ಲೇ ಒಂದು ಮಾದರಿ ಶಾಲೆಯಾಗಿದ್ದು, ಅನೇಕ ಗಣ್ಯರು ಇಲ್ಲೆ ಶಿಕ್ಷಣ ಪಡೆದಿದ್ದಾರೆ. ಸರ್ಕಾರದ ಈ ನೂತನ ಪ್ರಯೋಗ ಇಲ್ಲಿಂದಲೇ ಪ್ರಾರಂಭವಾಗಿದ್ದು, ಸಂತೋಷವಾಗಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಈ ಯೋಜನೆ ಅನುಕೂಲವಾಗಲಿದೆ, ಈಗಾಗಲೇ ಸುಮಾರು 22 ಮಕ್ಕಳು ತರಗತಿಗೆ ಸೇರಿದ್ದಾರೆ ಎಂದರು.

ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸಂಪನ್ಮೂಲ ವ್ಯಕ್ತಿಗಳಾದ ಹಸನ್ ಕೆ.ಎಚ್., ಮುಖ್ಯೋಪಾಧ್ಯಾಯನಿ ಭಾರತಿ , ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮೋಹನ್‌ಕುಮಾರ್, ಅಶೋಕ್ ಪಾಟೀಲ್, ದೀಪ ಕುಬಸದ್, ಕನ್ಯಾಕುಮಾರಿ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular

Recent Comments