Monday, July 22, 2024
Google search engine
Homeಇ-ಪತ್ರಿಕೆಶಾಸಕ ಚನ್ನಬಸಪ್ಪರಿಂದ ಅಲ್ಪಸಂಖ್ಯಾತರಿಗೆ ವಿವಿಧ ಸಾಲ ಸೌಲಭ್ಯದ ಚೆಕ್ ವಿತರಣೆ

ಶಾಸಕ ಚನ್ನಬಸಪ್ಪರಿಂದ ಅಲ್ಪಸಂಖ್ಯಾತರಿಗೆ ವಿವಿಧ ಸಾಲ ಸೌಲಭ್ಯದ ಚೆಕ್ ವಿತರಣೆ

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಯ ವಿವಿಧ ಸಾಲ ಸೌಲಭ್ಯಗಳಿಗೆ ಆಯ್ಕೆಯಾದಂತಹ ಫಲಾನುಭವಿಗಳಿಗೆ ಇಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಚೆಕ್ಕನ್ನು ವಿತರಿಸಿದರು.

1. ಶ್ರಮಶಕ್ತಿ ಸಾಲ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕುಲಕಸುಬುದಾರರಿಗೆ 50000ರೂ ಸಾಲವನ್ನು ನೀಡಲಾಗುತ್ತಿತ್ತು, ಇದರಲ್ಲಿ  25000ರೂ ಸಾಲ ಮತ್ತು 25000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 2317  ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 5 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.

2.  ಶ್ರಮಶಕ್ತಿ ಸಾಲ (ವಿಶೇಷ ಮಹಿಳೆಯರಿಗಾಗಿ)ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿಧವೆ/ ವಿಚ್ಛೇದಿತ/ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ 50000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ  25000ರೂ ಸಾಲ ಮತ್ತು 25000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 169 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 6 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.

3. ವೃತ್ತಿ  ಪ್ರೋತ್ಸಾಹ ಯೋಜನೆ  ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ 100000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ  50000ರೂ ಸಾಲ ಮತ್ತು 50000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 765 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 5 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.

4.  ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ವೈಯಕ್ತಿಕ ಕೊಳವೆ ಬಾವಿಯನ್ನು ಕೊರಿಸಲು 1 ಎಕರೆಯವರೆಗೆ ಕೃಷಿ ಜಮೀನನ್ನು ಹೊಂದಿದವರಿಗೆ 300000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ 75000ರೂ ವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಗೆ ಹಣ ಪಾವತಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 7 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ  ಇಬ್ಬರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular

Recent Comments