Saturday, December 14, 2024
Google search engine
Homeಇ-ಪತ್ರಿಕೆತುಂಗಾ ನದಿಗೆ ಬಾಗಿನ ಅರ್ಪಿಸಿದ ಶಾಸಕ ಚನ್ನಬಸಪ್ಪ

ತುಂಗಾ ನದಿಗೆ ಬಾಗಿನ ಅರ್ಪಿಸಿದ ಶಾಸಕ ಚನ್ನಬಸಪ್ಪ

ಶಿವಮೊಗ್ಗ: ತುಂಗೆ ನಮ್ಮ ಜೀವನಾಡಿ, ಮಲೆನಾಡಿಗರಿಗೆ ಸದಾ ಕಾಲ ರಕ್ಷಣೆ ನೀಡುವ ತಾಯಿಯಾಗಿದ್ದು, ನಮ್ಮ ಸಂಸ್ಕೃತಿ ಧರ್ಮದ ಪ್ರತೀಕವಾಗಿ ಭಕ್ತಿ ಪೂರ್ವಕವಾಗಿ ಪೂಜೆ ಮಾಡಿ ತುಂಬಿದ ತುಂಗಿಗೆ ಇಂದು ಬಾಗೀನವನ್ನು ಸಮರ್ಪಿಸಿದ್ದೇವೆ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗೆಯ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಗರ ಮಟ್ಟದಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ಅನೇಕ ಕಾರ್ಯಗಳು ಆಗಿವೆ. ಆದರೆ, ನಗರದ ಹೊರಗೆ ಕೂಡ ಶುದ್ಧ ತುಂಗೆ ಹರಿದುಹೋಗಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.

ನಟ ಅನಿರುದ್ಧ್ ಕೂಡ ಬೇಟಿಯಾಗಿ ಶುದ್ಧ ತುಂಗೆಗಾಗಿ ಅವರ ಪರಿಕಲ್ಪನೆಯನ್ನು ವಿವರಿಸಿದ್ದಾರೆ. ಶೃಂಗೇರಿಯಿಂದ ಮಂತ್ರಾಲಯದವರೆಗೆ ಪಾದಯಾತ್ರೆ ಮಾಡಿ ತುಂಗೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅವರಿಗೆ ನಮ್ಮ ಸಹಕಾರ ಇದೆ ಎಂದು ಹೇಳಿದ್ದೇನೆ ಎಂದರು.

ನಗರದಲ್ಲಿ ಹಾದುಹೋಗುವ ಸುಮಾರು ೧೧ಕಿ.ಮೀ. ಎಡದಂಡೆ ಕಾಲುವೆಯ ಎರಡು ಬದಿಯ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದು, ಅದರ ತಡೆಗೆ ಎರಡು ಬದಿಯಲ್ಲಿ ಫೆನಿಶಿಂಗ್ ಮಾಡಿ ಜಾಗ ಉಳಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದೇನೆ. ಮಹಾದೇವಿ ಟಾಕೀಸ್ ಹಿಂಭಾಗದಲ್ಲಿ ಪ್ರತಿ ಮಳೆಗೂ ನೀರು ಬರುತ್ತಿದ್ದು, ಭದ್ರಾನದಿಯ ನೀರು ನಿದಿಗೆ ಮೂಲಕ ಆ ಪ್ರದೇಶಕ್ಕೆ ಬರುತ್ತಿದೆ. ಅದಕ್ಕೆ ಅಲ್ಲಲ್ಲಿ ಗುಂಡಿಗಳನ್ನು ನಿರ್ಮಿಸಿ ಅದನ್ನು ಹಿಡಿದಿಡುವ ಯೋಜನೆಯನ್ನು ಕೂಡ ಈಗಾಗಲೇ ಚರ್ಚೆ ಮಾಡಿದ್ದೇನೆ. ಪ್ರಮುಖವಾಗಿ ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ನಿಗಮದ ಅಧಿಕಾರಿಗಳು ಮತ್ತು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಜೊತೆಗೂ ಚರ್ಚಿಸಿ ನಗರಕ್ಕೆ ಬರಬೇಕಾಗಿದ್ದ ಸಿಂಗಲ್ 1400 ಮನೆಗಳು ಹಾಗೂ ಆಶ್ರಯ ಯೋಜನೆಯ 3000 ಮನೆಗಳನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿದ್ದೇನೆ. ಸದನದಲ್ಲಿ ನಗರದ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಈಗಾಗಲೇ ಮೂರು ಮಂತ್ರಿಗಳ ಜೊತೆಗೆ ಮಾತನಾಡಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments