Saturday, October 12, 2024
Google search engine
Homeಇ-ಪತ್ರಿಕೆಆಗುಂಬೆ ವ್ಯಾಪ್ತಿಯ ಯುವತಿ ಕಾಣೆ: ಮಾಹಿತಿ ನೀಡಲು ಮನವಿ

ಆಗುಂಬೆ ವ್ಯಾಪ್ತಿಯ ಯುವತಿ ಕಾಣೆ: ಮಾಹಿತಿ ನೀಡಲು ಮನವಿ

ಶಿವಮೊಗ್ಗ: ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳು 24 ವರ್ಷದ ಪೂಜಾ ಎ.ಕೆ. ಎಂಬುವವರು ಕಾಣೆಯಾಗಿದ್ದಾರೆ.

 ಜೂನ್ 30ರಂದು ಮನೆಯಿಂದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.  ಈಕೆಯ ಚಹರೆ 4.೦6 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈಕೆಯ ಕುರಿತು ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ ಶಿವಮೊಗ್ಗ-೦೮೧೮೨-೨೬೧೪೦೦, ತೀರ್ಥಹಳ್ಳಿ ಡೆ.ಎಸ್.ಪಿ -08181-220388, ಸಿಪಿಐ ಮಾಳೂರು-9480803333 ಹಾಗೂ ಪಿಎಸ್‌ಐ ಆಗುಂಬೆ-9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular

Recent Comments