Saturday, October 12, 2024
Google search engine
Homeಅಂಕಣಗಳುಲೇಖನಗಳುಕೆಎಸ್‌ಈ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮೆಸ್ಕಾಂ ಪ್ರಗತಿ ಪರಿಶೀಲನೆ

ಕೆಎಸ್‌ಈ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮೆಸ್ಕಾಂ ಪ್ರಗತಿ ಪರಿಶೀಲನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಇಂದು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಕ್ಷೇತ್ರದಲ್ಲಿ ಮೆಸ್ಕಾಂ ಪ್ರಗತಿಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರಕ್ಕೆ ಏನೇನು ಅಗತ್ಯತೆ ಇದೆಯೇ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರ ಶಶಿಧರ್ ನಗರಕ್ಕೆ ಅಗತ್ಯತೆಗಳ ಪಟ್ಟಿಯನ್ನು ನೀಡಿದರು. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಉಪ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಈ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು. ಗೋವಿಂದಾಪುರದಲ್ಲಿ ೨ ಎಕರೆ ಜಾಗ ನೀಡಿ ಸೋಲಾರ್ ಪಾರ್ಕ್
ನಿರ್ಮಾಣ ಮಾಡಿದಲ್ಲಿ ಜಿಲ್ಲೆಯ ವಿದ್ಯುತ್ ಬೇಡಿಕೆ ಪೂರೈಕೆಗೆ ಅನುಕೂಲವಾಗುತ್ತದೆ ಹಾಗೂ ನಗರ ಬೆಳೆದಿದ್ದು ವಿದ್ಯುತ್ ಗ್ರಾಹಕರ ಬೇಡಿಕೆ ಹೆಚ್ಚಳವಾಗಿದೆ. ತ್ವರಿತಗತಿಯಲ್ಲಿ ದೂರುಗಳ ನಿರ್ವಹಣೆಗೆ ಇನ್ನು ಎರಡು ತಂಡಗಳ ಅವಶ್ಯಕತೆ ಇದ್ದು, ಅತ್ಯಾಧುನಿಕ ಸಲಕರಣೆಗಳೊಂದಿಗೆ ಸುಸಜ್ಜಿತ ತಂಡ ನೀಡಿದಲ್ಲಿ ಸಹಕಾರಿಯಾಗುವುದು ಎಂದು ಗಮನಕ್ಕೆ ತಂದರು.
ಬೇಡಿಕೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಗರದ ಅಭಿವೃದ್ದಿಗೆ ಎಲ್ಲರ ಸಹಕಾರದೊಂದಿಗೆ ಹೆಜ್ಜೆ ಇಡೋಣ ಎಂದು ಶಾಸಕರು ಅಧಿಕಾರಿಗಳಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಮುಖ್ಯ ಇಂಜಿನಿಯರ್ ರಘುಪ್ರಕಾಶ್, ಅಧಿಕಾರಿಗಳಾದ ನರೇಂದ್ರ, ಶ್ರೀನಿವಾಸ್, ವೆಂಕಟೇಶ್ ಪ್ರಸಾದ್,ಶಿವಪ್ರಸಾದ್ ಇದ್ದರು.

RELATED ARTICLES
- Advertisment -
Google search engine

Most Popular

Recent Comments