Saturday, October 12, 2024
Google search engine
Homeಅಂಕಣಗಳುಲೇಖನಗಳುಮೆಗ್ಗಾನ್ ಆಸ್ಪತ್ರೆ ಸುಧಾರಣೆಗೆ ರಾಜಕಾರಣ ಬಿಡಿ...ಸಮಯ ಕೊಡಿ...

ಮೆಗ್ಗಾನ್ ಆಸ್ಪತ್ರೆ ಸುಧಾರಣೆಗೆ ರಾಜಕಾರಣ ಬಿಡಿ…ಸಮಯ ಕೊಡಿ…

ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿರುವ ಅಮಾನವೀಯ ಘಟನೆ ಕೇವಲ ಒಂದು ಉದಾಹರಣೆಯಾಗಿದ್ದು, ಇಂತಹ ಅಮಾನವೀಯ ಘಟನೆಗಳು ಆಸ್ಪತ್ರೆಯಲ್ಲಿ ನಿರಂತರವಾಗಿ ನಡೆಯುತ್ತವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಲೆನಾಡಿನ ಹೆಬ್ಬಾಗಿಲೆನಿಸಿಕೊಂಡಿರುವ ಶಿವಮೊಗ್ಗ ನಗರದಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ವೈದ್ಯಕೀಯ ಕಾಲೇಜಿನೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿ ಸುತ್ತಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಾಂತರ ರೂ. ಹಣವನ್ನು ಕೂಡಾ ವ್ಯಯಿಸಿದೆ. ಆದರೆ ಅಲ್ಲಿನ ಸೌಲಭ್ಯಗಳು ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸಿಗುತ್ತಿಲ್ಲ ಎಂಬ ದೂರು ಸರ್ವೇ ಸಾಮಾನ್ಯವಾಗಿದೆ.
ರೋಗಿಯೊಬ್ಬರನ್ನು ಆತನ ಪತ್ನಿ ಸ್ಟ್ರೆಚರ್ ಸಿಗದೇ ನೆಲದ ಮೇಲೆಯೇ ಎಳೆದುಕೊಂಡು ಹೋದ ವೀಡಿಯೋ ಉದ್ದೇಶಪೂರ್ವಕವಾಗಿ ನಿರ್ಮಿಸಿದ್ದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಯಾರೂ ಸಹ ತನ್ನ ಗಂಡನನ್ನು ಕೇವಲ ಚಿತ್ರೀಕರಣಕ್ಕಾಗಿ ಎಳೆದುಕೊಂಡು ಹೋಗು ತ್ತಾರೆ ಎಂಬುದು ಅರ್ಥಹೀನವಾದ ಮಾತು.
ವೀಡಿಯೋ ದೃಶ್ಯಾವಳಿಯನ್ನೇ ಉದ್ದೇಶಪೂರ್ವಕ ಎನ್ನುವ ಮಾತನ್ನು ಆಡದೇ ಆಸ್ಪತ್ರೆಯ ಅವ್ಯವಸ್ಥೆಯ ಸುಧಾರಣೆಗೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕಾದ್ದು ಅತ್ಯಂತ ಅವಶ್ಯಕವಾಗಿದೆ. ಘಟನೆ ಏನೇ ಇರಲಿ, ರಾಜ್ಯ ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಬಡವರಿಗಾಗಿ ನಿರ್ಮಿಸಿರುವ ಆಸ್ಪತ್ರೆಯ ಸೌಲಭ್ಯಗಳು ಸಂಪೂರ್ಣ ವಾಗಿ ದೊರೆಯಬೇಕೆಂಬ ಹಿನ್ನ್ಝೆಲೆಯಲ್ಲಿ ಪ್ರತಿಯೊಬ್ಬ ರಾಜಕಾರಣಿ ಹಾಗೂ ವಿವಿಧ ಸಂಘಟನೆಗಳು ಕೆಲಸ ಮಾಡಿದ್ದೇ ಆದರೆ, ನಿಜಕ್ಕೂ ಆಸ್ಪತ್ರೆ ಒಂದು ಹಂತದ ವ್ಯವಸ್ಥೆಗೆ ಬಂದು ತಲುಪುತ್ತದೆ ಎಂದರೆ ತಪ್ಪಾಗಲಾರದು.
ಈ ವಿಷಯದಲ್ಲಿ ರಾಜಕಾರಣವನ್ನು ಮಾಡದೇ, ಪ್ರತಿಯೊಬ್ಬರೂ ತಮ್ಮ ಸಮಯವನ್ನು ಆಸ್ಪತ್ರೆ ಅವ್ಯ ವಸ್ಥೆಯ ಸುಧಾರಣೆಗೆ ಪ್ರಯತ್ನಿಸಬೇಕು. ವೈದ್ಯರು, ನರ್ಸ್‌ಗಳು ಇತರೇ ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಗಮನಹರಿಸಬೇಕು. ಅಲ್ಲದೆ, ಪ್ರತಿಯೊಬ್ಬ ಜಿಲ್ಲೆಯ ಜನಪ್ರತಿನಿಧಿ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಸಂಘಟನೆಗಳ ಪ್ರಮುಖರು ವಾರದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇ ಆದರೆ ಆಸ್ಪತ್ರೆ ನಿಜಕ್ಕೂ ಅತ್ಯಂತ ವ್ಯವ ಸ್ಥಿತ ಮತ್ತು ಉತ್ತಮ ಗುಣಮಟ್ಟದ ಆಸ್ಪತ್ರೆಯಾಗು ವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ವೀಡಿಯೋ ದೃಶ್ಯಾವಳಿಯನ್ನೇ ನೆಪವಾಗಿಟ್ಟುಕೊಂಡು ಇದು ಉದ್ದೇಶಪೂರ್ವಕ, ಯಾರದೋ ಕೃತ್ಯ ಎಂದು ಹೇಳಿ ಚರ್ಚಿಸುವ ಬದಲು ವೀಡಿಯೋ ದೃಶ್ಯಾವಳಿ ಯನ್ನು ನೆಪ ಮಾಡಿಕೊಂಡು ಒಟ್ಟಾರೆ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಗಮನ ನೀಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸ್ಟಾಫ್ ನರ್ಸ್ ೧೦೦, ಗ್ರೂಪ್ ಡಿ ೧೮೪, ನಾನ್ ಕ್ಲಿನಿಕ್ ೧೮೩, ಭದ್ರತಾ ಸಿಬ್ಬಂದಿ ೧೧೧ ಇದ್ದಾರೆ. ಪ್ರತಿ ತಿಂಗಳು ೬೦ ಸಾವಿರ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಇಷ್ಟೊಂದು ಸಿಬ್ಬಂದಿ ವರ್ಗದವರು ಇದ್ದರೂ ಸಹ ಇವರು ಗಳಿಂದ ಉತ್ತಮ ರೀತಿಯಲ್ಲಿ ಕೆಲಸವನ್ನು ತೆಗೆದು ಕೊಳ್ಳಲು ಸಾಧ್ಯ ವಾಗುತ್ತಿಲ್ಲವೆಂದರೆ ಆಸ್ಪತ್ರೆಯ ಆಡಳಿತ ಮಂಡಳಿಯ ಲೋಪ ಎದ್ದುಕಾಣುತ್ತದೆ ಎಂದರೆ ತಪ್ಪಾಗಲಾರದು.
ಆಸ್ಪತ್ರೆಯ ಸ್ವಚ್ಛತೆ ಹಾಗೂ ಸ್ಥಿತಿಗತಿಯ ಬಗ್ಗೆ ರಾಜ್ಯದಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ಆದರೆ, ಕೇವಲ ಸ್ಥಾನ ಸಿಕ್ಕುವುದರಿಂದ ಇಲ್ಲಿನ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತದೆ ಎಂಬುದು ಅರ್ಥವಲ್ಲ. ನಿಜವಾದ ರೀತಿಯಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಸೌಲಭ್ಯಗಳು ಸಿಕ್ಕಿದ್ದೇ ಆದರೆ ಮೊನ್ನೆಯಂತಹ ಘಟನೆ ಖಂಡಿತಾ ನಡೆಯುತ್ತಿರಲಿಲ್ಲ.
ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ರಾಜಕೀಯ ಪಕ್ಷದವರು ಈ ಬಗ್ಗೆ ತಮ್ಮ ರಾಜಕಾರಣವನ್ನು ಬಿಟ್ಟು ಆಸ್ಪತ್ರೆಯ ಸುಧಾರಣೆಗೆ ಸಮಯಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

RELATED ARTICLES
- Advertisment -
Google search engine

Most Popular

Recent Comments