ಶಿವಮೊಗ್ಗ : ಮಹಾನಗರಪಾಲಿಕೆಯ ನೂತನ ಮೇಯರ್ ಆಗಿ ಲತಾ ಗಣೇಶ್ ಹಾಗೂ ಉಪಮೇಯರ್ ಆಗಿ ಎಸ್.ಎನ್.ಚನ್ನಬಸಪ್ಪ ಇಂದು ಆಯ್ಕೆಯಾದರು.
ಇಲ್ಲಿನ ಮಹಾನಗರಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಬೆಳಿಗ್ಗೆ ೧೧ಕ್ಕೆ ಸಭೆ ಆರಂಭಗೊಂಡಿತು. ಚುನಾವಣಾ ಅಧಿಕಾರಿಯಾ ಗಿದ್ದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಆರಂಭದಲ್ಲಿ ಸಭೆಯಲ್ಲಿನ ಸದಸ್ಯರ ಹಾಜರಾತಿಯನ್ನು ಪರಿಗಣಿಸಿದ ನಂತರ ನೂತನ ಪಾಲಿಕೆಯ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ತದನಂತರ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಆರಂಭಿಸಿದ ಚುನಾವಣಾ ಅಧಿಕಾರಿಗಳು ಮೊದಲು ಮೇಯರ್ ಸ್ಥಾನಕೆ ಕೈ ಎತ್ತುವ ಮೂಲಕ ಚುನಾವಣೆ ನಡೆಸಿದರು.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ೧೭ನೇ ವಾರ್ಡಿನ ಸದಸ್ಯೆ ಲತಾ ಗಣೇಶ್ ಹಾಗೂ ಕಾಂಗ್ರೆಸ್‌ನಿಂದ ೨೬ನೇ ವಾರ್ಡಿನ ಸದಸ್ಯೆ ಮಂಜುಳಾ ಅವರು ಉಮೇದುವಾರಿಕೆ ಸಲ್ಲಿಸಿ ದ್ದರು. ಇವರಿಬ್ಬರ ನಾಮಪತ್ರಗಳು ಸಿಂಧುವಾ ಗಿದ್ದು, ನಾಮಪತ್ರ ವಾಪಾಸಾತಿಗೆ ಐದು ನಿಮಿಷಗಳ ಕಾಲಾವಕಾಶ ನೀಡಿದರು. ಯಾರೂ ಸಹ ನಾಮಪತ್ರ ವಾಪಾಸ್ ಪಡೆಯದಿದ್ದರಿಂದ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಲತಾ ಗಣೇಶ್ ಪರವಾಗಿ ೨೬ ಮತಗಳು, ಮಂಜುಳಾ ಪರವಾಗಿ ೧೨ ಮತಗಳು ಲಭಿಸಿದವು. ಇದ ರಿಂದಾಗಿ ಅತೀ ಹೆಚ್ಚು ಮತ ಪಡೆದ ಲತಾ ಗಣೇಶ್ ಮೇಯರ್ ಆಗಿ ಆಯ್ಕೆಯಾಗಿ ದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಈ ಪ್ರಕ್ರಿಯೆ ಮುಗಿದ ನಂತರ ಉಪ ಮೇಯರ್ ಸ್ಥಾನದ ಚುನಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡ ಚುನಾವಣಾಧಿಕಾರಿಗಳು ಈ ಸ್ಥಾನಕ್ಕೆ ಬಿಜೆಪಿಯಿಂದ ೮ನೇ ವಾರ್ಡಿನ ಸದಸ್ಯ ಎಸ್.ಎನ್.ಚನ್ನಬಸಪ್ಪ ಹಾಗೂ ಕಾಂಗ್ರೆಸ್‌ನಿಂದ ೪ನೇ ವಾರ್ಡಿನ ಸದಸ್ಯ ಹೆಚ್.ಸಿ.ಯೋಗೀಶ್ ಉಮೇದುವಾರಿಕೆ ಸಲ್ಲಿಸಿದ್ದು, ನಾಮಪತ್ರಗಳು ಸಿಂಧುವಾಗಿವೆ. ವಾಪಾಸಾತಿಗೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಈ ಸಂದರ್ಭದಲ್ಲಿ ಯಾರೂ ಸಹ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯದಿದ್ದ ರಿಂದ ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು.
ಎಸ್.ಎನ್.ಚನ್ನಬಸಪ್ಪ ಪರವಾಗಿ ೨೬ ಮತಗಳು, ಹೆಚ್.ಸಿ. ಯೋಗೀಶ್ ಪರವಾಗಿ ೧೨ ಮತಗಳು ಲಭಿಸಿದವು.
ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾನಗರ ವಾರ್ಡಿನ ಸದಸ್ಯ ನಾಗರಾಜ್ ತಟಸ್ಥರಾಗಿ ಉಳಿದಿದ್ದು ವಿಶೇಷವಾಗಿತ್ತು.
ಮಹಾನಗರಪಾಲಿಕೆಗೆ ಆಗಸ್ಟ್ ತಿಂಗಳಿನಲ್ಲಿ ಚುನಾವಣೆ ನಡೆದಿದ್ದು, ಸೆ.೩ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆದಿತ್ತು. ಚುನಾವಣೆಯಲ್ಲಿ ೨೦ ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರು, ೭ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಸದಸ್ಯರು, ೨ರಲ್ಲಿ ಜೆಡಿಎಸ್, ೫ರಲ್ಲಿ ಪಕ್ಷೇತರರು, ಒಂದು ವಾರ್ಡ್‌ನಲ್ಲಿ ಎಸ್‌ಡಿಪಿಐ ಸದಸ್ಯರು ವಿಜೇತ ರಾಗಿದ್ದರು. ೩೫ ಸದಸ್ಯ ಬಲದ ಮಹಾನಗರಪಾಲಿಕೆಯಲ್ಲಿ ೨೦ ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಆಡಳಿತ ನಡೆಸಲು ನಿಚ್ಛಳ ಬಹುಮತ ಪಡೆದಿತ್ತು. ಚುನಾವಣೆ ನಡೆದ ಕೆಲವೇ ದಿನದಲ್ಲಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿ ಸಿತ್ತು. ತದನಂತರ ಎದುರಾದ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಮತ್ತು ಬಿಬಿಎಂಪಿಯ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಮಹಾನಗರಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನದ ಚುನಾವಣೆ ಕಳೆದ ಮೂರು ತಿಂಗಳ ನಂತರ ಇಂದು ನಡೆಯಿತು.
ಈ ಸಂದರ್ಭದಲ್ಲಿ ೩೫ವಾರ್ಡ್‌ನ ಎಲ್ಲಾ ಸದಸ್ಯರು ಅಂದರೆ ಬಿಜೆಪಿಯ೨೦, ಕಾಂಗ್ರೆಸ್‌ನ೭, ಜೆಡಿಎಸ್‌ನ೨, ಎಸ್‌ಡಿಪಿಐನ೧ ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇದರ ಜೊತೆಗೆ ವಿಧಾನಸಭಾ ಸದಸ್ಯರಾದ ಕೆ.ಎಸ್.ಈಶ್ವರಪ್ಪ, ಅಶೋಕ್‌ನಾಯ್ಕ, ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇ ಗೌಡ, ಆರ್.ಪ್ರಸನ್ನಕುಮಾರ್ ಪಾಲ್ಗೊಂಡಿ ದ್ದರು. ಅನ್ಯ ಕಾರ್ಯನಿಮಿತ್ತ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗೈರಾಗಿದ್ದರು. ಸಂಸದ ರಾಘವೇಂದ್ರ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಮತದಾನದ ಹಕ್ಕು ಪಡೆದಿಲ್ಲ. ಒಟ್ಟು ೪೧ ಸದಸ್ಯ ಬಲದಲ್ಲಿ ಚುನಾ ವಣೆ ನಡೆಯಿತು.
ಚುನಾವಣೆ ಪ್ರಕ್ರಿಯೆ ನಡೆದ ನಂತರ, ನೂತನ ಮೇಯರ್ ಹಾಗೂ ಉಪಮೇಯರ್‌ರನ್ನು ಚುನಾವಣಾಧಿಕಾರಿ ಶಿವಯೋಗಿ ಕಳಸದ್, ಚುನಾವಣಾ ಕರ್ತವ್ಯಕ್ಕೆ ಸಾತ್ ನೀಡಿದ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಇವರುಗಳು ಅಭಿನಂದಿಸಿದರು.
ನಂತರ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ನಾಯಕ್ ಸೇರಿದಂತೆ ಅನೇಕ ಮುಖಂಡರು ನೂತನ ಮೇಯರ್ ಹಾಗೂ ಉಪಮೇಯರ್‌ರನ್ನು ಹಾರ್ದಿಕವಾಗಿ ಅಭಿನಂದಿಸಿದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಾಲಿಕೆ ಆವರಣದಿಂದಲೇ ಪಟಾಕಿ ಸಿಡಿಸುತ್ತಾ ಹಬ್ಬದ ವಾತಾವರಣ ನಿರ್ಮಿಸಿದರು. ಅಲ್ಲಿಂದ ಬಿಜೆಪಿ ಕಛೇರಿಯವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತ ಮೇಯರ್-ಲತಾ, ಉಪಮೇಯರ್- ಚನ್ನಬಸಪ್ಪ ಆಯ್ಕೆ
RELATED ARTICLES