Saturday, October 12, 2024
Google search engine
Homeಅಂಕಣಗಳುಲೇಖನಗಳುಪೌರಕಾರ್ಮಿಕರಿಂದ ಆರೋಗ್ಯಯುತ ಪರಿಸರ :: ಮೇಯರ್ ಏಳುಮಲೈ

ಪೌರಕಾರ್ಮಿಕರಿಂದ ಆರೋಗ್ಯಯುತ ಪರಿಸರ :: ಮೇಯರ್ ಏಳುಮಲೈ

ಶಿವಮೊಗ್ಗ : ಪ್ರತಿನಿತ್ಯವೂ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರ ಕಾರ್ಯ ಸಮಾಜದ ಸೇವೆಯಾಗಿದೆ ಎಂದು ಮೇಯರ್ ಏಳುಮಲೈ ಅಭಿಪ್ರಾಯಪಟ್ಟರು.
ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರಪಾಲಿಕೆ, ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಇವರುಗಳ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿನಿತ್ಯವೂ ಕೂಡಾ ನಗರದ ಸ್ವಚ್ಛತೆಯನ್ನು ಮಾಡುವ ಮೂಲಕ ಆರೋಗ್ಯಯುತ ಪರಿಸರವನ್ನು ನಿರ್ಮಿಸುತ್ತಿದ್ದಾರೆ ಎಂದರು.
ಒಂದು ನಗರ ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಕಾಣಬೇಕಾದರೆ ಸ್ವಚ್ಛತೆ ಅತ್ಯಂತ ಮುಖ್ಯವಾಗಿರುತ್ತದೆ. ಅಂತಹ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ನಿಟ್ಟಿನಲ್ಲಿ ಹಗಲಿರುಳು ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ.ಇವರ ಸೇವೆ ಅನನ್ಯವಾಗಿದೆ ಎಂದರು.
ನಗರದ ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಅವರ ಆರೋಗ್ಯವನ್ನು ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆಯದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಆರೋಗ್ಯ ಶಿಬಿರವನ್ನು ಕೈಗೊಳ್ಳಲಾಗಿದೆ ಎಂದರು.
ಪೌರ ಕಾರ್ಮಿಕರಿಗೆ ರಕ್ಷಾ ಕವಚಗಳನ್ನು ಕೊಡಲಾಗಿದೆ. ಅವುಗಳನ್ನು ತಪ್ಪದೇ ಬಳಸಬೇಕು ಎಂದ ಅವರು, ಸರ್ಕಾರದ ವತಿಯಿಂದ ನೀಡಲಾಗುವಂತಹ ಯೋಜನೆಗಳ ಜೊತೆಗೆ ಸ್ಥಳೀಯ ಪಾಲಿಕೆ ವತಿಯಿಂದಲೂ ಸಹ ಪೌರ ಕಾರ್ಮಿಕರಿಗೆ ಆನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ರೂಪಾಲಕ್ಷ್ಮಣ್, ಆಯುಕ್ತ ಮುಲ್ಲೈ ಮುಹಿಲನ್, ಸ್ಥಾಯಿ ಸಮಿತಿ ಅಧ್ಯಕ್ಷರು ಗಳಾದ ಅರ್ಚನಾ ಬಳ್ಳೇಕೆರೆ, ಐಡಿಯಲ್ ಗೋಪಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಮೋಹನ್‌ರೆಡ್ಡಿ, ಸದಸ್ಯರುಗಳಾದ ಸುರೇಖಾ ಮುರಳೀಧರ್, ರೇಣುಕಾ ನಾಗರಾಜ್, ಎನ್.ಜೆ.ರಾಜಶೇಖರ್ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments