ಶಿವಮೊಗ್ಗ : ನಗರದ ನಿವೇಶನ ರಹಿತರಿಗೆ ಗೋವಿಂದಾಪುರ ಹಾಗೂ ಗೋಪಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಜಿ+೨ ಮಾದರಿಯ ಮನೆಗಳನ್ನು ನಿರ್ಮಿಸುವ ಕಾರ್ಯ ಶೀಘ್ರಗತಿ ಯಲ್ಲೇ ಆರಂಭವಾಗಲಿದ್ದು, ಫಲಾ ನುಭವಿಗಳು ಇದಕ್ಕೆ ಸಂಬಂಧ ಪಟ್ಟಂತೆ ಹಣ ಒಟ್ಟುಗೂಡಿಸುವ ಕಾರ್ಯ ಮಾಡಬೇಕೆಂದು ಶಾಸಕ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕರೆಯಲಾಗಿದ್ದ ಅರ್ಜಿಗಳಲ್ಲಿ ೮೯೪೧ ಜನ ಅರ್ಜಿ ಸಲ್ಲಿಸಿದ್ದು, ೫೧೬೮ ಜನರು ನಿಗಧಿತ ಶುಲ್ಕ ಪಾವತಿಸಿ ದ್ದರು. ಇದರ ಬಗ್ಗೆ ೨೦೬ ಆಕ್ಷೇಪಣೆ ಗಳು ಬಂದಿದ್ದು, ಅಂತಿಮವಾಗಿ ೪೭೨೫ ಅರ್ಹ ಅಂತಿಮ ನಿವೇಶನ ರಹಿತರ ಪಟ್ಟಿಯನ್ನು ಪ್ರಕಟಿಸ ಲಾಗಿದೆ. ಎಸ್.ಸಿ., ಎಸ್.ಟಿ. ಫಲಾನುಭವಿಗಳೂ ೫೦ ಸಾವಿರ ರೂ. , ಇತರರು ೮೦ ಸಾವಿರ ರೂ. ಒಂದು ತಿಂಗಳೊಳಗೆ ಪಾವತಿಸಬೇಕು. ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸಲಿದೆ ಎಂದರು.
೮೬,೭೦೦ ರೂ. ಒಳಗಿನ ಅದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಕೆಲ ಮೂಲ ದಾಖಲೆ ಪತ್ರಗಳನ್ನು ಮತ್ತು ನಕಲು ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸ ಬೇಕಾಗಿದೆ. ಹಣ ಕಟ್ಟಿದರೆ ನಿಮ್ಮ ಕನಸಿನ ಮನೆಯ ಕೆಲಸ ಆರಂಭ ಗೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಇದೇ ಮಾದರಿಯಲ್ಲಿ ೯ಸ್ಲಂ ಪ್ರದೇಶದಲ್ಲಿ ೧೫೯೦ ಮನೆ ನಿರ್ಮಿ ಸಲು ಮಂಜೂರಾತಿ ದೊರೆತಿದ್ದು, ಆ ಭಾಗದ ಜನತೆ ಇದರ ಸದುಪಯೋಗ ಪಡೆಯಲು ಕೂಡಲೇ ಹಣ ಕಟ್ಟುವಂತೆ ವಿನಂತಿಸಿದ ಅವರು, ಅಶೋಕ್‌ನಗರ ಕೆರೆಯಂಗಳ, ಚಿಕ್ಕಮಟ್ಟಿ, ಗೋಪಾಳ, ಹನುಮಂತ ನಗರ, ನ್ಯೂ ಭೋವಿ ಕಾಲೋನಿ, ಇಂದಿರಾ ಬಡಾವಣೆ, ಕುಂಬಾರ ಗುಂಡಿ, ಟಿಪ್ಪು ನಗರ ಕೆರೆಯಂಗಳ, ಜೆ.ಪಿನಗರ ಹಾಗೂ ಶಾಂತಿನಗರದ ಸ್ಲಂ ಭಾಗದಲ್ಲಿ ಈ ಮನೆಗಳನ್ನು ನಿರ್ಮಿಸಲು ಅನುಮೋದನೆಯಾ ಗಿದ್ದು, ಎಸ್‌ಸಿ/ಎಸ್‌ಟಿ ೪೯,೧೧೪ ರೂ. ಇತರರು ೭೩,೬೭೧ ರೂ ಹಣ ಪಾವತಿಸಿದರೆ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ ಎಂದರು.
ಈಗ ಇರುವಂತಹ ಸ್ಥಳದಲ್ಲೇ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸುವ ಕಾರ್ಯ ಆರಂಭಿಸಲು ಸ್ಲಂ ಬೋರ್ಡ್ ಉದ್ದೇಶಿಸಿದೆ ಎಂದ ಅವರು, ಶಿವಮೊಗ್ಗ ನಗರದಲ್ಲಿ ೪೬ ಸ್ಲಂಗಳು ಅಧಿಕೃತವಾಗಿದ್ದು, ಉಳಿದ ೧೫ ಸ್ಲಂಗಳನ್ನು ಅಧಿಕೃತತೆಯತ್ತ ತರಲು ಸಚಿವರೊಂದಿಗೆ ಹಾಗೂ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸು ತ್ತೇನೆ. ಎಲ್ಲಾ ಸ್ಲಂ ಭಾಗದಲ್ಲಿ ಮನೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.
ಅಂತೆಯೇ ನಿವೇಶನ ರಹಿತರ ೪೭೨೫ ಮನೆಗಳ ಜೊತೆಗೆ ಅಗತ್ಯವಿರುವ ಇತರರಿಗೂ ಸಹ ಮನೆ ನೀಡಲು ಸದ್ಯದಲ್ಲೇ ಅರ್ಜಿಯನ್ನು ಆಹ್ವಾನಿಸುವುದಾಗಿ ಅವರು ಹೇಳಿದರು.
ಶಿವಮೊಗ್ಗ ನಗರದ ಸಮಗ್ರ ಅಭಿವೃದ್ದಿಯತ್ತ ನಾನಾ ಯೋಜನೆಗಳನ್ನು ರೂಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಹಾಗೂ ನಗರಾಭಿವೃದ್ದಿ ಖಾದರ್ ಅವರನ್ನು ಸದ್ಯದಲ್ಲೇ ಶಿವಮೊಗ್ಗ ಆಗಮಿಸುವಂತೆ ಕೋರಿದ್ದೇನೆ. ಅವರು ಬರುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್, ಎನ್.ಜೆ.ರಾಜಶೇಖರ್, ಸೋಮಸುಂದರಂ, ಸತ್ಯನಾರಾಯಣ್, ಅನಿತಾ, ಸುನೀತಾ, ಅಣ್ಣಪ್ಪ, ಜ್ಯೋತಿ ಪ್ರಕಾಶ್, ಪಾಲಿಕೆ ಆಯುಕ್ತ ಪ್ರಕಾಶ್, ಯುಜಿಡಿ ಇಇ ರಂಗನಾಥ್, ಸ್ಲಂ ಏರಿಯಾದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.