ಕಾರ್ಮಿಕರಿಗೆ ಸರ್ಕಾರ ನೆರವು ಘೋಷಿಸಬೇಕು : ಎಂ.ಕೆ. ಪ್ರಮೋದ್

ಶಿವಮೊಗ್ಗ : ಕೋವಿಡ್ ಎರಡನೇ ಅಲೆಯ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಸರ್ಕಾರ ನೆರವು ಘೋಷಿಸಬೇಕು ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಎಂ.ಕೆ. ಪ್ರಮೋದ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.
ಕಾರ್ಮಿಕರು ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್ ಪರಿಣಾಮವಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಲಾಕ್‍ಡೌನ್ ಮುಂದುವರೆಯುವ ಎಲ್ಲಾ ಲಕ್ಷಣಗಳಿವೆ. ಇನ್ನೇನು ಕೊರೊನಾ ಮುಗೀತು ಎಂದು ಕಾರ್ಮಿಕರು ಈಗ ತಾನೇ ದುಡಿಮೆಗೆ ಹೋಗುತ್ತಿರುವ ಸಂದರ್ಭದಲ್ಲಿಯೇ ಮತ್ತೆ ಕೆಲಸವಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ ಕಾರಣ, ಸರ್ಕಾರ ತಕ್ಷಣವೇ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜೀವನಕ್ಕಿಂತ ಜೀವ ಮುಖ್ಯ ಎನ್ನುವ ಹಂತಕ್ಕೆ ಕಾರ್ಮಿಕರು ತಲುಪಿದ್ದಾರೆ. ಈಗಾಗಲೇ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಪ್ರತಿದಿನ ಕೂಲಿ ಮಾಡುವವರು, ಆಟೋ, ಬಸ್, ಲಾರಿ ಚಾಲಕರು, ಹೋಟೆಲ್ ಕೆಲಸ ಮಾಡುವವರು, ಬಟ್ಟೆ ಇತರೆ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕರಕುಶಲ ಕೆಲಸಗಾರರು, ಬ್ಯೂಟಿ ಪಾರ್ಲರ್, ಬಟ್ಟೆ ಹೊಲೆಯುವುದು ಸೇರಿದಂತೆ ಇದನ್ನೇ ಆಧಾರವಾಗಿಟ್ಟುಕೊಂಡ ಮಹಿಳೆಯರು, ವಿವಿಧ ವೃತ್ತಿಯಲ್ಲಿ ಕೆಲಸ ಮಾಡುತ್ತಿರುವವರು ಇಂದು ಅತಂತ್ರರಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಜೀವನ ನಿರ್ವಹಣೆಗಾಗಿ ಅನೇಕ ಕಾರ್ಮಿಕರು ಸಹಕಾರ ಸಂಘ ಮತ್ತು ವಾಣ ಜ್ಯ ಬ್ಯಾಂಕ್‍ಗಳಲ್ಲಿ ಸಾಲ ತೆಗೆದುಕೊಂಡು ಅದನ್ನು ತೀರಿಸಲಾಗದೇ ಬ್ಯಾಂಕ್‍ಗಳಿಂದ ನೋಟಿಸ್ ಪಡೆಯುತ್ತಿದ್ದಾರೆ. ಎμÉ್ಟೂೀ ಕಾರ್ಮಿಕರು ಇಎಂಐ ಕಟ್ಟದೇ ಒದ್ದಾಡುತ್ತಿದ್ದಾರೆ. ಮೀಟರ್ ಬಡ್ಡಿ ಲೇವಾದೇವಿಗಳ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಕೂಡಲೇ ಬ್ಯಾಂಕ್‍ಗಳ ಕಿರುಕುಳ ತಪ್ಪಿಸಲು ಮತ್ತು ಇಎಂಐ ಕಟ್ಟಲು ಸಮಯಾವಕಾಶ ನೀಡುವಂತೆ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವುದು ಕೂಡ ಬಡ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕು. ಕನಿಷ್ಠ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನಾದರೂ ದುಡಿಯುವ ವರ್ಗದವರನ್ನು ಗುರುತಿಸಿ ಆರ್ಥಿಕ ನೆರವು ನೀಡಬೇಕು. ಪಕ್ಕದ ಆಂಧ್ರಪ್ರದೇಶದಲ್ಲಿ ಕಾರ್ಮಿಕರಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಕೋವಿಡ್ ಸಂಕಷ್ಟ ಸಮಯದಲ್ಲಿ ಜಾರಿಗೊಳಿಸಲಾಗಿದೆ. ಅದರಂತೆ ನಮ್ಮ ಜಿಲ್ಲೆಯಲ್ಲೂ ಕೂಡ ಮಾನವೀಯತೆ ಆಧಾರದಲ್ಲಿ ಸ್ಪಂದಿಸಬೇಕು ಎಂದು ಅವರು ಆಆಗ್ರಹಿಸಿದ್ದಾರೆ.