ಶಿವಮೊಗ್ಗ : ತೃಪ್ತಿ ಮತ್ತು ಮಾನವೀಯತೆ ಇಲ್ಲದಿದ್ದರೆ ಕೈತುಂಬ ಸಂಬಳ ಪಡೆದರೂ ಸಹಾ ನೆಮ್ಮದಿ ಇರುವುದಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಜ್ಞಾನ ಪರಿಷತ್ ಮತ್ತು ಕ್ರೀಡಾ ಚಟುವಟಿಕೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಜೈಲಿನಿಂದ ಹೊರಬಂದವರಿಗೆ ಹಾರ ಹಾಕಿ ಸನ್ಮಾನಿಸುತ್ತಿರುವ ಈ ಸಮಾಜದಲ್ಲಿ ಬದ ಲಾವಣೆ ಅನಿವಾರ್ಯ. ಬದಲಾಯಿಸದಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಬದಲಾಯಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಎಷ್ಟೇ ಸಂಪತ್ತಿದ್ದರೂ ಇನ್ನೂ ಬೇಕು ಎನ್ನುವ ದುರಾಸೆಯಿಂದ ಮನುಷ್ಯ ಹಾಳಾಗುತ್ತಿದ್ದಾನೆ. ಆದ್ದರಿಂದ ತೃಪ್ತಿಯನ್ನು ಮೊದಲು ಬೆಳೆಸಿಕೊ ಳ್ಳಬೇಕು. ಸಂಪತನ್ನು ಲೂಟಿ ಮಾಡಿದರೂ ಸಹಾ ಎಂದೂ ತೃಪ್ತಿ ಇರುವುದಿಲ್ಲ. ಹಾಗಾಗಿ, ಇನ್ನೂ ಲೂಟಿ ಮಾಡುವ ಕೆಲಸವನ್ನು ಅವರು ಮುಂದುವರೆಸಿರುತ್ತಾರೆ. ಇದರಿಂದ ದೇಶದ ವಿವಿಧ ಹಗರಣಗಳಲ್ಲಿ ಪ್ರತಿವರ್ಷ ಸೊನ್ನೆಗಳ ಅಭಿವೃದ್ಧಿ ಜಾಸ್ತಿಯಾಗುತ್ತಿದೆ ಎಂದರು.
ಮಾನವೀಯತೆ ಜೀವನದ ಅತೀ ಮುಖ್ಯ ಅಂಶ. ಇದನ್ನು ಬೆಳೆಸಿಕೊಳ್ಳದಿದ್ದವನು ಮನುಷ್ಯನೇ ಅಲ್ಲ. ಬದುಕಿನಲ್ಲಿ ಮನುಷ್ಯನಾಗಿ ಸಾಯೋವರೆಗೆ ಅದನ್ನು ಉಳಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಲಕ್ಷಗಟ್ಟಲೆ ಸಂಬಳ ತೆಗೆದು ಕೊಂಡರೂ ಸಹಾ ಸಕಾಲದಲ್ಲಿ ಚಿಕಿತ್ಸೆಕೊಡದೇ ಬಡವರನ್ನು ಸಾಯಿಸುವ ಕೆಲಸವನ್ನು ಕೆಲವು ವೈದ್ಯರು ಅಮಾನವೀಯವಾಗಿ ಮಾಡುತ್ತಿ ದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ಹರೀಶ್ ನಂಜಪ್ಪ ಘಟನೆ ಜನರ ಮನಸ್ಸಿನಲ್ಲಿ ಎಂದಿಗೂ ಮಾಸದು ಎಂದರು.
ಸಾರ್ವಜನಿಕ ಕ್ಷೇತ್ರದಲ್ಲಿರುವವರ ಭ್ರಷ್ಟಾಚಾರದಿಂದ ಹಿಡೀ ಸಮಾಜದ ವ್ಯವಸ್ಥೆ ಹದಗೆಟ್ಟುಹೋಗಿದೆ. ಲೋಕಸೇವಾ ಆಯೋ ಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭ್ರಷ್ಟಾರದ ಕೂಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಪ್ರತೀ ಹುದ್ದೆಗೂ ಇಲ್ಲಿ ಹಣ ಮುಖ್ಯ. ಸಾಧಾರಣ ವ್ಯಕ್ತಿ ಕೆಲಸ ಗಿಟ್ಟಿಸಿಕೊಳ್ಳದ ಪರಿಸ್ಥಿತಿ ಎದುರಾಗಿದೆ ಎಂದರು.
ಅಧ್ಯಕ್ಷತೆಯನ್ನು ಕುವೆಂಪುವುವು ಕುಲಪತಿ ಪ್ರೊ. ಜೋಗನ್ ಶಂಕರ್ ವಹಿಸಿದ್ದರು. ಅತಿಥಿಗಳಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಪಟು ದೊಡ್ಡಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಕುವೆಂಪು ವಿವಿ ಕುಲಸಚಿವ ಪ್ರೊ. ಎಚ್.ಎಸ್. ಭೋಜ್ಯಾನಾಯ್ಕ್ ಉಪಸ್ಥಿತರಿದ್ದರು.