ಶಿವಮೊಗ್ಗ: ಯಾವುದೇ ಕಾರಣಕ್ಕೂ ನವುಲೆ ಕೆರೆಯನ್ನು ಮುಳುಗಿಸಲು ಬಿಡುವುದಿಲ್ಲ. ಪ್ರಾಣವನ್ನಾದರೂ ಕೊಟ್ಟು ನಮ್ಮ ಹೋರಾಟ ನಡೆಸಿ, ನವುಲೆ ಕೆರೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಪರಿಸರಾಸಕ್ತರು ಹೇಳಿದರು.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕುರಿತು ಮಾತನಾಡಿದ ನಾಗರೀಕ ಹಿತರಕ್ಷಣಾ ವೇದಿಕೆಯ ಕೆ.ವಿ. ವಸಂತ್ ಕುಮಾರ್, ಕೆರೆ ಉಳಿಸಿಕೊಂಡು ರಸ್ತೆ ಮಾಡ ಬೇಕೆಂಬುದು ನಮ್ಮ ಅಭಿಪ್ರಾಯ. ಕೆರೆ ಉಳಿಸಿಕೊಳ್ಳಲು ಕಾನೂನು ಹೋರಾಟಕ್ಕೂ ಸಿದ್ದ ಎಂದರು.
೩೧ ಎಕರೆ ಇದ್ದ ಕೆರೆ ಜಾಗದಲ್ಲಿ ೨೬ ಎಕರೆ ಯನ್ನು ಕೆಎಸ್‌ಸಿಎ ಕ್ರಿಕೆಟ್ ಮೈದಾನಕ್ಕೆಂದು ನೀಡಿದ್ದರಿಂದ ಈಗ ಕೇವಲ ೧ಮುಕ್ಕಾಲು ಎಕರೆ ಕೆರೆ ಉಳಿದುಕೊಂಡಿದೆ. ಈಗ ಅಕ್ರಮವಾಗಿ ಕೆರೆ ಜಾಗದಲ್ಲಿ ರಸ್ತೆ ಅಗಲೀ ಕರಣ ಮಾಡಿ ಇರುವ ಕೆರೆಯನ್ನು ಮುಚ್ಚುವ ಪ್ರಯತ್ನ ನಡೆದಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದರೂ ಸ್ಪಂದಿಸುತ್ತಿಲ್ಲ, ಜಿಲ್ಲಾಧಿಕಾರಿಗಳು ಕೆರೆ ಉಳಿಸಿಕೊಳ್ಳಲು ಅಗತ್ಯ ಕಾನೂನು ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕೆರೆ ಜಾಗದಲ್ಲಿ ಕಾಮಗಾರಿ ನಡೆಸಲು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್‌ನ ಒಪ್ಪಿಗೆ ಬೇಕು. ಆದರೆ ಇಲ್ಲಿ ಒಪ್ಪಿಗೆ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಮುಖ್ಯವಾಗಿ ಕೆರೆಯನ್ನು ಉಳಿಸಿಕೊಂಡು ೮೦ ಅಡಿ ರಸ್ತೆ ಮಾಡಲು ಅವಕಾಶವಿದ್ದಾಗಿಯೂ ಕೆರೆ ಜಾಗವನ್ನೇ ರಸ್ತೆಗಾಗಿ ಒತ್ತುವರಿ ಮಾಡಲಾ ಗುತ್ತಿದೆ. ಮತ್ತೊಂದೆಡೆ ಇರುವ ಕೆರೆ ದಂಡೆ ಯನ್ನು ಬಳಸಿಕೊಂಡು ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಮಾಡಬಹುದಾಗಿದೆ. ಕೆರೆ ಜಾಗದಲ್ಲಿ ಕ್ಲಬ್ ಹೌಸ್ ಕಟುವ ಉದ್ದೇಶ ಇದ್ದು, ಇದಕ್ಕೆ ಎಂದಿಗೂ ಅವಕಾಶ ನೀಡು ವುದಿಲ್ಲ ಎಂದರು.
ಈ ಬಗ್ಗೆ ಸಂಬಂಧ ಪಟ್ಟ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟರೂ ಕೆರೆ ಜಾಗದಲ್ಲಿ ರಸ್ತೆ ಮಾಡಲಾಗುತ್ತಿದೆ ಎಂದ ಅವರು, ಈಗ ಇರುವ ಕೆರೆಯನ್ನು ಉಳಿಸಿ ಕೊಂಡರೆ ಈ ಭಾಗದ ಅಂತರ್ ಜಲ ಹೆಚ್ಚುತ್ತದೆ, ಉಷ್ಣಾಂಶ ಕಡಿಮೆಯಾಗುತ್ತದೆ, ಪ್ರಾಣಿ ಪಕ್ಷಿಗಳಿಗೆ ನೀರಿನ ಮೂಲವಾಗುತ್ತದೆ. ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸಿದಲ್ಲಿ ನಗರದ ಸೌಂದ ರ್ಯವೂ ಹೆಚ್ಚುವುದು ಎಂದು ಕೆರೆ ಉಳಿಸು ವುದರ ಪ್ರಯೋಜನವನ್ನು ತಿಳಿಸಿದರು.
ಕೆರೆ ಕಬಳಿಕೆ ಮಾಡಿ ರಸ್ತೆ ಮಾಡುತ್ತಿ ರುವುದು ಕಾನೂನು ಬಾಹಿರವಾಗಿದೆ. ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾನೂನು ೨೦೧೫ರಲ್ಲಿ ಅಪರಾಧ ಮತ್ತು ತಪ್ಪಿತಸ್ಥರಿಗೆ ೩ ರಿಂದ ೫ ವರ್ಷಗಳ ಶಿಕ್ಷೆ ಇದೆ. ಪಾಲಿಕೆಯ ಅನುಮತಿ ಪಡೆಯದೆ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಈ ರಸ್ತೆಗೆ ವಿಶ್ವ ಬ್ಯಾಂಕಿನ ಹಣ ಬಳಸುತ್ತಿದ್ದು, ಬ್ಯಾಂಕಿನ ನಿಯಮದ ಪ್ರಕಾರವೂ ರಸ್ತೆಗಾಗಿ ಕೆರೆಗಳನ್ನು ಕಬಳಿಸುವಂತಿಲ್ಲ ಎಂದರು.
ಒಂದು ವರ್ಷದ ಹಿಂದೆ ಈ ರಸ್ತೆ ಕಾಮಗಾರಿ ಆರಂಭಿಸಿದ್ದಾಗ ವಿರೋಧಿಸಿದ್ದೇವು, ಆಗ ಶಾಸಕರು ಕಾಮಗಾರಿ ನಿಲ್ಲಿಸಲು ಸೂಚಿಸಿ ಕರೆ ರಕ್ಷಿಸುವುದಾಗಿ ಹೇಳಿದ್ದರು. ಆದರೆ ಈಗ ಮತ್ತೆ ಕೆರೆ ಒತ್ತುವರಿ ಮಾಡಿ ರಸ್ತೆ ಮಾಡಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ನಗರದ ವಿವಿಧ ಸಂಘಟನೆಗಳ ಪ್ರಮುಖರಾದ ಅಶೋಕ್ ಯಾದವ್, ಡಾ. ಚಿಕ್ಕಸ್ವಾಮಿ, ಜನಾರ್ಧನ್ ಪೈ, ಪ್ರಭಾಕರ ನಾಯಕ್, ಚಂದ್ರಶೇಖರ್, ಸೀತಾರಾಮ್, ವೆಂಕಟಗಿರಿ ಮತ್ತಿತರರಿದ್ದರು.