ದಾವಣಗೆರೆ: ಜಿಲ್ಲೆಯ ನ್ಯಾಮತಿಯಲ್ಲಿ ಒಂದೇ ದಿನ 6 ಮನೆಗಳು ಹಾಗೂ ಎರಡು ದೇವಸ್ಥಾನಗಳಲ್ಲಿ ದರೋಡೆಕೋರರ ಗುಂಪೊಂದು ಸರಣಿಗಳ್ಳತನ ಮಾಡಿದೆ.
ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ದರೋಡೆಕೋರರ ಗುಂಪು ರಾತ್ರಿ ವೇಳೆ ಇಡೀ ಪಟ್ಟಣವನ್ನು ಸುತ್ತಾಡಿ 6 ಮನೆಗಳಲ್ಲಿ ಕಳ್ಳತನ ಮಾಡಿದೆ. ನ್ಯಾಮತಿಯ ಕಾಳಮ್ಮ ಬೀದಿಯ ಕಾಳಮ್ಮ ಮತ್ತು ನೆಹರೂ ರಸ್ತೆಯಲ್ಲಿರುವ ಮೂಕಾಂಬಿಕ ದೇವಸ್ಥಾನಗಳಲ್ಲಿ ದರೋಡೆ ಮಾಡಿದೆ.
ರಾಜಪ್ಪ ಎಂಬವರ ಮನೆಯಿಂದ ಐದು ತೊಲದ ಬಂಗಾರ ಹಾಗೂ ನಗದು, ಮಾರಿಗುಡಿ ಬೀದಿಯ ಸಾವಿತ್ರಮ್ಮ ಎಂಬವರ ಮನೆಯಿಂದ 80 ,000 ನಗದು, ಗಡೇಕಟ್ಟೆ ಯಶೋಧಮ್ಮ ಎಂಬವರ ಮನೆಯಿಂದ 200 ಗ್ರಾಂ ಬೆಳ್ಳಿ ಮತ್ತು 15,000 ರೂ. ಹಣವನ್ನು ದರೋಡೆಗೈದಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.