Wednesday, September 18, 2024
Google search engine
Homeಅಂಕಣಗಳುಲೇಖನಗಳುನಗರದ ಭ್ರಷ್ಠಾಚಾರ-ಅಕ್ರಮಗಳ ಬಗ್ಗೆ ಕ್ರಮಕೈಗೊಳ್ಳಿ : ಕೆ.ವಿ.ವಸಂತ್‌ಕುಮಾರ್

ನಗರದ ಭ್ರಷ್ಠಾಚಾರ-ಅಕ್ರಮಗಳ ಬಗ್ಗೆ ಕ್ರಮಕೈಗೊಳ್ಳಿ : ಕೆ.ವಿ.ವಸಂತ್‌ಕುಮಾರ್

 

ಶಿವಮೊಗ್ಗ : ನಗರದಲ್ಲಿ ನಡೆದಿರುವ ಹಲವಾರು ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತು ದೂರುಗಳನ್ನು ನೀಡಿದ್ದರೂ ಸಹ ಸ್ಪಂದಿಸದೆ, ನಿರ್ಲಕ್ಷ್ಯ ಹಾಗೂ ತಾತ್ಸಾರದ ಮೂಲಕ ಅಕ್ರಮಗಳಿಗೆ ಪೋಷಕರಂತೆ ಜಿಲ್ಲಾಡಳಿತ ನಡೆದುಕೊಂಡಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಆರೋಪಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟ ನೀಡಿರುವ ದೂರುಗಳಿಗಾಗಲಿ ಅಥವಾ ಅಂತಹ ಪ್ರಕರಣಗಳಲ್ಲಿ ಸರ್ಕಾರ ವರದಿ ಕೇಳಿದ್ದರೂ ನೀಡದೆ ಅತ್ಯಂತ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ ನಡವಳಿಕೆ. ಇಂತಹ ನಡವಳಿಕೆಯಿಂದ ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ತಾಂಡವ ವಾಡಲು ಕಾರಣವಾಗಿದೆ ಎಂದರು.
ಮಹಾನಗರ ಪಾಲಿಕೆ ನೌಕರರ ಮೇಲೆ ನೀಡಿರುವ ದೂರುಗಳ ಮೇಲೆ ಪೌರಾಡಳಿತ ಇಲಾಖೆ ನಿರ್ದೇಶಕರು ಕಳೆದ ಏಪ್ರಿಲ್‌ನಲ್ಲೇ ವರದಿ ಕೇಳಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇದರ ಮೇಲೆ ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಹಿಂದಿನ ಆಯುಕ್ತೆ ತುಷಾರಮಣಿ ಮೇಲೆ ನೀಡಿರುವ ಎರಡು ದೂರುಗಳ ಮೇಲೆ ಪೌರಾಡಳಿತ ಇಲಾಖೆಯ ನಿರ್ದೇಶಕರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿ ಹತ್ತು ತಿಂಗಳಾದರೂ ವರದಿ ನೀಡುವ ಸಣ್ಣ ಪ್ರಯತ್ನವನ್ನು ಜಿಲ್ಲಾಧಿಕಾರಿಗಳು ಮಾಡದೇ ಇರುವುದು ನೋವು ತಂದಿದೆ ಎಂದರು.
ವಿದ್ಯಾನಗರ ಮುಖ್ಯ ರಸ್ತೆ ನಿರ್ಮಾಣವಾಗಿ ಕೇವಲ ೪ ತಿಂಗಳಲ್ಲಿ ಹತ್ತಾರು ಗುಂಡಿಗಳಾಗಿರುವ ಬಗ್ಗೆ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಹಾಗೆ ಮಾಡದೆ ದೂರಿನ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಕಾಲಮಿತಿಯೊಳಗೆ ವರದಿ ಕೇಳದೆ ದೂರನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಕಳುಹಿಸಿಕೊಡಲಾಗಿದೆ. ನಗರೋತ್ಥಾನ ಪ್ಯಾಕೇಜ್ ೨೬ರಲ್ಲಿ ೫೦ ಲಕ್ಷ ರೂ.ಗಳಲ್ಲಿ ನಡೆದ ಡ್ರೈನೇಜ್ ಕಾಮಗಾರಿ ಕಳಪೆ ಬಗ್ಗೆ ದೂರು ನೀಡಿದ್ದು, ಈ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿತ್ತು. ದೂರಿನ ಬಗ್ಗೆ ತನಿಖೆ ನಡೆಸದೆ ವರದಿಯನ್ನು ಪಾಲಿಕೆಗೆ ಕಳುಹಿಸಿರು ವುದು ನೋವಿನ ಸಂಗತಿ ಎಂದರು.
ಮಾಜಿ ಮೇಯರ್ ಮರಿಯಪ್ಪ ಲಕ್ಷಾಂತರ ರೂ. ತೆರಿಗೆ ವಂಚಿಸಿರುವ ಬಗ್ಗೆ ದೂರು ನೀಡಿ ದ್ದರೂ ಸಹ ನಷ್ಟದ ನಿಖರವಾದ ಅಂದಾಜು ಮಾಡಲು ಅಥವಾ ವಸೂಲಾತಿಗೆ ಪ್ರಯತ್ನಿಸ ದಿರುವುದು ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ಯಾಗಿದೆ ಹಾಗೂ ಮರಿಯಪ್ಪ ಅವರು ೨೦೧೩ರ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿರುವುದು ರುಜುವಾತಾಗಿ ಒಂದು ವರ್ಷವಾಗಿದ್ದರೂ ಜಿಲ್ಲಾಧಿಕಾರಿಗಳಾ ಗಲಿ ಅಥವಾ ತಹಶೀಲ್ದಾರ್‌ರವರಾಗಲಿ ಪೊಲೀಸ್ ಇಲಾಖೆಗೆ ದೂರು ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ಆಲ್ಕೊಳದ ೫೦ ಅಡಿ ರಸ್ತೆಯನ್ನು ಪ್ರಮು ಖರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರೂ ಅದನ್ನು ತೆರವುಗೊಳಿಸಲು ಸಣ್ಣ ಪ್ರಯತ್ನ ಜಿಲ್ಲಾಧಿಕಾರಿಗಳಿಂದ ನಡೆದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖ ರಾದ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್ ಕುಮಾರ್, ಅಶೋಕ್ ಯಾದವ್, ಬಿ.ಎಸ್.ನಾಗರಾಜ್, ಪರಿಸರ ರಮೇಶ್, ಸೀತಾರಾಮ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments