ಅಧ್ಯಕ್ಷರಾಗಿ ಕೆ.ವಿ.ಶಿವಕುಮಾರ್- ಪ್ರಧಾನ ಕಾರ್ಯದರ್ಶಿಯಾಗಿ ವೈದ್ಯ

ಶಿವಮೊಗ್ಗ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕವಾದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೧೮-೨೧ರ ಸಾಲಿನ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘದ ಅಧ್ಯಕ್ಷರಾಗಿ ನಮ್ಮನಾಡು ಪತ್ರಿಕೆಯ ಸಂಪಾದಕ ಕೆ.ವಿ. ಶಿವಕುಮಾರ್, ಹಾಗೂ ಪ್ರಧಾನಕಾರ್ಯದರ್ಶಿಯಾಗಿ ದಿ ಹಿಂದೂ ಪತ್ರಿಕೆಯ ಛಾಯಾಗ್ರಾಹಕ ವೈದ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ, ವಿಜಯಕರ್ನಾಟಕ ಪತ್ರಿಕೆಯ ಎಂ. ನಿಂಗನ ಗೌಡ, ಗ್ರಾಮಾಂತರ ಉಪಾಧ್ಯಕ್ಷರಾಗಿ ಸಾಗರದ ಚಾರ್ವಾಕ ಪತ್ರಿಕೆಯ ಹೆಚ್. ಬಿ.ರಾಘವೇಂದ್ರ, ಗ್ರಾಮಾಂತರ ಕಾರ್ಯದರ್ಶಿಗಳಾಗಿ ವಿಜಯವಾಣಿ ಪತ್ರಿಕೆಯ ಸಾಗರ ವರದಿಗಾರ ದೀಪಕ್ ಸಾಗರ್, ಜನಹೋರಾಟ ಪತ್ರಿಕೆಯ ಶಿಕಾರಿಪುರ ವರದಿಗಾರ ಹುಚ್ಚರಾಯಪ್ಪ ಆಯ್ಕೆಯಾಗಿದ್ದಾರೆ.
ಸಂಘದ ಖಜಾಂಚಿಯಾಗಿ ನಮ್ಮನಾಡು ಪತ್ರಿಕೆಯ ಜಗದೀಶ್ ಸಂಪಳ್ಳಿ, ರಾಜ್ಯ ಗ್ರಾಮಾಂತರ ಕಾರ್ಯದರ್ಶಿಯಾಗಿ ಸಾಗರದ ಸಾಗರ ಪ್ರಭ ಪತ್ರಿಕೆಯ ಹಿತಕರ ಜೈನ್ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಪಾದಕ ಎನ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ನಿರ್ದೇಶಕರಾಗಿ ಶಿವಮೊಗ್ಗ ಟೈಮ್ಸ್‌ನ ಪತ್ರಿಕೆಯ ವಿ.ಟಿ.ಅರುಣ್, ರಾಜ್ ನ್ಯೂಸ್‌ನ ಬಿ.ಪಿ.ಅರವಿಂದ್, ಮಲೆನಾಡು ಎಕ್ಸ್‌ಪ್ರೆಸ್‌ನ ಶಿ.ಜು.ಪಾಶ, ಬೆಳಗಿನ ವಿಧಾತಪತ್ರಿಕೆಯ ಸುಧೀರ್‌ಕುಮಾರ್, ಸೂರ್ಯಗಗನ ಪತ್ರಿಕೆಯ ಗಾ.ರಾ. ಶ್ರೀನಿವಾಸ್, ವಿಜಯವಾಣಿ ಪತ್ರಿಕೆಯ ಜಿ.ಗಜೇಂದ್ರ ಗುಡಾಲ್ಕರ್, ಸುವರ್ಣ ಪ್ರಭದ ಎಸ್.ಬಿ.ಅರುಣ್‌ಕುಮಾರ್, ಅಜೇಯ ಪತ್ರಿಕೆಯ ಎಸ್.ಬಾಲಕೃಷ್ಣ ಭಟ್, ನಮ್ಮನಾಡು ಪತ್ರಿಕೆಯ ಜಿ.ಸಿ.ಸೋಮಶೇಖರ್, ನಾವಿಕ ಪತ್ರಿಕೆಯ ಎಸ್.ಆರ್.ರಂಜಿತ್, ಈ ಪತ್ರಿಕೆಯ ನಾಗೇಶ್ ನಾಯ್ಕ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀನಿವಾಸ್ ಪ್ರಕಟಿಸಿದ್ದಾರೆ.
ರಾಜ್ಯ ಸಂಘಕ್ಕೂ ಸಹ ಅವಿರೋಧ ಆಯ್ಕೆ ನಡೆದಿದ್ದು, ರಾಜ್ಯ ಅಧ್ಯಕ್ಷರಾಗಿ ಎನ್.ರಾಜು, ಉಪಾಧ್ಯಕ್ಷರಾಗಿ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಬಿ.ಮದನ್‌ಗೌಡ, ಕಾರ್ಯದರ್ಶಿಯಾಗಿ ಜಿ.ಸಿ.ಲೋಕೇಶ್, ಖಜಾಂಚಿಯಾಗಿ ಡಾ.ಕೆ. ಉಮೇಶ್ವರ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸಂಘದ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
ಗ್ರಾಮಾಂತರ ಉಪಾಧ್ಯಕ್ಷ ಹುದ್ದೆಯ ಎರಡು ಸ್ಥಾನಗಳಿಗೆ ಚುನಾವಣೆ ನಿಗಧಿಯಾಗಿದ್ದು, ಆ.೫ರಂದು ಮತದಾನ ನಡೆಯಲಿದೆ. ಇದನ್ನು ಹೊರತುಪಡಿಸಿ, ಉಳಿದೆಲ್ಲ ಸ್ಥಾನಗಳಿಗೆ ಅವಿರೋಧವಾಗಿಯೇ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಜಿಲ್ಲೆಯ ಪತ್ರಕರ್ತ ಸಮೂಹ ಹಾರ್ದಿಕವಾಗಿ ಅಭಿನಂದಿಸಿದೆ.