ಸಿಎಂಗೆ ಕ್ಲೀನ್ ಚಿಟ್: ಕೆಎಸ್‌ಈ ವ್ಯಂಗ್ಯ

ಶಿವಮೊಗ್ಗ: ನಿರೀಕ್ಷೆಯಂತೆ ಅರ್ಕಾ ವತಿ ಡಿನೋಟಿಫಕೇಶನ್ ಪ್ರಕರಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿ ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ನ್ಯಾಯ ಮೂರ್ತಿ ಕೆಂಪಣ್ಣ ಆಯೋಗವನ್ನು ರಚಿಸಲಾಗಿತ್ತು. ಇದೀಗ ಆಯೋಗ ವರದಿ ಸಲ್ಲಿಕೆ ಮಾಡಿದ್ದು, ವರದಿ ಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ತಮ್ಮ ಪರವಾಗಿ ಮಾಡಿಸಿ ಕೊಂಡಿದ್ದಾರೆ. ಕೆಳಹಂತದ ಅಕಾರಿಗಳಿಂದ ಲೋಪವಾಗಿದೆ ಎಂದು ಪ್ರಕರಣದಿಂದ ಮುಖ್ಯಮಂತ್ರಿಗಳು ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ದೂರಿದರು.
ಸುಮಾರು ೫೪೪ ಎಕರೆ ೩೪ ಗುಂಟೆ ಅರ್ಕಾವತಿ ಬಡಾವಣೆ ನಿರ್ಮಿಸಲು ಸರ್ಕಾರ ಬಳಸಿಕೊಂಡ ಭೂಮಿ ಯಾಗಿದೆ. ಇದರಲ್ಲಿ ೧೦ ಸಾವಿರ ಕೋಟಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಸಿದ್ದರಾಮಯ್ಯರ ಮೇಲಿತ್ತು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಾಯಿಸಿತ್ತು ಎಂದರು.
ಆದರೆ ಸರ್ಕಾರ ಆಯೋಗವನ್ನು ರಚನೆ ಮಾಡಿತ್ತು. ಇದೀಗ ಆಯೋಗ ವರದಿ ನೀಡಿದ್ದು, ವರದಿಯಲ್ಲಿ ೪೪ದಾಖಲೆಗಳು ಕಳವು ಆಗಿರುವ, ನಕಲಿ ಸಹಿ ಬಗ್ಗೆನೂ ಉಲ್ಲೇಖ ವಾಗಿದೆ. ಹಾಗಾಗಿ ಸಿ.ಎಂ.ಸಿದ್ದ ರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಚುನಾ ವಣೆಗೆ ಹೋಗಬೇಕು, ಇಲ್ಲವೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಕೇಂದ್ರ ವಿ ವಿಜ್ಞಾನ ಪ್ರಯೋಗಾಲಯ ವರದಿಯ ಮಾಧ್ಯಮಗಳಲ್ಲಿ ಬಹಿ ರಂಗಗೊಂಡಿದ್ದು, ಕೆಲವು ದಾಖಲೆ ಗಳನ್ನು ಹಾಗೂ ಸಾಕ್ಷ್ಯಾಧಾರಗಳನ್ನು ನಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದರು.
ವಿ ವಿಜ್ಞಾನ ಪ್ರಯೋಗಾಲ ಯದ ಅಂಶವನ್ನು ಮುಖ್ಯಮಂತ್ರಿ ಗಳು ಗಮನಿಸಬೇಕು. ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕಾಗಿಯೇ ಸಿಐಡಿಯಿಂದ ಆತುರವಾಗಿ ಬಿ ರಿಪೋರ್ಟ್ ತರಿಸಿ ಕೊಂಡಿದ್ದರು. ನಂತರ ಸಾಕ್ಷ್ಯಾ ಧಾರದ ಕೊರತೆಯಿಂದ ಮುಚ್ಚಿಹಾಕಿ ದ್ದರು. ಇದೀಗ ಸಾಕ್ಷ್ಯಾಧಾರವನ್ನು ನಾಶಪಡಿಸಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಿಫೋರ್ ಸಮೀಕ್ಷೆಯಲ್ಲಿ ಚುನಾವಣೆ ನಡೆದಲ್ಲಿ ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬರುತ್ತದೆ ಎಂದು ವರದಿ ಬಂದಿರುವುದು ನಿಜ. ಆದರೆ ಇದು ಮುಖ್ಯಮಂತ್ರಿಗಳ ಕಛೇರಿಯಿಂದಲೇ ಬಂದಂತಹ ವರದಿ ಎಂದು ಈಗಾಗಲೆ ಕೇಳಿಬರುತ್ತಿದೆ ಎಂದು ಲೇವಡಿ ಮಾಡಿದರು.
ಉತ್ತರ ಪ್ರದೇಶದಲ್ಲೂ ಇದೇ ರೀತಿ ಸಮೀಕ್ಷೆ ಬಿತ್ತರಗೊಂಡಿತ್ತು. ಬಿಜೆಪಿ ಕೇವಲ ೧೭೮ ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಆದರೆ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಏಕಪಕ್ಷ ಅಕಾರಕ್ಕೆ ಬಂದಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಸಮಯವಿದೆ. ಮತದಾರರು ಯಾವ ಪಕ್ಷ ಅಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್‌ಗೆ ಏಕೆ ಪ್ರಮಾಣಪತ್ರ ನೀಡಿದ್ದಾರೋ ಗೊತ್ತಿಲ್ಲ. ಆದಾಯ ತೆರಿಗೆ ಇಲಾಖೆ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದಾಗ ಕೋಟ್ಯಾಂತರ ರೂ. ಹಣ ದೊರಕಿರುವುದು ಮಾಧ್ಯಮಗಳಿಂದ ಬೆಳಕಿಗೆ ಬಂದಿದೆ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಅಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಡಿ.ಕೆ. ಶಿವಕುಮಾರ್‌ಗೆ ಪ್ರಮಾಣಪತ್ರ ನೀಡಿರುವುದು ಏಕೆ..? ಇದನ್ನು ಹೆಚ್.ಡಿ. ಕುಮಾರಸ್ವಾಮಿಯೇ ಸ್ಪಷ್ಟಪಡಿಸಿಬೇಕಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಡಿ.ಎಸ್.ಅರುಣ್, ರುದ್ರೆಗೌಡ, ದತ್ತಾತ್ರಿ, ಚನ್ನಬಸಪ್ಪ, ಮಾಜಿ ಶಾಸಕ ಕುಮಾರ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.