‘ಬಲಿಜ ಸಮಾಜ ಬಲಿಷ್ಠವಾಗಲಿ’ : ಕೆಎಸ್‌ಈ

ಶಿವಮೊಗ್ಗ : ಜಿಲ್ಲೆಯಲ್ಲಿ ಬಲಿಜ ಸಮಾಜ ಬಲಿಷ್ಠವಾಗುವ ಅಗತ್ಯ ಇದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಬಲಿಜ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಯೋಗಿ ನಾರೇಯಣ ಬಲಿಜ ಸಮು ದಾಯ ಭವನದ ಗುದ್ದಲಿ ಪೂಜೆ ಹಾಗೂ ಶ್ರೀ ಕೈವಾರ ತಾತಯ್ಯನವರ ೧೮೩ನೇ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಲಿಜ ಸಮಾಜ ಅಸಂಘಟಿತ ವಾಗಿದ್ದು, ಸಂಘಟಿತರಾಗುವ ಮೂಲಕ ಬಲಿಷ್ಠ ಸಮುದಾಯವಾಗುವ ಅನಿವಾರ್ಯತೆ ಇದೆ ಎಂದರು.
ಸಮಾಜದಲ್ಲಿ ಸಾಕಷ್ಟು ಸಂಖ್ಯೆ ಯಲ್ಲಿ ಶ್ರೀಮಂತರಿದ್ದಾರೆ. ಅದೇ ರೀತಿ ಈ ಸಮುದಾಯದಲ್ಲಿ ಬಡ ವರೂ ಸಹ ಇದ್ದಾರೆ. ಶ್ರೀಮಂತರು ಬಡವರ ಬಗ್ಗೆ ಗಮನಹರಿಸಿ, ಅವರೂ ಸಹ ಆರ್ಥಿಕ ವಾಗಿ ಸಬಲರಾಗುವ ನಿಟ್ಟಿನಲ್ಲಿ ಮುಂದಾ ಗಬೇಕೆಂದು ಕರೆ ನೀಡಿದರು.
ಶಿವಮೊಗ್ಗ ನಗರದಲ್ಲಿ ಬಲಿಜ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ೫೦ ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಭವನ ನಿರ್ಮಾಣಕ್ಕೆ ಬೇಕಾದಂತಹ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಸಮಾಜಕ್ಕೆ ಸಮುದಾಯ ಭವನದ ನಿರ್ಮಾಣ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಇಂದು ಈ ಭವನ ನಿರ್ಮಾ ಣಕ್ಕೆ ಗುದ್ದಲಿಪೂಜೆ ನೆರವೇರಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಯ ಶ್ರೀನಿವಾಸನ್, ಎಂ.ಆರ್. ಜಯ ರಾಮ್, ಸುಂದರ್, ರಾಘವೇಂದ್ರ, ಶಿವಕುಮಾರ್, ರಂಜಿತ್, ಜಿ.ನಾಗರಾಜು, ವೆಂಕಟೇಶ್ ನಾಯ್ಡು ಸೇರಿದಂತೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here